ರತನ್ ಟಾಟಾ ಜೀವನದಲ್ಲಿ ನಡೆದ ಪ್ರೇಮ ಪ್ರಸಂಗಗಳು
ಮುಂಬೈ,
ಏಪ್ರಿಲ್ 14: ಯಾರೋ ಒಬ್ಬರಿಗೆ ಪತಿಯಾಗಿರುವ ಬದಲು ಜೀವನಪರ್ಯಂತ ಉದ್ಯಮದ ಪತಿಯಾಗಿಯೇ ಉಳಿಯುವ ತೀರ್ಮಾನ ತೆಗದುಕೊಂಡಿದ್ದೆ. ಅದಕ್ಕೆ ನಾಲ್ಕು ಬಾರಿ ಗಟ್ಟಿ ಮೇಳದ ಸದ್ದು ಕಿವಿಗೆ ಬಿದ್ದರೂ ಒಲ್ಲೆ ಎಂದಿರುವೆ ಎಂದು ಖಡಕ್ ಬ್ರಹ್ಮಚಾರಿ ರತನ್ ಟಾಟಾ ತಮ್ಮ ಬ್ರಹ್ಮಚರ್ಯದ ಗುಟ್ಟನ್ನು ಈ ಇಳಿವಯಸ್ಸಿನಲ್ಲಿ ಬಹಿರಂಗಪಡಿಸಿದ್ದಾರೆ. id="toptextpromo">ಕಾಯಕವೇ
ಕೈಲಾಸ ಎಂದು ಅಜ್ಜ ನೆಟ್ಟ ಉದ್ಯಮಕಾಗಿಯೇ ಜೀವನವನ್ನು ಮುಡಿಪಿಟ್ಟಿರುವ ರತನ್ ಟಾಟಾ, ಅಮೆರಿಕದ ಟಿವಿ ಚಾನೆಲ್ ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಖಾಸಗಿ ಜೀವನದ ಹಲವು ಮಜಲುಗಳನ್ನು ತೆರೆದಿಟ್ಟಿದ್ದಾರೆ. 'ನಿಜ್ಜಾ ಹೇಳ್ತಿದ್ದೀನಿ ಕೇಳಿ. ನಾಲ್ಕು ಬಾರಿ ನಾನೂ ಪ್ರೇಮಪಾಶದಲ್ಲಿ ಸಿಲುಕಿದ್ದೆ. ಅದು ಮದ್ವೆ ಹಂತದವರೆಗೂ ಬಂತು. ಆದರೆ ... ಎಂದು 73 ವರ್ಷದ ಟಾಟಾ ನಸುನಗುತ್ತಾ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>'1960ರ
ಕಾಲ ಅಮೆರಿಕದಲ್ಲಿದ್ದೆ. ಅಲ್ಲೊಂದು ಪ್ರೇಮ ಪ್ರಸಂಗ ನಡೆಯಿತು. ಅದೇ ವೇಳೆ ಭಾರತ-ಚೀನಾ ಮಧ್ಯೆ ಯುದ್ಧ ನಡೆದಿತ್ತು. ಅಮೆರಿಕದವಳಾಗಿದ್ದ ಆಕೆ ಅಪ್ಪಟ ಅಮೆರಿಕನ್ ಶೈಲಿಯಲ್ಲಿ ಯುದ್ಧದ ವೇಳೆ ಭಾರತಕ್ಕೆ ಬರಲೊಲ್ಲೆ ಎಂದುಬಿಟ್ಟಳು. ಪ್ರೇಮ ಮುರಿದುಬಿತ್ತು. ಅವಳು ಅಮೆರಿಕದವನನ್ನೇ ಮದ್ವೆಯಾದಳು. ಇತ್ತ ನನ್ನ ಜೀವನದಲ್ಲಿ ಇನ್ನೂ ಮೂರು ಬಾರಿ ಹೀಗೆ ಆಯಿತು. ಆದರೆ ಏನೋ ಭಯ ಅಥವಾ ಮತ್ಯಾವುದೋ ಕಾರಣಕ್ಕೆ ಅದಾವುವೂ ಬರಕತ್ತಾಗಲಿಲ್ಲ. ಜೀವನದ ಸಂಧ್ಯಾಕಾಲದಲ್ಲಿ ಹಿಂದುರುಗಿ ನೋಡಿದಾಗ ಸದ್ಯ ಮದ್ವೆ ಆಗದಿದ್ದೇ ವಾಸಿ ಎನಿಸುತ್ತಿದೆ. ಯಾವುದೇ ಪಶ್ಚಾತ್ತಾಪವೂ ನನ್ನ ಮನದಲ್ಲಿ ಮನೆಮಾಡಿಲ್ಲ. ನಿಶ್ಚಿಂತೆಯಿಂದ ಇದ್ದೇನೆ' ಎಂದು ಟಾಟಾ ನಿಟ್ಟುಸಿರುಬಿಟ್ಟಿದ್ದಾರೆ.











Click it and Unblock the Notifications