ಹುಬ್ಬಳ್ಳಿ ಬೆಳಗಾವಿಗೆ ಹಬ್ಬಿದ ಏರ್ ಟೆಲ್ 3ಜಿ

Airtel3G service launche in North Karnataka
ಬೆಂಗಳೂರು, ಮಾ.24: ದೇಶದ ಪ್ರಮುಖ ಮೊಬೈಲ್ ಸೇವಾದಾರ ಕಂಪನಿ 'ಏರ್ ಟೆಲ್ ' ಮೂರನೇ ತಲೆಮಾರಿನ(3ಜಿ) ಮೊಬೈಲ್ ಸೇವೆಯನ್ನು ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿಗೆ ವಿಸ್ತರಿಸಿದೆ. ಜನವರಿಯಲ್ಲಿ ಬೆಂಗಳೂರಿನಲ್ಲಿ 3ಜಿ ಸೇವೆ ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ಕೊಟ್ಟ ಮಾತನ್ನು ಭಾರ್ತಿ ಏರ್ ಟೆಲ್ ಸಂಸ್ಥೆ ಉಳಿಸಿಕೊಂಡಿದೆ.

ನೂತನ 3ಜಿ ಸೇವೆಯನ್ನು ಕರ್ನಾಟಕದ ದಕ್ಷಿಣ ಭಾಗಗಳಿಗೆ ಮೊದಲಿಗೆ ಪರಿಚಯಿಸಿದ ಏರ್ ಟೆಲ್ ಮಾರ್ಚ್ ವೇಳೆಗೆ ರಾಜ್ಯದ ಇತರೆ ಪ್ರಮುಖ ನಗರಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಿದ್ದರು. ಅದರಂತೆ, ಗ್ರಾಮಾಂತರ ಭಾಗಗಳಿಗೆ ಹೈ ಸ್ಪೀಡ್ ಇಂಟರ್ನೆಟ್ ಒದಗಿಸುವ ಸಲುವಾಗಿ ಎರಡನೇ ಹಂತದಲ್ಲಿ ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿಯಲ್ಲಿ 3ಜಿ ಸೇವೆ ಆರಂಭವಾಗಿದೆ.

ಬೆಂಗಳೂರಿನ ನಂತರ ಮೈಸೂರು, ಮಂಗಳೂರು, ಉಡುಪಿ, ಮಣಿಪಾಲ್, ಶಿವಮೊಗ್ಗ, ದಾವಣಗೆರೆ ಹಾಗೂ ತುಮಕೂರು ನಗರಗಳಲ್ಲಿ 3ಜಿ ಸೇವೆ ಆರಂಭಿಸಲಾಗಿದೆ. ತ್ವರಿತ ಗತಿಯಲ್ಲಿ ಇಂಟರ್ ನೆಟ್ ಸೇವೆ ಒದಗಿಸಲು ಹೈ ಸ್ಪೀಡ್ ಪಾಕೇಟ್ ಆಕ್ಸೆಸ್(HSPA) ನೆಟ್ ವರ್ಕ್ ಬಳಸಲಾಗುತ್ತಿದೆ. ಇದನ್ನು ಅಳವಡಿಸಲು ಎರಿಕ್ ಸನ್, ನೋಕಿಯಾ ಸೀಮನ್ಸ್ ನೆಟ್ ವರ್ಕ್ ಮತ್ತು ಹ್ಯುವೈ ಕಂಪನಿಗಳೊಂದಿಗೆ ಭಾರ್ತಿ ಏರ್ ಟೆಲ್ ಒಪ್ಪಂದ ಮಾಡಿಕೊಂಡಿದೆ. PAYG VBC ಹಾಗೂ ಸ್ಯಾವೆ ಪ್ಲ್ಯಾನ್ ಎಂಬ ಎರಡು ಯೋಜನೆಗಳು ಗ್ರಾಹಕರಿಗೆ ಲಭ್ಯವಿದೆ. ದಿನ ಅಥವಾ ತಿಂಗಳ ಲೆಕ್ಕದಲ್ಲಿ 3ಜಿ ಸೇವೆ ಬಳಸಲು ಯೋಜನೆಗಳು ಸಹಕಾರಿಯಾಗಿದೆ.

ನೂತನ 3ಜಿ ತಂತ್ರಜ್ಞಾನದಿಂದಾಗಿ ನೀವು ವಿಡಿಯೋ ಕರೆಗಳನ್ನು ಮಾಡಬಹುದಾಗಿದೆ. ಮೊಬೈಲ್ ನಲ್ಲಿ ಲೈವ್ ಟಿವಿ ಕೂಡ ನೋಡಬಹುದಾಗಿದೆ. ಹಳೆಯ ಬಫರಿಂಗ್ ಇಂಟರ್ ನೆಟ್ ಗೆ ಬದಲಾಗಿ ನೂತನ 3ಜಿ ಮೊಬೈಲ್ ನಿಂದ ಹೈ ಸ್ಪೀಡ್ ಇಂಟರ್ ನೆಟ್ ಆಕ್ಸೆಸ್ ಮಾಡಬಹುದಾಗಿದೆ.

ಡೊಕೊಮೊ ಮತ್ತು ರಿಲೆಯೆನ್ಸ್ ಕಮ್ಯುನಿಕೇಷನ್ ದೇಶದಲ್ಲಿ 3ಜಿ ಸೇವೆಯನ್ನು ಮೊದಲಿಗೆ ನೀಡಲು ಆರಂಭಿಸಿತ್ತು. ದೇಶಿ ಕಂಪನಿಗಳಾದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಕೂಡ ಈಗಾಗಲೇ 3ಜಿ ಸೇವೆ ನೀಡುತ್ತಿವೆ. ಫೆಬ್ರವರಿಯಿಂದ ವೋಡಾಫೋನ್ ಕೂಡಾ 3ಜಿ ಸೇವೆ ಆರಂಭಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+