ಯುದ್ಧಪೀಡಿತ ಅಫಘಾನಿಸ್ತಾನದಲ್ಲಿ ವೀರ್ಯಬಾಹುಗಳು !
ಲಂಡನ್,
ಫೆ.18: ಬ್ರಿಟನ್ನಿನ ಅನೇಕ ಯೋಧರಿಗೆ ಯುದ್ಧಪೀಡಿತ ಅಫಘಾನಿಸ್ತಾನ ಸಾವಿನ ಮನೆಯಾಗಿ ಮಾರ್ಪಟ್ಟಿದೆ. ಸಾವು ತಮ್ಮನ್ನು ಯಾವಾಗ ಬೇಕಾದರೂ ಬೇಟೆಯಾಡಬಹುದು ಎಂಬ ಆತಂಕದಲ್ಲಿರುವ ಯೋಧರು ತಮ್ಮ ಸಾವಿನನಂತರವೂ ಬದುಕುಳಿಯುವ ಅಭಿಲಾಷೆ ಹೊಂದಿದ್ದಾರೆ. ಅದಕ್ಕಾಗಿ ಅವರು ತಮ್ಮ ವೀರ್ಯವನ್ನು ಶೇಖರಿಸಿಡತೊಡಗಿದ್ದಾರೆ. id="toptextpromo">ಬ್ರಿಟನ್
ಸೇನೆಯೂ ಇದಕ್ಕೆ ಅಧಿಕೃತ ಒಪ್ಪಿಗೆ ಒತ್ತಿದೆ. ಆಫ್ಘನ್‌ನಲ್ಲಿ ವೀರ್ಯ ಸಂಗ್ರಹಾಲಯವನ್ನೂ ತೆರೆದಿದೆ. ಯೋಧರ ಮಡದಿ ಅಥವಾ ಪ್ರೇಯಸಿಯರು ಯೋಧರ ಮರಣಾನಂತರ ಅವರ ವೀರ್ಯವನ್ನು ಬಳಸಿ, ತದ್ರೂಪಿಗಳಿಗೆ ಜನ್ಮ ನೀಡಬಹುದಾಗಿದೆ ಎಂದು ದಿ ಸನ್ ಪತ್ರಿಕೆ ವರದಿ ಮಾಡಿದೆ. id='are-slot-1' class='oiad oi-axt oiadv'> id='top-searched-articles'>ಯುದ್ಧಕ್ಕೆ
ತೆರಳುವ ಮುನ್ನಾ ಸಂದರ್ಭದಲ್ಲಿ ರಕ್ಷಣಾ ಸಚಿವಾಲಯವೇ ತನ್ನ ಯೋಧರಿಗೆ ವೀರ್ಯ ಸಂರಕ್ಷಣೆ ಬಗ್ಗೆ ತಿಳಿವಳಿಕೆ, ಸಲಹೆಗಳನ್ನು ನೀಡುತ್ತ್ತಿದೆ. ಇದಕ್ಕೆ ವಿಮಾ ಸೌಲಭ್ಯವನ್ನೂ ಕಲ್ಪಿಸಿದೆ. ಸುಧಾರಿತ ವಿದ್ಯುನ್ಮಾನ ಬಾಂಬ್ ಸ್ಫೋಟಗಳಿಂದಾಗಿ ತೊಡೆಗಳಿಗೆ ಗಾಯಗಳಾಗಿ ಯೋಧರು ಸಂತಾನಶಕ್ತಿಯನ್ನೇ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗೋಪಾಯ ಕಂಡುಕೊಳ್ಳಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.











Click it and Unblock the Notifications