ಕುಡುಕರಿಗೆ ಕಹಿ ಸುದ್ದಿ : ಮದ್ಯ ಬೆಲೆ ಏರಿಕೆ

ಹೀಗಾಗಿ ಬ್ರಾಂದಿ, ವಿಸ್ಕಿ, ಜಿನ್, ರಮ್, ಬಿಯರ್ ವೋಡ್ಕಾ ಮತ್ತೊಂದು ಹೀರುತ್ತಾ ಐಪಿಎಲ್ ಪಂದ್ಯಗಳನ್ನು ಪ್ರತಿ ದಿನ ಸಂಜೆ ಸವಿಯಲು ಸ್ಕೆಚ್ ಹಾಕಿದ್ದ ಯುವ ಜನಾಂಗಕ್ಕೆ ಶಾಕ್ ಆಗಿದೆ. ಕರ್ನಾಟಕ ರಾಜ್ಯ ಅಬಕಾರಿ ನೀತಿಗೆ ತಿದ್ದುಪಡಿ ತಂದು ಮದ್ಯದ ದರವನ್ನು ಏರಿಕೆ ಮಾಡಲು ಆದೇಶಿಸಲಾಗಿದ್ದು, ಏ.1ರಿಂದಲೆ ನೂತನ ದರ ಜಾರಿಗೆ ಬರಲಿದೆ ಎಂದು ರೇಣುಕಾ ಅವರು ಹೇಳಿದ್ದಾರೆ. ಸೋ, ಪ್ರತಿ ಬಾಟಲ್ ಗೆ 1 ರಿಂದ 4 ರೂ.ಗಳ ವರೆಗೆ ಹೆಚ್ಚಳವಾಗಲಿದೆ.
ಇದು ಸಾಲದು ಎಂಬಂತೆ, ಹೊರ ರಾಜ್ಯಗಳಿಂದ ಆಮದು ಮಾಡಿಕೊಳ್ಳುವ ಮದ್ಯದ ಮೇಲೂ ಕೆಲವೊಂದು ತೆರಿಗೆ ಜಡಿಯಲಾಗಿದೆ. ಉತ್ತಮ ಗುಣಮಟ್ಟದ ಮದ್ಯ ಪೂರೈಕೆ ಹಾಗೂ ಇಲಾಖೆ ನಿರ್ವಹಣೆಗೆ ಈ ಹೆಚ್ಚಳ ಅನಿವಾರ್ಯ ಎಂದು ಅಬಕಾರಿ ಇಲಾಖೆ ವಕ್ತಾರರು ಹೇಳಿದ್ದಾರೆ.
ಕಳ್ಳಭಟ್ಟಿ ನಕಲಿ ಮದ್ಯವನ್ನು ಮಟ್ಟ ಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಭದ್ರತಾ ಸಿಬ್ಬಂದಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಹೆಚ್ಚಳ ಅಲ್ಪ ಪ್ರಮಾಣದಾಗಿದ್ದು, ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ ಎಂದು ಸಚಿವ ರೇಣುಕಾಚಾರ್ಯ ಹೇಳಿದರು.
;











Click it and Unblock the Notifications