ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಂಖೆಡೆ ಪಿಚ್ ರಿಪೋರ್ಟ್ ಬಹಿರಂಗ

By Mahesh
|
Google Oneindia Kannada News

ಮುಂಬೈ, ಏ.1: ವಿಶ್ವಕಪ್ 2011 ಅಂತಿಮ ಹಣಾಹಣಿಯಲ್ಲಿ ಉಭಯ ತಂಡಗಳ ಆಟಗಾರರ ದೈಹಿಕ ಸಾಮರ್ಥ್ಯ ಎಷ್ಟು ಮುಖ್ಯವೋ, ಪಿಚ್ ಸ್ಥಿತಿ ಕೂಡಾ ಅಷ್ಟೇ ಮುಖ್ಯ. ತುಂಬಾ ಜೋಪಾನವಾಗಿ ಪಿಚ್ ಆನ್ನು ಕಾಪಾಡಿಕೊಂಡು ಬರಲಾಗಿದ್ದು, ಫೈನಲ್ ಪಂದ್ಯಕ್ಕೆ ತಯಾರಾಗಿರುವ ಪಿಚ್ ವರದಿಯನ್ನು ಕ್ಯೂರೆಟರ್ ಸುಧೀರ್ ನಾಯಕ್ ಬಹಿರಂಗಪಡಿಸಿದ್ದಾರೆ.

ಈ ಋತುವಿನಲ್ಲಿ ಉಪಖಂಡದ ಪಿಚ್ ಗಳು ಸಾಮಾನ್ಯವಾಗಿ ನಿಧಾನಗತಿಯಿಂದ ಕೂಡಿರುತ್ತದೆ. ಆದರೆ, ತಂಡಗಳು ಹೆಚ್ಚಿನ ಮೊತ್ತ ಗಳಿಸಲು ಯಾವುದೇ ಅಡ್ಡಿಯಿಲ್ಲ. ಮೊಹಾಲಿ ಪಿಚ್ ನಂತೆ ಇಲ್ಲೂ ಕೂಡಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವ ತಂಡಕ್ಕೆ ಹೆಚ್ಚಿನ ಲಾಭ ಸಿಗುತ್ತದೆ. 1974ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿದ್ದ ಭಾರತ ತಂಡವನ್ನು ಪ್ರತಿನಿಧಿಸಿದ್ದ ನಾಯಕ್, ಈ ಪಿಚ್ ಏಕದಿನ ಕ್ರಿಕೆಟ್ ಗೆ ಹೇಳಿಮಾಡಿಸಿದ ಹಾಗೆ ಇದೆ. ಹೆಚ್ಚಿನ ಶ್ರಮವಿಲ್ಲದೆ ಮೊದಲು ಬ್ಯಾಟ್ ಮಾಡುವ ತಂಡ 270 ರಿಂದ 280 ರನ್ ಗಳಿಸಬಹುದು ಎಂದಿದ್ದಾರೆ.

ವಿಶ್ವಕಪ್ : ಮುಖಪುಟ | ಚಿತ್ರಪಟ | ಅಂಕಗಳ ಕೋಷ್ಟಕ | ಟಾಪ್ ಬ್ಯಾಟ್ಸ್ ಮನ್| ಟಾಪ್ ಬೌಲರ್

ವೇಗಿಗಳಿಗೆ ಮೊದಲ ಕೆಲ ಓವರ್ ಗಳು ಸ್ವಿಂಗ್ ಸಿಗದಿದ್ದರೂ, ಒಳ್ಳೆ ಬೌನ್ಸ್ ಸಿಗಲಿದೆ. ಸ್ಪಿನ್ನರ್ ಗಳಿಗೆ ಎರಡನೆ ಅವಧಿಯಲ್ಲಿ ಒಳ್ಳೆ ಅವಕಾಶವಿದೆ. ಎರಡೂ ತಂಡದಲ್ಲಿ ಉತ್ತಮ ಸ್ಪಿನ್ನರ್ ಗಳಿರುವುದರಿಂದ ಯಾರು ಎಷ್ಟು ಲಾಭ ಪಡೆಯುತ್ತಾರೆ ಎಂದು ಕಾದು ನೋಡಬೇಕಿದೆ. ಹೆಚ್ಚು ತಿರುವು ಸಿಗದಿದ್ದರೂ, ನಿಧಾನಗತಿ ಪಿಚ್ ಎಲ್ಲಾ ಬಗೆಯ ಸ್ಪಿನ್ನರ್ ಗಳಿಗೆ ಸಹಾಯಕವಾಗಲಿದೆ ಎಂದಿದ್ದಾರೆ.

ಪಿಚ್ ನಲ್ಲಿರುವ ತೇವಾಂಶವನ್ನು ಕಡಿಮೆಮಾಡಲು ರಾಸಾಯನಿಕ(APSA-80)ಗಳನ್ನು ಸಿಂಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಹೆಚ್ಚು ತೇವಾಂಶವಿದ್ದರೆ, ಎರಡನೇ ಅವಧಿಯಲ್ಲಿ ಬ್ಯಾಟ್ ಮಾಡುವ ತಂಡಕ್ಕೆ ಸಹಾಯಕವಾಗಲಿದೆ. ವೇಗಿಗಳಿಗೆ ಚೆಂಡಿನ ಮೇಲೆ ಸರಿಯಾದ ಹಿಡಿತ ಸಿಗದೇ ಹೋಗಬಹುದು. ಒಟ್ಟಾರೆ ಸ್ಪರ್ಧಾತ್ಮಕ ಪಿಚ್ ಇದಾಗಿದೆ ಎಂದು ನಾಯಕ್ ಹೇಳಿದ್ದಾರೆ.

English summary
The Wankhede Stadium wicket for Saturday’s World Cup final will be a slow turner, like most wickets in the subcontinent during this time of the year. the team batting first will be at an advantage as the spinners will get assistance in the second session of the match says curator Sudhir Naik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X