ಮಡೆಸ್ನಾನ ಮೂಢನಂಬಿಕೆ ಫಲ: ರವಿಶಂಕರ್ ಗುರೂಜಿ

Ravishankar Guruji in Moodabidri
ಮೂಡಬಿದರಿ, ಫೆ.17: ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಆಚರಣೆಯಲ್ಲಿರುವ ದೇವಸ್ಥಾನದಲ್ಲಿ ಮಡೆಸ್ನಾನ ಆಚರಣೆಯು ಮೂಢನಂಬಿಕೆಯಾಗಿದೆ. ಹಿಂದೆ ಯಾರೋ ಒಬ್ಬ ಮೇಧಾವಿ ಎಂಜಲಿನ ಮೇಲೆ ಮಲಗಿ ಏನಾದರೂ ವಿಶೇಷವಿದೆಯೇ ಎಂದು ಗಮನಿಸಿದ್ದನ್ನು ಆಚರಣೆ ಎಂದು ತಿಳಿದುಕೊಂಡ ನಾವು ಇಂದಿಗೂ ಅದನ್ನೇ ಅನುಸರಿಸಿಕೊಂಡು ಬರುತ್ತಿದ್ದೇವೆ. ಇಂತಹ ಆಚರಣೆಯ ಬಗ್ಗೆ ಯಾವುದೇ ಶಾಸ್ತ್ರದಲ್ಲಿ ಉಲ್ಲೇಖವಿಲ್ಲ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ.

ಇಲ್ಲಿನ ಮಿಜಾರಿನ ಶೋಭಾವನದಲ್ಲಿ ಗುರುವಾರ ನಡೆದ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಕರ್ನಾಟಕ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಭಾಗವಹಿಸಿದ್ದರು.

ಕೃಷಿ ಭೂಮಿಯಲ್ಲಿ ಕೈಗಾರಿಕೆ ಏಕೆ?: ದೇಶ ಪ್ರಗತಿಯಾಗಬೇಕಾದರೆ ಕೃಷಿಯೂ ಬೇಕು. ಕೈಗಾರಿಕೆಯೂ ಬೇಕು. ಆದರೆ, ಕೃಷಿ ಭೂಮಿಯನ್ನು ಕಬಳಿಸಿ ಕೈಗಾರಿಕೆಗಳ ಸ್ಥಾಪನೆ ಬೇಡ ಎಂದು ಅಭಿಪ್ರಾಯಪಟ್ಟ ರವಿಶಂಕರ್ ಗುರೂಜಿ, ಬಂಜರು ಭೂಮಿಯಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವಲ್ಲಿ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.

ಆಯುರ್ವೇದ ವೈದ್ಯ ಪದ್ಧತಿ ಹಾಗೂ ಯೋಗ ನಮ್ಮ ದೇಶದಿಂದ ದೂರವಾಗುತ್ತಿದ್ದು, ವಿದೇಶದಲ್ಲಿ ಹೆಚ್ಚು ಜನ ಮನ್ನಣೆಯನ್ನು ಪಡೆಯುತ್ತಿದೆ. ಈ ನಿಟ್ಟಿನಲ್ಲಿ ಸರಕಾರವು ನಿದ್ದೆಯಿಂದ ಎಚ್ಚೆತ್ತುಕೊಂಡು ಆಯುರ್ವೇದ ಹಾಗೂ ಯೋಗ ಪದ್ಧತಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದು ರವಿಶಂಕರ್ ತಿಳಿಸಿದರು.

2012ಕ್ಕೆ ಪ್ರಳಯ ಸುಳ್ಳು: ಅಮೆರಿಕನ್ ಮಾರ್ಕೆಟಿಂಗ್ ಸ್ಟೈಲಿನಿಂದ ಜಗತ್ತಿನಲ್ಲಿ 1999ರಲ್ಲಿ ಪ್ರಳಯ ಆಗುತ್ತದೆ ಎಂಬ ಗುಲ್ಲು ಹಬ್ಬಿತ್ತು. ನಂತರ 2000ಕ್ಕೆ ಅದು ಮುಂದುವರಿಯಿತು ಬಳಿಕ ಇದೀಗ ಪುನಹ 2012ಕ್ಕೆ ಪ್ರಳಯವಾಗುತ್ತದೆ ಎಂಬ ಸುದ್ದಿ ಹಬ್ಬಿದೆ ಇದು ಶುದ್ಧ ಸುಳ್ಳು. 2012ಕ್ಕೆ ಪ್ರಳಯವಾಗುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+