ಮಂಗಳೂರು ಬ್ಲೇಡ್ ಕಂಪೆನಿಯಿಂದ 60 ಲಕ್ಷ ವಂಚನೆ

Fraud case, Kadri, Mangaluru
ಮಂಗಳೂರು, ಫೆ.28: ನಂಬುವವರು ಇರುವವರೆಗೂ ವಂಚಕರು ಹೊಸ ಹೊಸ ಜಾಲ ಹೂಡಿ ದುಡ್ಡು ಮಾಡುತ್ತಲೇ ಇರುತ್ತಾರೆ. ರಾಜ್ಯದಲ್ಲಿ ಬ್ಲೇಡ್ ಕಂಪೆನಿಗಳ ದೊಡ್ಡ ಇತಿಹಾಸದ ಅರಿವಿದ್ದರು ನಮ್ಮ ಜನ ಹಣ ದ್ವಿಗುಣ ಎಂದ ತಕ್ಷಣ, ಹಿಂದು ಮುಂದು ನೋಡದೆ ಹಣ ಹೂಡುವುದು, ಆಮೇಲೆ ಗೋಳಾಡುವುದು ಸಾಮಾನ್ಯವಾಗಿದೆ.

ಇಲ್ಲಿನ ಕರಂಗಲ್ಪಾಡಿಯಲ್ಲಿರುವ 'ಗ್ಲೋಬಲ್ ಇಂಡೆಕ್ಸ್" ಕಂಪೆನಿ ಆರೇ ತಿಂಗಳಲ್ಲಿ ಒಂದೂವರೆ ಪಟ್ಟು ಹಣ ಮರಳಿಸುವುದಾಗಿ ನಂಬಿಸಿ 40 ಕ್ಕೂ ಅಧಿಕ ಗ್ರಾಹಕರಿಗೆ 60 ಲಕ್ಷಕ್ಕೂ ಅಧಿಕ ಹಣ ವಂಚಿಸಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ. ಬ್ಲೇಡ್ ಕಂಪೆನಿ ನಡೆಸುತ್ತಿದ್ದ ಪ್ರವೀಣ್ ಶೆಟ್ಟಿ, ವಸಂತ್ ಹಾಗೂ ಶಂಕರ್ ಭಟ್ ವಿರುದ್ಧ ಹಣ ಕಳೆದುಕೊಂಡ ಪಣಂಬೂರು ಮೀನಕಳಿಯ ರಾಮಚಂದ್ರ, ಸುಶಾಂತ್ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರವೀಣ್ ಶೆಟ್ಟಿ ಹಾಗೂ ವಸಂತ್ ಎಂಬವರು ಇಂಟರ್‌ನ್ಯಾಶನಲ್ ಫಾರೆಕ್ಸ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಕೇವಲ ಆರು ತಿಂಗಳಲ್ಲಿ ಒಂದೂವರೆ ಪಟ್ಟು ಹಣ ಮರಳಿಸುವುದಾಗಿ ತಿಳಿಸಿದರು. ಗ್ಲೋಬಲ್ ಇಂಡೆಕ್ಸ್ ಸಂಸ್ಥೆಯ ಶಂಕರ್ ಭಟ್ ಅವರನ್ನು ಪರಿಚಯಿಸಿದ್ದರು. 2010ರ ಡಿಸೆಂಬರ್‌ನಲ್ಲಿ ಮೂರು ಲಕ್ಷ ರೂ ಹಣ ಠೇವಣಿ ಇಟ್ಟಿದ್ದೆ. ಜನವರಿಯಲ್ಲಿ 75 ಸಾವಿರ ರೂ. ಮರಳಿಸಿದ್ದರು.

ಅದನ್ನು ನಂಬಿ ಸ್ನೇಹಿತರ ಬಳಿಯೂ ಹಣ ಹೂಡುವಂತೆ ನಾನು ಮನವೊಲಿಸಿದ್ದೆ. ಸುಮಾರು 40ಕ್ಕೂ ಅಧಿಕ ಮಂದಿ 60 ಲಕ್ಷಕ್ಕೂ ಮಿಕ್ಕಿ ಹಣವನ್ನು ತೊಡಗಿಸಿದ್ದಾರೆ. ಆದರೆ ಫೆ.7ರ ಬಳಿಕ ಕಂಪೆನಿ ಕಚೇರಿಯ ಬಾಗಿಲು ತೆರೆದಿಲ್ಲ. ಆರೋಪಿಗಳಾದ ವಸಂತ, ಪ್ರವೀಣ್ ಶೆಟ್ಟಿ ಹಾಗೂ ಶಂಕರ ಭಟ್ ತಲೆಮರೆಸಿಕೊಂಡಿದ್ದಾರೆ ಎಂದು ಸುಶಾಂತ್ ದೂರಿನಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+