ರಾಜಧಾನಿಯಲ್ಲಿ 'ಕರಗದ' ಮಹೋತ್ಸವ

ಚೈತ್ರ ಹುಣ್ಣಿಮೆಯ ದಿನ ನಡೆಯುವ ಕರಗದ ವೀಕ್ಷಣೆಗೆ ಬೆಂಗಳೂರಿಗರ ಜತೆಗೆ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ಕರಗ ಮಹೋತ್ಸವ 11 ದಿನಗಳ ಆಚರಣೆಯದ್ದಾಗಿದೆ. ಚೈತ್ರ ಶುಕ್ಲ ಸಪ್ತಮಿಯಿಂದ ಆರಂಭವಾಗಿ ಬಿದಿಗೆಯವರೆಗೆ. ಅಂದರೆ ಇಂದು ಕೊನೆಯ ದಿನ. ರಾತ್ರಿ ಆಚರಣೆ ಇದರ ವಿಶೇಷ.
ಕರಗ ಹೊತ್ತವರ ಅಕ್ಕ-ಪಕ್ಕ ಇರುವ ವೀರಕುಮಾರರು ಗೋವಿಂದಾ, ಗೋವಿಂದಾ ಎನ್ನುವುದು ಎಂಥವರಲ್ಲೂ ಭಕ್ತಿ-ಭಾವ ಹೊಮ್ಮಿಸುತ್ತದೆ. ಶ್ರದ್ಧೆ ಮತ್ತು ಭಕ್ತಿಯ ಪರಾಕಾಷ್ಠೆಯಲ್ಲಿ ಕೂಡಿದ ಈ ಮಹೋತ್ಸವದಲ್ಲಿ ದ್ರೌಪದಿಯ ಮೂರ್ತಿಯನ್ನು ಹೊತ್ತುಕೊಳ್ಳುವ ಗೌರವ ಈ ಬಾರಿಯೂ ಸಿ.ಎಂ. ಲೋಕೇಶ್ ಅವರದ್ದಾಗಿದೆ.
ಕೇಂಪೇಗೌಡರ 500ನೇ ಜಯಂತ್ಯುತ್ಸವ: ತಳಿರು ತೋರಣಗಳಿಂದ ಅಲಂಕೃತಗೊಂಡ ಕಟ್ಟಡಗಳು, ಎಲ್ಲೆಡೆ ರಾರಾಜಿಸುತ್ತಿರುವ ಬಾವುಟಗಳು, ಝಗಮಗಿಸುವ ವಿದ್ಯುತ್ ದೀಪಾಲಂಕಾರ, ಎಲ್ಲೆಲ್ಲೂ ಕೆಂಪೇಗೌಡ ಭಾವಚಿತ್ರಗಳ ಮಿಂಚು, ಒಟ್ಟಾರೆ ಹಬ್ಬದ ವಾತಾವರಣ. ಇದು ನಾಡಪ್ರಭು ಕೆಂಪೇಗೌಡರ ದಿನಾಚರಣೆಗೆ ಅದ್ದೂರಿಯಾಗಿ ಸಿಂಗಾರಗೊಂಡಿರುವ ಬೆಂಗಳೂರು ನಗರದ ಇಂದಿನ ಝಲಕ್. ಇದಕ್ಕೆ ಪುಟವಿಟ್ಟಂತೆ ಇಂದು ಧರ್ಮರಾಯನ ಕರಗವೂ ಮಿಳಿತವಾಗಿದೆ.
ಬಿಬಿಎಂಪಿ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಕೆಂಪೇಗೌಡರ ದಿನಾಚರಣೆ ನಡೆಯುತ್ತಿದೆ. ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಭಾನುವಾರ ಸಂಜೆ ಮೇಯರ್ ಎಸ್.ಕೆ. ನಟರಾಜ್ ಅವರು ಕೇಂಪೇಗೌಡ ದಿನಾಚರಣೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ, ಐಟಿ-ಬಿಟಿ ಕ್ಷೇತ್ರದಲ್ಲಿನ ಅಂತಾರಾಷ್ಟ್ರೀಯ ಮಟ್ಟದ ಬೆಳವಣಿಗೆಯ ಸಮ್ಮುಖದಲ್ಲಿ ನಗರದ ಐತಿಹಾಸಿಕ ಪರಂಪರೆ ಎತ್ತ ಸಾಗಿದೆ ಎಂಬ ಪ್ರಶ್ನೆ ಮೂಡಿದೆ.











Click it and Unblock the Notifications