ಈ ಮಹಿಳೆ ಹೆಸರಲ್ಲಿದೆ 117 ಮೊಬೈಲ್ ಕನೆಕ್ಷನ್

ಅಲ್ಲದೆ, ಆಕೆ ಒಮ್ಮೆ ಕೂಡಾ ಮೊಬೈಲ್ ಸಂಪರ್ಕ ನೀಡುವಂತೆ ದೂರ ಸಂಪರ್ಕ ಇಲಾಖೆಗೆ ಅರ್ಜಿ ಸಲ್ಲಿಸಿಲ್ಲ. ಇದರಲ್ಲಿ ಯಾವುದೇ ಮೊಬೈಲ್ ಸಂಖ್ಯೆಯು ಅವಳಿಗೆ ಸಂಬಂಧಿಸಿದ್ದಲ್ಲ ಎಂದು ಪೊಲೀಸರು ಹೇಳುತ್ತಾರೆ. ಹಾಗಾದರೆ, ಎಷ್ಟೊಂದು ಸಂಪರ್ಕಗಳ ಜಾಲದ ಮೂಲ ಏನು ಎಂದು ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ.
ಒಂದಷ್ಟು ತನಿಖೆ ನಂತರ ಪೊಲೀಸರಿಗೆ ತಿಳಿದದ್ದು ಇಷ್ಟು : ಮತದಾನ ಗುರುತಿನ ಚೀಟಿಯನ್ನು ಹಲವು ಬಾರಿ ಜೆರಾಕ್ಸ್ ಮಾಡಿರಬಹುದು. ಅದೇ ಮತದಾರ ಚೀಟಿಯನ್ನು ಹಲವರು ಗುರುತಿನ ಚೀಟಿಯನ್ನಾಗಿ ಉಪಯೋಗಿಸಿರಬಹುದು ಅಥವಾ ಸೆಲ್ಯುಲಾರ್ ಆಪರೇಟರ್ ಗಳು ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಈ ತಂತ್ರ ಹೂಡಿರುವ ಸಾಧ್ಯತೆಯಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ನಕಲಿ ದಾಖಲೆ ಪತ್ರ ಬಳಕೆಯಂತೂ ಆಗಿದೆ ಎಂದು ದೆಹಲಿ ಪೊಲೀಸರು ದೃಢಪಡಿಸಿದ್ದಾರೆ.
ದೂರಸಂಪರ್ಕ ಇಲಾಖೆ (department of telecommunications) ಒಬ್ಬ ಗ್ರಾಹಕರ ಹೆಸರಿನಲ್ಲಿ ಹಲವು ಮೊಬೈಲ್ ಸಂಪರ್ಕಗಳಿರುವುದರ ಬಗ್ಗೆ ತನಿಖೆಗೆ ಆದೇಶಿಸಿದಾಗ ಈ ಸತ್ಯಾಂಶ ಹೊರಬಂದಿದೆ. ತುರ್ಕಮನ್ ಗೇಟ್ ಬಳಿಯಿರುವ ಮಹಿಳೆ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದವಳಾಗಿದ್ದು, ಪತಿಯಿಂದ ದೂರವಾಗಿ ಒಬ್ಬಳೆ ವಾಸಿಸುತ್ತಿದ್ದಾಳೆ. ಪೊಲೀಸರು ಮೊಬೈಲ್ ಸಂಪರ್ಕಗಳ ಕುರಿತಂತೆ ವಿಚಾರಣೆ ನಡೆಸಿದಾಗ, ತನಗೆ ಇಂತಹ ಯಾವುದೇ ಮಾಹಿತಿಯಲ್ಲವೆಂದು ಸ್ಪಷ್ಟಪಡಿಸಿದ್ದಾಳೆ.












Click it and Unblock the Notifications