ಸರ್ಕಾರಕ್ಕೆ ಖಾಸಗಿ ಕಾಲೇಜುಗಳ ಸವಾಲ್

ಬಿಇಗೆ 80,000 ರು ಶುಲ್ಕ ನಿಗದಿ ಪಡಿಸುವಂತೆ ಸರ್ಕಾರಕ್ಕೆ ಕೇಳಿಕೊಳ್ಳಲಾಗಿತ್ತು. ಆದರೆ, 30,000 ರು ನಿಗದಿ ಪಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ವಿಎಸ್ ಆಚಾರ್ಯ ಹೇಳುವುದರ ಮೂಲಕ ಖಾಸಗಿ ಕಾಲೇಜು ಮಂಡಳಿಗಳನ್ನು ಗೇಲಿ ಮಾಡಿದ್ದಂತಾಗಿದೆ. ನಾವು ಇಷ್ಟು ಕಡಿಮೆ ಶುಲ್ಕ ಪಡೆದು ಕಾಲೇಜು ನಡೆಸಲು ಸಾಧ್ಯವಿಲ್ಲ. 30,000 ರು. ಎಂದು ನಿಗದಿಪಡಿಸಿದರೆ ಸಂಸ್ಥೆ ಕೈಗೆ ಸಿಗುವುದು 26,000 ರು ಮಾತ್ರ. ಈ ರೀತಿಯಾದರೆ ಗುಣಮಟ್ಟದ ಇಂಜಿನಿಯರಿಂಗ್ ಶಿಕ್ಷಣ ನೀಡಲು ಹೇಗೆ ಸಾಧ್ಯ? ಸರ್ಕಾರದ ನಮ್ಮ ಪ್ರಶ್ನೆಗೆ ಸುಪ್ರೀಂ ಕೋರ್ಟ್ ನಲ್ಲಿ ಉತ್ತರಿಸಲಿ ಎಂದು ಆರ್ ಎಲ್ ಜೆ ಐಟಿ ಸಂಸ್ಥೆ ಮುಖ್ಯಸ್ಥ ಆರ್ ಎಲ್ ಜಾಲಪ್ಪ ಹೇಳಿದ್ದಾರೆ.
ಶುಲ್ಕ ನಿಗದಿ ಬಗ್ಗೆ ನ್ಯಾಯಮೂರ್ತಿ ಬಿ ಪದ್ಮರಾಜ್ ಅವರ ಆಯೋಗ ನೀಡಿರುವ ವರದಿಯನ್ನು ಬದಿಗೊತ್ತಿ ಮಾತುಕತೆ ಮೂಲಕ ಒಂದು ನಿರ್ಣಯ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿರುವ ಸುಮಾರು 180 ಇಂಜಿನಿಯರಿಂಗ್ ಕಾಲೇಜುಗಳ ಪೈಕಿ 10 ಕಾಲೇಜುಗಳನ್ನು ಮಾತ್ರ ಸರ್ಕಾರ ನಡೆಸಿಕೊಂಡು ಬಂದಿದೆ.











Click it and Unblock the Notifications