ರಾಜೀವ್ ಆರೋಗ್ಯ ವಿವಿ ಪರೀಕ್ಷೆ: ಮತ್ತೊಂದು ವಿವಾದದ ಅಂಕ

ಬೆಂಗಳೂರು, ಮಾ.5: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದೆ. ಈ ವಿಶ್ವವಿದ್ಯಾಲಯವು ನಡೆಸುವ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆ (PGET) ಬರೆದಿದ್ದ ಎಂಟು ಮಂದಿ ಸೇವಾನಿರತ ವೈದ್ಯರು ಮೊದಲ ಎಂಟು ರ‌್ಯಾಂಕ್ ಗಳನ್ನು ಗಿಟ್ಟಿಸುವ ಮೂಲಕ ವಿವಾದಗಳ ಮತ್ತೊಂದು ಅಂಕ ತೆರೆದುಕೊಂಡಿದೆ.

ಏನಾಗಿದೆಯೆಂದರೆ ಮೊನ್ನೆ ಜನವರಿ ಬಳ್ಳಾರಿ ಪರೀಕ್ಷಾ ಕೇಂದ್ರದಲ್ಲಿ PGET ಬರೆದಿದ್ದ ಈ ಎಂಟೂ ಮಂದಿ ವೈದ್ಯರು ಉನ್ನತ ಸ್ಥಾನಗಳನ್ನು ಬಾಚಿಕೊಂಡಿದ್ದಾರೆ. ಇದು ಹೇಗೆ ಎಂಬ ಪ್ರಶ್ನೆ ಸಹಜವಾಗಿ ಎದ್ದಿದೆ. ಪ್ರವೇಶ ಪರೀಕ್ಷೆ ಬರೆದಿದ್ದ ಇತರರು ಆಶ್ಚರ್ಯದ ಮಡುವಿನಲ್ಲಿದ್ದಾರೆ. ಅಂಕ ಪ್ರಹಸನದ ಬಗ್ಗೆ ವಿಚಾರಣೆ ನಡೆಸಿ ಎಂದು RGUHS ಚಾನ್ಸಲರ್ ಎಚ್.ಆರ್. ಭಾರದ್ವಾಜ್ ಅವರಿಗೆ ಮೊರೆ ಹೋಗಿದ್ದಾರೆ. ಲೋಕಾಯುಕ್ತಕ್ಕೂ ಅಲವತ್ತುಕೊಂಡಿದ್ದಾರೆ.

ಇಬ್ಬರು ಪರೀಕ್ಷಾರ್ಥಿಗಳು ಗರಿಷ್ಠ 200 ಅಂಕಕ್ಕೆ 178 ಅಂಕ ಗಿಟ್ಟಿಸಿ ಅಗ್ರಜರಾಗಿದ್ದಾರೆ. ಪರೀಕ್ಷೆಯ ದ್ವಿತೀಯಾರ್ಧದಲ್ಲಿ ರ‌್ಯಾಂಕ್ ಗಿಟ್ಟಿಸಿದವರಿಗೆ ಸರಿಯಾದ ಉತ್ತರಗಳಿದ್ದ ಪ್ರಶ್ನೆಪತ್ರಿಕೆಯನ್ನು ಒದಗಿಸಲಾಗಿದೆ ಎಂದು ಉಳಿದ ಅಭ್ಯರ್ಥಿಗಳು ದೂರಿದ್ದಾರೆ. ಈ ವರ್ಷ ನಡೆದಿರುವ ವೈದ್ಯಕೀಯ/ದಂತ ವೈದ್ಯ ಪ್ರವೇಶ ಪರೀಕ್ಷೆಯಲ್ಲಿ ಕೇಳಿಬಂದಿರುವ ಎರಡನೇ ಅಕ್ರಮದ ದೂರು ಇದಾಗಿದೆ.

ವೈದ್ಯಕೀಯ ಶಿಕ್ಷಣ ಸಚಿವ ಎ.ರಾಮದಾಸ್ ಅವರು ಆ ಪರೀಕ್ಷೆಯ ಫಲಿತಾಂಶವನ್ನು ತಡೆಹಿಡಿಯುವಂತೆ RGUHSಗೆ ಸೂಚಿಸಿದ್ದರು. ಆದರೆ ಪರೀಕ್ಷೆಯಲ್ಲಿ ಅಕ್ರಮ ನಡೆದಿಲ್ಲ ಎಂದು ಸಾಬೀತಾದ ಬಳಿಕ ಫಲಿತಾಂಶ ಘೋಷಣೆಯಾಗಿತ್ತು. ಪರೀಕ್ಷಾ ಅಕ್ರಮದ ಬಗ್ಗೆ ಸಮಾಲೋಚಿಸಲು RGUHS ಸಿಂಡಿಕೇಟ್ ಇದೇ 8ರಂದು ಸಭೆ ಸೇರಲಿದ್ದು, ಕೆಲವು ಸದಸ್ಯರು ಸಿಬಿಐ ತನಿಖೆಗೆ ಒಲವು ತೋರಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+