ಪ್ರೀತಿ, ಸೆಕ್ಸ್ ನಂತರ ಮದುವೆಯಲ್ಲಿ ಸುಖಾಂತ್ಯ
ಬೆಳ್ತಂಗಡಿ,
ಫೆ.19 : ಮದುವೆಯಾಗುವುದಾಗಿ ನಂಬಿಸಿ ಯುವಕನೊಬ್ಬ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಕೊನೆಗೆ ಮದುವೆಯಾಗಲು ನಿರಾಕರಿಸಿ ಪಲಾಯನಕ್ಕೆ ಶರಣಾಗಿದ್ದ. ಆದರೆ, ಅವನ ಜಾಡು ಹಿಡಿದು ಎಳೆತಂದ ಮಹಿಳಾ ಸಂಘಟನೆ ಕಾರ್ಯಕರ್ತರು ಪೊಲೀಸ್ ಠಾಣೆಯಲ್ಲಿ ಮದುವೆಯಲ್ಲಿ ಸುಖಾಂತ್ಯಗೊಳಿಸಿದ ಘಟನೆ ಶುಕ್ರವಾರ ನಡೆದಿದೆ. id="toptextpromo">ಪರಸ್ಪರ
ಪ್ರೀತಿಸುತ್ತಿದ್ದ ಬೆಳಾಲು ಗ್ರಾಮದ ನಿವಾಸಿಗಳಾದ ಗೌಡ ಸಮುದಾಯದ ಜೋಡಿಯೊಂದು ಬೆಳ್ತಂಗಡಿ ತಾಲೂಕು ಜನವಾದಿ ಮಹಿಳಾ ಸಂಘಟನೆಯ ಸಾರಥ್ಯದಲ್ಲಿ ಶುಕ್ರವಾರ ಮದುವೆಯಾಗಿದ್ದಾರೆ. ದಿನೇಶ ಹಾಗೂ ಪೂರ್ಣಿಮಾ ಎಂಬ ಪ್ರೇಮಿಗಳು ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪೂರ್ಣಿಮಾಳೊಂದಿಗೆ ದೈಹಿಕ ಸಂಪರ್ಕ ಸುಖ ಪಡೆದ ನಂತರ ಮದುವೆಯಾಗಲು ದಿನೇಶ ನಿರಾಕರಿಸಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಈ
ಸಂದರ್ಭದಲ್ಲಿ ಆತಂಕಗೊಂಡ ಯುವತಿ ಜೆಎಂಎಸ್ ಮುಖಂಡರ ಮೊರೆಹೊಕ್ಕಿದ್ದಾಳೆ. ಬೆಳ್ತಂಗಡಿ ಪೊಲೀಸರ ಸಹಾಯ ಕೋರಿದ ಮಹಿಳಾ ಸಂಘಟನೆ, ದಿನೇಶನನ್ನು ಕರೆದುಕೊಂಡು ಬಂದು ಬುದ್ಧಿವಾದ ಹೇಳಿ, ಪೂರ್ಣಿಮಾಳೊಂದಿಗೆ ಮದುವೆ ಮಾಡಿಸುವಲ್ಲಿ ಯಶ ಕಂಡಿದೆ.











Click it and Unblock the Notifications