ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದಲ್ಲಿ ಇನ್ನೂ ಹೆಚ್ಚಾಗಲಿ ಮಳೆ ಸುಗ್ಗಿ ಕೇಂದ್ರ

By Mahesh
|
Google Oneindia Kannada News

RWH theme park , Jayanagar
ಬೆಂಗಳೂರು, ಮಾ. 22: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ದೇಶದದಲ್ಲೆ ಪ್ರಥಮ ವಾದ ಮಳೆ ನೀರು ಸುಗ್ಗಿ ಕೇಂದ್ರವನ್ನು ನಗರದಲ್ಲಿ ನಿರ್ಮಾಣ ಮಾಡಿದೆ. ವಿಶ್ವ ಜಲ ಸಪ್ತಾಹದ ಮುನ್ನಾ ದಿನವಾದ ಸೋಮವಾರ ಕೇಂದ್ರವನ್ನು ಉದ್ಘಾಟನೆ ಮಾಡಲಾಗಿದೆ. ಜಯನಗರದ 5ನೆ ಬಡಾವಣೆಯಲ್ಲಿ 'ಸರ್.ಎಂ.ವಿಶ್ವೇಶರಯ್ಯ ಮಳೆ ನೀರು ಸುಗ್ಗಿ ಕೇಂದ್ರ" ಹೆಸರಿಸಲಾಗಿದೆ. ನಗರ ತುಂಬಾ ಈ ರೀತಿ ಸಂಪೂರ್ಣ ಮಳೆ ಕೊಯ್ಲು ಆಧಾರಿತ ಥೀಮ್ ಪಾರ್ಕ್ ನಿರ್ಮಾಣಕ್ಕೆ ಸರ್ಕಾರ ಕೂಡಾ ಮನಸ್ಸು ಮಾಡಿರುವುದು ಸಂತೋಷದ ಸಂಗತಿ.

ಮಳೆ ನೀರು ಕೊಯ್ಲು ಪದ್ಧತಿ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸದುದ್ದೇಶದಿಂದ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಈ ಥೀಮ್ ಪಾರ್ಕ್‌ನ್ನು ನಿರ್ಮಾಣ ಮಾಡಲಾಗಿದೆ. ಮಳೆ ನೀರು ಕೊಯ್ಲು ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ತೋರಿಸಲು ವ್ಯವಸ್ಥೆಯಿದೆ. 'ತುಂತುರು" ಮಾಹಿತಿ ಕೇಂದ್ರ ವ್ಯವಸ್ಥೆ, ನೀರು ಸರಬರಾಜು ಹಾಗೂ ತ್ಯಾಜ್ಯ ನೀರು ಸಂಸ್ಕರಣೆ ಸಂಬಂಧದ ಮಾದರಿಗಳನ್ನು ರೂಪಿಸಲಾಗಿದೆ.

ಮಾಹಿತಿ ಕೇಂದ್ರವು 70 ಆಸನಗಳ ಸುಸಜ್ಜಿತ ಥಿಯೇಟರ್ ಒಳಗೊಂಡಿದ್ದು, ನೀರಿಗೆ ಸಂಬಂಧಿಸಿದ ಕಿರು ಚಿತ್ರಗಳನ್ನು ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಬಯಲು ರಂಗಮಂದಿರವನ್ನು ಇಲ್ಲಿ ಸುಸಜ್ಜಿತ ನಿರ್ಮಿಸಲಾಗಿದ್ದು, ಸಂಗೀತ ಹಾಗೂ ಇನ್ನಿತರ ಉಪಕರಣಗಳ ಪ್ರದರ್ಶನ ನಡೆಯುವ ವ್ಯವಸ್ಥೆ ಮಾಡಲಾಗಿತ್ತು.

ಮಳೆ ನೀರು ಕೊಯ್ಲು, ಅಳವಡಿಕೊಯ್ಲಿಗೆ ಅವಶ್ಯಕವಾದ ಫಿಲ್ಟರ್ ಹಾಗೂ ಇನ್ನಿತರ ಉಪಕರಣಗಳ ಪ್ರದರ್ಶನವಿದೆ. ಥೀಮ್ ಪಾರ್ಕ್‌ನಲ್ಲಿ ತರಬೇತಿ ಹೊಂದಿದ ಪ್ಲಂಬರ್ಸ್‌ ಪಟ್ಟಿ ಮಳೆ ನೀರು ಕೊಯ್ಲಿಗೆ ಸಂಬಂಧಿಸಿದ ಪುಸ್ತಕಗಳು ಲಭ್ಯ. ಇದಲ್ಲದೆ, ಸಹಾಯ ಕೇಂದ್ರವನ್ನು ಪ್ರಾರಂಭಿಸಿದ್ದು, ಸಾರ್ವಜನಿಕ ಸಮಸ್ಯೆಗಳಿಗೆ ದೂರವಾಣಿ ಮೂಲಕ ಪರಿಹಾರ ನೀಡಲಾಗುತ್ತದೆ. ವಾರಕ್ಕೊಮ್ಮೆ ನಿಗದಿತ ದಿನದಂದು ಸಾರ್ವಜನಿಕರಿಗೆ ತಜ್ಞರಿಂದ ಮಾರ್ಗದರ್ಶನ ನೀಡಲಾಗುತ್ತದೆ.

ಸರ್ಕಾರದ ಮಾತು ಕೇಳಿ: ನಗರದಲ್ಲಿನ 24 ಸಾವಿರ ಮನೆಗಳಲ್ಲಿ ಮಳೆನೀರು ಸಂಗ್ರಹ ಪದ್ದತಿಯನ್ನು ಅಳವಡಿಸಿಕೊಳ್ಳಲಾಗಿದೆ. ಈ ಸಂಖ್ಯೆ 5 ಲಕ್ಷಕ್ಕೆ ಹೆಚ್ಚಾಗಬೇಕು. ಈ ಮೂಲಕ ಮಳೆ ನೀರನ್ನು ಸಂರಕ್ಷಣೆ ಹಾಗೂ ನೀರನ್ನು ಮಿತವಾಗಿ ಬಳಸಬೇಕು. ಸರ್ಕಾರ ಮಳೆ ಕೊಯ್ಲು ಯೋಜನೆ ಜಾರಿಗೆ ತಂದಿದೆ ಆದರೆ, ಸಾರ್ವಜನಿಕರಿಗೆ ಇದರ ಬಗ್ಗೆ ಸರಿಯಾದ ಅರಿವಿಲ್ಲ. ಈ ಮಾಹಿತಿ ಕೇಂದ್ರಕ್ಕೆ ಬಂದರೆ ಮಳೆಕೊಯ್ಲಿನ ಅಗತ್ಯತೆಯ ಅರಿವಾಗುತ್ತದೆ. ಎಲ್ಲರೂ ಮಳೆಕೊಯ್ಲು ಪದ್ಧತಿ ಅಳವಡಿಸಿಕೊಂಡರೆ ಸುಮಾರು 250 ರಿಂದ 350 ಕೋಟಿ ರು ಉಳಿತಾಯ ಸಾಧ್ಯವಿದೆ ಎಂದು ಗೃಹ ಸಚಿವ ಆರ್.ಅಶೋಕ್ ಕರೆ ನೀಡಿದರು.

English summary
World Water Day :A theme park fully adopted rainwater harvesting has been inaugurated by Minister R Ashok in Jayanagar. The Park has information center called Thunthuru, an auditorium to show case short films about water and RWh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X