ಫರ್ನಾಂಡಿಸ್ ಗೆ 'ಆಸ್ಕರ್' ಹುದ್ದೆ ಪ್ರದಾನ

ನೂತನ ಸಮಿತಿಯ ವಿವರಗಳು ಹೀಗಿವೆ : ಮೋತಿಲಾಲ್ ವೋಹ್ರ ಖಚಾಂಜಿ. ರಾಜಕೀಯ ವ್ಯವಹಾರಗಳ ಮುಖ್ಯಸ್ಥರಾಗಿ ಅಹಮದ್ ಪಟೇಲ್ ನೇಮಕಗೊಂಡಿಗ್ಗಾರೆ. ಕಾಂಗ್ರೆಸ್ ಕಾರ್ಯಕಾರಿಣಿಗೆ ಪಿ ಚಿದಂಬರಂ ಅವರು ಕಾಯಂ ಆಹ್ವಾನಿತರಾಗಿರುತ್ತಾರೆ. ಹಿಂದಿನ ಸಮಿತಿಯಲ್ಲಿ ಬರೀ ಸದಸ್ಯರಾಗಿದ್ದ ಮೊಹಸೀನ ಕಿದ್ವಾಯಿ ಮತ್ತು ಅರ್ಜುನ್ ಸಿಂಗ್ ಅವರುಗಳನ್ನೂ ಕೂಡ ಕಾಯಂ ಆಹ್ವಾನಿತರ ಮಟ್ಟಕ್ಕೆ ಭಡ್ತಿ ನೀಡಿ ಸೋನಿಯಾ ಆದೇಶ ಹೊರಡಿಸಿದ್ದಾರೆ. ಆದರೆ ಸತ್ಯವ್ರತ ಚತುರ್ವೇದಿ ಅವರು ಕಿತ್ತುಹಾಕಲಾಗಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಮತ್ತು ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ ಮುಖ್ ಪ್ರಮುಖರು. ಮುಂಬೈನ ಆದರ್ಶ ಸೊಸೈಟಿ ಹಗರಣದ ಹಿನ್ನೆಲೆಯಲ್ಲಿ ವಿಲಾಸ್ ಗೆ ಕೊಕ್ ಕೊಡಲಾಗಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಂತೂ ಸಮಿತಿಯಲ್ಲಿ ಕರ್ನಾಟಕದ ಯಾರಾದರೊಬ್ಬರು ಇರುವುದು ಲಾಗಾಯ್ತಿನಿಂದ ಬಂದ ಪದ್ದತಿ. ಮಾರ್ಗರೇಟ್ ಆಳ್ವ, ಮೊಯಿಲಿ, ಬಿಕೆ ಹರಿಪ್ರಸಾದ್, ಆಸ್ಕರ್ರು.. ಯಾರೋ ಒಬ್ಬರು. ಕರ್ನಾಟಕದ ಮತ್ತೊಬ್ಬ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮರುನೇಮಕ ಮಾಡಲಾಗಿಲ್ಲ. ಆಶ್ಚರ್ಯಕರ ಸಂಗತಿಯೆಂದರೆ, ಸಂಸತ್ತಿಗೆ ಅತಿ ಹೆಚ್ಚು ಸಂಸದರನ್ನು ನೀಡಿದ ಆಂಧ್ರದ ಒಬ್ಬರೂ ಸಮಿತಿಯಲ್ಲಿ ಸ್ಥಾನ ಪಡೆದಿಲ್ಲ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಪ್ರಧಾನಿ ಮನಮೋಹನ ಸಿಂಗ್ ಮತ್ತು ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಒಟ್ಟು 19 ಸದಸ್ಯರಿರುತ್ತಾರೆ. ಕಾಂಗ್ರೆಸ್ ಅಧ್ಯಕ್ಷೆಗೆ ರಾಜಕೀಯ ಕಾರ್ಯದರ್ಶಿಯಾಗಿರುವ ಅಹ್ಮದ್ ಪಟೇಲ್ ಸ್ಥಾನ ಉಳಿಸಿಕೊಂಡಿದ್ದಾರೆ. ಸ್ಥಾನ ಉಳಿಸಿಕೊಂಡ ಇತರರೆಂದರೆ, ರಾಹುಲ್ ಗಾಂಧಿ, ಪ್ರಣಬ್ ಮುಖರ್ಜಿ, ಎಕೆ ಆಂಟನಿ, ಗುಲಾಮ್ ನಬಿ ಆಝಾದ್, ಅಂಬಿಕಾ ಸೋನಿ ಮತ್ತು ಜನಾರ್ಧನ ದ್ವಿವೇದಿ.
ಅರ್ಜುನ್ ಸಿಂಗ್ ಇನ್ನಿಲ್ಲ : ಇದೀಗ ಬಂದ ಸುದ್ದಿಯ ಪ್ರಕಾರ, ಸುದೀರ್ಘ ಕಾಲದಿಂದ ಅಸ್ವಸ್ಥರಾಗಿದ್ದ ಹಿರಿಯ ಕಾಂಗ್ರೆಸ್ಸಿಗ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಅರ್ಜುನ್ ಸಿಂಗ್ (81) ನಿಧನ ಹೊಂದಿದ್ದಾರೆ. ಕೇಂದ್ರದಲ್ಲಿ ಮಾನವ ಸಂಪನ್ಮೂಲ ಸಚಿವರವಾಗಿದ್ದರೂ ಅವರು ಸೇವೆ ಸಲ್ಲಿಸಿದ್ದರು. ಅವರನ್ನು ಇಂದು ತಾನೆ ಸೋನಿಯಾ ಗಾಂಧಿಯವರು ಕಾಂಗ್ರೆಸ್ ಕಾರ್ಯಕಾರಣಿಯಿಂದ ಕೈಬಿಟ್ಟಿದ್ದರು.












Click it and Unblock the Notifications