ಗ್ಯಾರಿ ಕೋಚಿಂಗ್ ಗೆ ವಿದಾಯ: ಫೈನಲ್ಸೇ ಫೈನಲ್

ಮೊಹಾಲಿ, ಮಾ. 31: ಭಾರತ ತಂಡ ಕ್ರಿಕೆಟ್ ಜಗತ್ತಿನ ಉತ್ತುಂಗ ತಲುಪಲು ಎರಡೇ ದಿನ ಬಾಕಿಯಿದೆ. ಭಾರತವನ್ನು ಈ ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದಿರುವುದು ನಿಸ್ಸಂಶಯವಾಗಿ ತಂಡದ ಕೋಚ್, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಗ್ಯಾರಿ ಕಿರ್ಸ್ಟನ್ ಎನ್ನಬಹುದು. ತಂಡದ ಯಾವುದೇ ಆಟಗಾರರನ್ನು ಕೇಳಿನೋಡಿ, ಗ್ಯಾರಿ ಎಂದರೆ ತಂಡಕ್ಕೆ 'ಫಾದರ್ ಫಿಗರ್' ಇದ್ದಂತೆ ಎನ್ನುತ್ತಾರೆ.

ಇಂತಹ ಅಪ್ರತಿಮ ಕೋಚ್ ಗೆ ಈ ಬಾರಿಯ ವಿಶ್ವ ಕಪ್ ಗೆಲ್ಲಿಸಿಕೊಡುವುದು ಅತ್ಯುತ್ತಮ ಸಂದರ್ಭೋಚಿತ ವಿದಾಯದ ಕಾಣಿಕೆ ಎನ್ನಬಹುದು. ಅಷ್ಟಕ್ಕೂ ಗ್ಯಾರಿ 'ನನ್ನ ಕೋಚಿಂಗ್ ಗೆ ಫೈನಲ್ಸೇ ಫೈನಲ್. ಹಣ, ಖ್ಯಾತಿ, ಐಶ್ವರ್ಯ ಗಳಿಸಿದ್ದು ಸಾಕು. ಇಬ್ಬರು ಮುದ್ದಾದ ಗಂಡು ಮಕ್ಕಳ ಜತೆ ಜೀವನವನ್ನು ನೆಮ್ಮದಿಯಾಗಿ ಕಳೆಯುತ್ತೇನೆ ಎಂದಿದ್ದಾರೆ. ಗ್ಯಾರಿ ಅವರ ಸ್ಥಾನ ತುಂಬಬಲ್ಲ ಅಪ್ರತಿಮ ಕೋಚ್ ಸದ್ಯಕ್ಕೆ ಭಾರತಕ್ಕೆ ಲಭ್ಯವಾಗುವುದು ಕಷ್ಟಸಾಧ್ಯ ಎನ್ನಬಹುದು. ಥ್ಯಾಂಕ್ ಯು ಗ್ಯಾರಿ. ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ ಎಂಬುದು ಭಾರತದ ಕ್ರಿಕೆಟ್ ಪ್ರೇಮಿಗಳ ತುಂಬು ಹೃದಯದ ಹಾರೈಕೆ.

'ಟೀಂ ಇಂಡಿಯಾದ ಕೋಚ್ ಆಗಿ ಕರಾರು ಅವಧಿ ಮುಗಿಯುತ್ತಾ ಬಂದಿದೆ. ನಿಜಕ್ಕೂ ಭಾರತ ತಡದ ಕೋಚ್ ಆಗಿದ್ದು ಜೀವಮಾನದ ಅತ್ಯುತ್ತಮ ಅನುಭವ. ಇಂತಹ ತಂಡಕ್ಕೆ ಕೋಚ್ ಆಗಿದ್ದು ನನ್ನ ಸೌಭಾಗ್ಯವೇ ಸರಿ ಎಂದು ವಿನಮ್ರರಾಗಿ ನುಡಿದಿದ್ದಾರೆ. ವಾಸ್ತವದಲ್ಲಿ, ಗ್ಯಾರಿ ಕೋಚ್ ಆಗಿ ದೊರೆತಿದ್ದು ತಂಡದ ಸೌಭಾಗ್ಯ ಎನ್ನಬಹುದು. ಕಳೆದ ನಾಲ್ಕು ವರ್ಷಗಳಲ್ಲಿ ಗ್ಯಾರಿ ಕೋಚಿಂಗ್ ಅವಧಿಯಲ್ಲಿ ಭಾರತ ಗಳಿಸಿದ ಯಶಸ್ಸನ್ನು ಗ್ಯಾರಿಯ ವೈಯಕ್ತಿಕ ಯಶಸ್ಸೂ ಎನ್ನಬಹುದು ಅಷ್ಟರಮಟ್ಟಿಗೆ ಅವರು ತಂಡಕ್ಕಾಗಿ ಶ್ರಮಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+