ಐಎಎಸ್ ಪರೀಕ್ಷೆ: ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ಇಲ್ಲ

ಉನ್ನತ ಹುದ್ದೆಗಳಿಗೆ ಮಹಿಳೆಯರನ್ನು ಆಕರ್ಷಿಸಲು ಪ್ರಸಕ್ತ ಸಾಲಿನಿಂದಲೇ ಪರೀಕ್ಷಾ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿದೆ. ಇದುವರೆಗೆ ಪರಿಶಿಷ್ಟರು ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಮಾತ್ರ ಈ ಶುಲ್ಕ ರಿಯಾಯಿತಿ ಕಲ್ಪಿಸಲಾಗಿದೆ. ಇದೀಗ ಎಲ್ಲ ವರ್ಗದ ಮಹಿಳಾ ಅಭ್ಯರ್ಥಿಗಳಿಗೂ ಈ ರಿಯಾಯಿತಿ ದೊರೆತಿದೆ.
ಯುಪಿಎಸ್‌ಸಿ, ಭಾರತೀಯ ಆಡಳಿತ ಸೇವೆ ನೇಮಕಾತಿ ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆಯ 2011ರ ವೇಳಾಪಟ್ಟಿಯನ್ನು ಇತ್ತೀಚೆಗೆ ಪ್ರಕಟಿಸಿದೆ. ಪೂರ್ವಭಾವಿ ಪರೀಕ್ಷೆಯು ಇದೇ ಜೂನ್ 12ರಂದು ನಡೆಯಲಿದೆ. ಇನ್ನು ಮುಖ್ಯ ಪರೀಕ್ಷೆಗಳು ಅಕ್ಟೋಬರ್ 29ರಿಂದ ಆರಂಭಗೊಳ್ಳುತ್ತವೆ. 880 ಹುದ್ದೆಗಳ ನೇಮಕಕ್ಕೆ ಪ್ರಕಟಣೆ ಹೊರಡಿಸಲಾಗಿದ್ದು, ಈ ಸಂಖ್ಯೆ ಅಧಿಕಗೊಳ್ಳುವ ನಿರೀಕ್ಷೆಯಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2011ರ ಮಾರ್ಚ್ 20.
ಈ ಮಧ್ಯೆ, ಪೂರ್ವಭಾವಿ ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳ ವಿವರ ಹೀಗಿದೆ: ಪತ್ರಿಕೆ 1- ಸಾಮಾನ್ಯ ಅಧ್ಯಯನ ಪರೀಕ್ಷೆ (200 ಅಂಕ)- ಅವಧಿ 2 ಗಂಟೆ. ಪತ್ರಿಕೆ 2- ಸಿವಿಲ್ ಸರ್ವಿಸಸ್ ಅಪ್ಟಿಟ್ಯೂಡ್ ಟೆಸ್ಟ್ - 200 ಅಂಕ- ಅವಧಿ 2 ಗಂಟೆ. ಹೆಚ್ಚಿನ ವಿವರಕ್ಕೆ ಈ ತಾಣಕ್ಕೆ ಭೇಟಿ ನೀಡಿ: www.upsc.gov.in, www.upscportal.com












Click it and Unblock the Notifications