ಮೈಸೂರಿನಲ್ಲಿ ವೇಶ್ಯಾವಾಟಿಕೆ: ನಾಲ್ವರ ಬಂಧನ

ಶಾಂತಮ್ಮ ಎಂಬ ನಲವತ್ತೆಂಟು ವರ್ಷದ ಹೆಂಗಸೇ ಈ ದಂಧೆಯ ರೂವಾರಿಯಾಗಿದ್ದು, ಆಗಾಗ್ಗೆ ಏರಿಯಾ ಬದಲಾಯಿಸುತ್ತಾ ಮನೆಗಳನ್ನು ಬಾಡಿಗೆ ಪಡೆದು ಅಲ್ಲಿ ವೇಶ್ಯಾವಾಟಿಕೆಯನ್ನು ನಡೆಸುತ್ತಿದ್ದಳು ಎನ್ನಲಾಗಿದೆ. ಇಪ್ಪತ್ತು ದಿನಗಳ ಹಿಂದೆ ದಟ್ಟಗಳ್ಳಿಯ 3ನೇ ಹಂತದ ಕನಕದಾಸನಗರದ ನಂ.17ರ ಮನೆಯ ಮಾಲೀಕ ಶ್ರೀನಿವಾಸಯ್ಯರವರಿಂದ ಮನೆ ಬಾಡಿಗೆ ಪಡೆದು ಒಬ್ಬಳೇ ವಾಸಿಸುತ್ತಿದ್ದಳು.
ಬಲೆ ಬೀಸಿದ ಪೊಲೀಸರು:ಆದರೆ ಆಕೆಯ ಮನೆಗೆ ಹೊತ್ತಲ್ಲದ ಹೊತ್ತಿನಲ್ಲಿ ಕಾರಿನಲ್ಲಿ ಬೈಕ್‌ನಲ್ಲಿ ಗಂಡಸರು, ಹುಡುಗರು ಬಂದ ಸ್ವಲ್ಪ ಸಮಯದಲ್ಲಿಯೇ ಹುಡುಗಿಯರು ಆಟೋದಲ್ಲಿ ಬಂದಿಳಿಯುತ್ತಿದ್ದರು. ಇದರಿಂದ ಶಾಂತಮ್ಮನ ಬಗ್ಗೆ ಸುತ್ತಮುತ್ತಲಿನ ನಿವಾಸಿಗಳಿಗೆ ಅನುಮಾನ ಬಂದಿದ್ದರಿಂದ ಕುವೆಂಪುನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಠಾಣೆಯ ಇನ್ಸ್‌ಪೆಕ್ಟರ್ ಧನಂಜಯ ಹಾಗೂ ತಂಡ ಗಿರಾಕಿಗಳ ಸೋಗಿನಲ್ಲಿ ಹೋಗಿ ಶಾಂತಮ್ಮನ ಮನೆಯ ಬಾಗಿಲು ತಟ್ಟಿದ್ದಾರೆ. ಗಿರಾಕಿಗಳು ಮನೆಗೆ ಬಂದ ಸಂತೋಷದಲ್ಲಿ ವ್ಯವಹಾರ ಕುದುರಿಸಿ ಬಳಿಕ ತೊಣಚಿಕೊಪ್ಪಲು ಬಡಾವಣೆಯ ಗೀತಾ(27), ಆಕೆಯ ಸಂಬಂಧಿ ವಾಣಿ (19) ಹಾಗೂ ಕುವೆಂಪುನಗರದ ಕಾವ್ಯ(20) ಎಂಬಾಕೆಯನ್ನು ಶಾಂತಮ್ಮ ಕರೆಸಿದ್ದಾಳೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅವರನ್ನು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ವಿಚಾರಣೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಶಾಂತಮ್ಮ ಅದೆಂತಹ ಬುದ್ದಿವಂತಳಾಗಿದ್ದಳೆಂದರೆ ಯಾವುದೇ ಹುಡುಗಿಯನ್ನು ಮನೆಯಲ್ಲಿಟ್ಟುಕೊಳ್ಳದೆ ಮನೆಗೆ ಬಂದ ಗಿರಾಕಿಯೊಂದಿಗೆ ವ್ಯವಹಾರ ಕುದುರಿಸಿ ನಂತರವಷ್ಟೆ ಹುಡುಗಿಯರನ್ನು ಕರೆಸುತ್ತಿದ್ದಳು ಎಂದು ಹೇಳಲಾಗಿದೆ.












Click it and Unblock the Notifications