ಸಿಬಿಐನಿಂದ ಓಎಂಸಿ ಅದಿರಿನ ಗುಣಮಟ್ಟ ಪರೀಕ್ಷೆ

ಮೂಲಗಳ ಪ್ರಕಾರ, ಹೈದರಾಬಾದ್‌ನಿಂದ ಆಗಮಿಸಿರುವ ಸಿಬಿಐ ಅಧಿಕಾರಿಗಳ ತಂಡ ಗುರುವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆಗೆ ಇಳಿದಿದೆ. ಗಡಿ ಪ್ರದೇಶದಲ್ಲಿ ಇರುವ ವಿವಾದಿತ ಆರು ಗಣಿ ಪ್ರದೇಶಗಳಿಗೆ ಮತ್ತು ಕಂಪನಿಗಳಿಗೆ ತಂಡ ಭೇಟಿ ಮಾಡಲಿದೆ ಎನ್ನಲಾಗಿದೆ.
ಈ ತಂಡದಲ್ಲಿ ಸಿಬಿಐ ತನಿಖಾ ಅಧಿಕಾರಿಗಳ ಜೊತೆಯಲ್ಲಿ ಸಿಂಗರೇನಿ ಕಾಲರೀಸ್ ಕಲ್ಲಿದ್ದಲು ಗಣಿ ಕಂಪನಿಯ ಜಿಯಾಲಜಿಸ್ಟ್ ಕೂಡ ಇರಲಿದ್ದು, ತಂಡದ ಸದಸ್ಯರು ವಿವಾದಿತ ಗಣಿಗಳಲ್ಲಿಯ ಕಬ್ಬಿಣದ ಅದಿರಿನ ಗುಣಮಟ್ಟ ಪರೀಕ್ಷೆಯನ್ನು ಎರಡನೇ ಬಾರಿ ನಡೆಸಲಿದ್ದಾರೆ. ಈ ಹಿಂದೆಯೇ ಒಮ್ಮೆ ಕಬ್ಬಿಣದ ಅದಿರಿನ ಗ್ರೇಡ್ ಪರೀಕ್ಷೆ ನಡೆದಿತ್ತು.
ಆಂಧ್ರದ ಅನಂತಪುರಂನ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಟಿ.ವಿ. ಸುಬ್ಬಾರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜರೆಡ್ಡಿ ಮತ್ತು ವಲಯ ಅರಣ್ಯ ಸಂರಕ್ಷಣಾಧಿಕಾರಿ ಕೆ. ನಾರಾಯಣಸ್ವಾಮಿ ನಾಯ್ಡು ಅವರು ತನಿಖಾ ತಂಡಕ್ಕೆ ಅಗತ್ಯ ಮಾಹಿತಿ ನೀಡಲಿದ್ದಾರೆ. ಅದಿರಿನ ಗ್ರೇಡ್ ಪರೀಕ್ಷೆಯ ನಂತರ ಈ ತಂಡ ಕಂಪನಿಗಳ ಕಚೇರಿಗಳಿಗೆ ಭೇಟಿ ನೀಡಿ ದಾಖಲೆ ಪತ್ರಗಳನ್ನು ಪರಿಶೀಲಿಸಲಿದೆ ಎಂದು ಹೇಳಲಾಗಿದೆ.












Click it and Unblock the Notifications