ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್ ನೆಟ್ ಎಕ್ಸ್ ಪ್ಲೋರರ್ 9 ಉಳಿಕೆ, ಬಳಕೆ!

By Mahesh
|
Google Oneindia Kannada News

MS IE 9 vs Mozilla Firefox
ಸ್ಯಾನ್ ಫ್ರಾನ್ಸಿಸ್ಕೋ, ಮಾ.21: ಕಂಪ್ಯೂಟರ್ ಕ್ಷೇತ್ರದ ದಿಗ್ಗಜ ಮೈಕ್ರೋಸಾಫ್ಟ್ ಇತ್ತೀಚೆಗೆ ಬಿಡುಗಡೆ ಮಾಡಿದ ಜನಪ್ರಿಯ ವೆಬ್ ಬ್ರೌಸರ್ ಐಇ 9 ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಿಡುಗಡೆಗೊಂಡ ಮೇಲೆ ದಿನವೊಂರಲ್ಲೇ ಸುಮಾರು 2.3 ಮಿಲಿಯನ್ ಬಾರಿ ಡೌನ್ ಲೋಡ್ ಆಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಆಸ್ಟಿನ್ ನಲ್ಲಿ ನಡೆದ ಸೌಥ್ ವೆಸ್ಟ್ (SXSW) ಹಬ್ಬದಲ್ಲಿ ಮಾ.15ರಂದು ಬಿಡುಗಡೆಯಾದ ಐಇ9, ವಿಂಡೋಸ್ ವಿಸ್ತಾ ಹಾಗೂ ವಿಂಡೋಸ್ 7 ಅಪರೇಟಿಂಗ್ ಸಿಸ್ಟಮ್ ನಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತದೆ ಎಂಬುದು ಗಮನಾರ್ಹ.

ವಿಂಡೋಸ್ ನ ಹಳೆ ಆವೃತ್ತಿ ಆಪರೇಟಿಂಗ್ ಸಿಸ್ಟಮ್ XP, 2K, 98 ಮುಂತಾದಗಳನ್ನು ಒಳಗೊಂಡ ಕಂಪ್ಯೂಟರ್ ನಲ್ಲಿ ಐಇ9 ಕಾರ್ಯ ನಿರ್ವಹಿಸುವುದಿಲ್ಲ. ಕಳೆದ ಸೆಪ್ಟೆಂಬರ್ ನಲ್ಲಿ ಐಇ9 ಬೀಟಾ ಆವೃತ್ತಿ ಬಿಡುಗಡೆಗೊಂಡಿದ್ದಾಗಲೂ ಒಂದೇ ದಿನದಲ್ಲಿ ಸುಮಾರು 2 ಮಿಲಿಯನ್ ಬಾರಿ ಡೌನ್ ಲೋಡ್ ಆಗಿತ್ತು. ಈಗ ಸಂಪೂರ್ಣ ಆವೃತ್ತಿ ಬಿಡುಗಡೆಯಾಗಿದ್ದು, HTML 5 ಹಾಗೂ CSS 3 ಸೌಲಭ್ಯ ಒದಗಿಸಬಲ್ಲದಾಗಿದೆ. [ಸಂಪೂರ್ಣ ವಿಶ್ಲೇಷಣೆಗೆ ನೋಡಿ]

ಏನಾದರೂ, ಇಂಟರ್ ನೆಟ್ ಎಕ್ಸ್ ಪ್ಲೋರರ್ ಗೆ ಕಷ್ಟ ಕಷ್ಟ. ಗೂಗಲ್, ಮೋಝಿಲ್ಲಾಗೆ ಪ್ರತಿಸ್ಪರ್ಧೆ ಒಡ್ಡಲು ಸಾಧ್ಯವಾಗದೆ ಹೆಣಗಾಡುತ್ತಿರುವ ಮೈಕ್ರೋಸಾಫ್ಟ್ ಹತ್ತು ಹಲವು ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಮಾರುಕಟ್ಟೆ ಹಿಡಿತ ಸಾಧಿಸಲು ಯೋಜಿಸಿದೆ. ಮಾ.22ರಂದು ಫೈರ್ ಫಾಕ್ಸ್ ನ 4ನೆ ಆವೃತ್ತಿ ಬ್ರೌಸರ್ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ. ಗೂಗಲ್ ಕೂಡಾ ಕ್ರೋಮ್ 10 ಹಾಗೂ 11 ಬಿಡುಗಡೆ ಮಾಡಲು ಸಿದ್ಧವಾಗಿದೆ.

ಸ್ಪೀಡ್ ಹಾಗೂ ಸೆಕ್ಯುರಿಟಿ ಎಂಬ ಮಂತ್ರವನ್ನು ಈ ಬಾರಿ ಮೈಕ್ರೋಸಾಫ್ಟ್ ಜಪಿಸುತ್ತಿದ್ದು, ಗ್ರಾಹಕ ಸ್ನೇಹಿ ಬ್ರೌಸರ್ ಗಳು, ಓಪನ್ ಸೋರ್ಸ್ ಬ್ರೌಸರ್ ಗಳ ಈ ಕಾಲದಲ್ಲಿ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಳ್ಳಲು ಒಳ್ಳೆ ಪ್ರಯತ್ನಪಟ್ಟಿದೆ. ಆದರೆ, ಕೇವಲ ಎರಡು ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಮಾತ್ರ ಲಭ್ಯವಿರುವುದು ಕೊಂಚ ಹೊಡೆತ ನೀಡಲಿದೆ.

English summary
The computer giant Microsoft said that their latest version popular web browser, Internet Explorer 9, has been downloaded more than 2.3 million times in just one day after its stable version release. But, IE 9 faces tough fight by Mozilla Firefox 4 and Google Chrome 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X