ಸೋಸಲೆ ವಿದ್ಯಾಮನೋಹರ ತೀರ್ಥ ಸ್ವಾಮೀಜಿ ಸೆರೆ
ಬೆಂಗಳೂರು,
ಮಾ,12: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವನಗುಡಿಯ ಸೋಸಲೆ ವ್ಯಾಸರಾಜಮಠದ ವಿದ್ಯಾಮನೋಹರ ಸ್ವಾಮೀಜಿ ಅವರನ್ನು ಆಂಧ್ರಪ್ರದೇಶದ ಪೊಲೀಸರು ಇಂದು ಬಂಧಿಸಿದ್ದಾರೆ. ಮಠದ ಆಸ್ತಿಯನ್ನು ಬೋಗ್ಯಕ್ಕೆ ಬಿಡುವಲ್ಲಿ ನಡೆದ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು ಕಡಪ ಮೂಲದ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಠಕ್ಕೆ ಆಗಮಿಸಿದ ಕಡಪದ ಕ್ರೈಂ ಬ್ರ್ಯಾಂಚ್ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ. id="toptextpromo">ವ್ಯಾಸರಾಜಮಠದ
ಈ ಹಿಂದಿನ ಸ್ವಾಮೀಜಿ ವಿದ್ಯಾವಾಚಸ್ಪತಿ ತೀರ್ಥ ಅವರು ಮಠದ ಆಸ್ತಿಯನ್ನು 30 ಲಕ್ಷ ರು.ಗಳಿಗೆ ಬೋಗ್ಯಕ್ಕೆ ಹಾಕಿದ್ದರು. ಅದನ್ನು ನಂತರ ಎರಡನೇ ಅವಧಿಗೆ ನವೀಕರಿಸಲಾಗಿತ್ತು. ಅವಧಿ ಪೂರ್ಣಗೊಂಡ ನಂತರ ಬೋಗ್ಯಕ್ಕೆ ನೀಡಿದ್ದ 70 ಲಕ್ಷ ರೂ.ಗಳನ್ನು ಚೆಕ್ ಮೂಲಕ ವಾಪಾಸ್ ಮಾಡಲಾಗಿತ್ತು. ಆದ ಚೆಕ್ ಬೌನ್ಸ್ ಆದ ಕಾರಣ, ಪ್ರಕರಣ ದಾಖಲಾಗಿ, ಸ್ವಾಮೀಜಿಯನ್ನು ಬಂಧಿಸಿ ವಿಚಾರಣೆಗೆ ಕರೆದೊಯ್ಯಲಾಗಿದೆ. id='are-slot-1' class='oiad oi-axt oiadv'> id='top-searched-articles'>2004ರಲ್ಲಿ
ಚೆನ್ನೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಉದ್ಧವ ಆಚಾರ್ ಹಾಗೂ ಶ್ರೀಮತಿ ಅವರ ಪುತ್ರನಾದ ಶರತ್ ಆಚಾರ್ ಎಂಬುವರಿಗೆ ಸಂನ್ಯಾಸ ದೀಕ್ಷೆ ನೀಡಲಾಗಿತ್ತು. ಸೋಸಲೆ ವ್ಯಾಸರಾಜಮಠದ ವಿದ್ಯಾವಾಚಸ್ಪತಿ ತೀರ್ಥ ಅವರು ತಮ್ಮ ಉತ್ತರಾಧಿಕಾರಿಗೆ ವಿದ್ಯಾಮನೋಹರ ತೀರ್ಥ ಎಂಬ ನಾಮವನ್ನು ನೀಡಿದ್ದರು. ವಿದ್ಯಾವಾಚಸ್ಪತಿ ತೀರ್ಥರ ಸಂಬಂಧಿಯೂ ಆಗಿದ್ದ ಶರತ್ ಆಚಾರ್ ಹೀಗೆ ವಿದ್ಯಾಮನೋಹರ ತೀರ್ಥ ಸ್ವಾಮೀಜಿ ಆಗಿ ಸೋಸಲೆ ಮಠದ ಪೀಠವನ್ನು ಅಲಂಕರಿಸಿದ್ದರು.











Click it and Unblock the Notifications