ಅಮರ ಚಿತ್ರಕಥೆಯ ಅಂಕಲ್ ಪೈ ನಿಧನ

ಜ್ಞಾನ ರಂಜನೆ ಮನೋಲ್ಲಾಸಗಳ ಅದ್ಭುತ ಮಿಕ್ಸ್ - ಕಾಮಿಕ್ಸ್!
1967ರಲ್ಲಿ ಅಂಕಲ್ ಪೈ 'ಅಮರಚಿತ್ರ' ಕಥಾ ಸರಣಿ ಆರಂಭಿಸಿದ್ದರು. 1980ರಲ್ಲಿ ಆರಂಭಿಸಿದ ಟಿಂಕಲ್ ಕಾಮಿಕ್ಸ್ ಸರಣಿ ಮನೆ ಮಂದಿಯ ಓದಿನ ಭಾಗವಾಗಿತ್ತು. ಅವರ ಟಿಂಕಲ್ ಕಾಮಿಕ್ಸ್ ಪುಸ್ತಕ ಸರಣಿಗಳು ಭಾರತೀಯ ಪ್ರಕಾಶನದ ಇತಿಹಾದಲ್ಲೇ ದಾಖಲೆ ಸೃಷ್ಟಿಸಿದ್ದು, 20 ಭಾಷೆಗಳಲ್ಲಿ 440 ಶೀರ್ಷಿಕೆಗಳಲ್ಲಿ 86 ದಶಲಕ್ಷ ಪ್ರತಿಗಳು ಮಾರಾಟವಾಗಿವೆ. ಹಲವಾರು ಪ್ರಶಸ್ತಿಗಳು, ಅಸಂಖ್ಯಾತ ಸಮ್ಮಾನಗಳು ಅವರಿಗೆ ಸಂದಿವೆ. ಹೊಸದಿಲ್ಲಿಯಲ್ಲಿ ಇದೇ ತಿಂಗಳು 19ರಂದು ನಡೆದ ಭಾರತದ ಮೊದಲ ಕಾಮಿಕ್ ಸಮಾವೇಶದಲ್ಲಿ ಪೈ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
1929ರ ಸೆಪ್ಟೆಂಬರ್ 17ರಂದು ಕಾರ್ಕಳದಲ್ಲಿ ಜನಿಸಿದ ಅನಂತ್ ಪೈ 2 ವರ್ಷದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡರು. ವೆಂಕಟರಾಯ ಮತ್ತು ಸುಶೀಲಾ ಪೈ ಇವರ ತಂದೆ-ತಾಯಿ. ಅನಂತ್ ಮತ್ತು ಲಲಿತಾ ದಂಪತಿಗೆ ಮಕ್ಕಳಿರಲಿಲ್ಲವಾದರೂ ದೇಶಾದ್ಯಂತ ಅಸಂಖ್ಯಾತ ಮಕ್ಕಳ ಪ್ರೀತಿಯನ್ನು ಗಳಿಸಿದ್ದಾರೆ. 12 ನೇ ವಯಸ್ಸಿಗೆ ಮುಂಬೈಗೆ ಬಂದ ಇವರು ಓರಿಯಂಟ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದರು. ಬಾಂಬೆ ವಿಶ್ವವಿದ್ಯಾಲಯದ ಕೆಮಿಕಲ್ ಟೆಕ್ನಾಲಜಿ ವಿಭಾಗದಲ್ಲಿ ಎರಡು ಪದವಿಗಳನ್ನು ಪಡೆದಿದ್ದರು.












Click it and Unblock the Notifications