ಕಳ್ಳಭಟ್ಟಿ: ದಾಳಿಗೆ ಹೋಗಿ ಕಲ್ಲೇಟು ತಿಂದ ರೇಣುಕಾ
ಬೆಳಗಾವಿ,
ಫೆ.17: ಇಲ್ಲಿನ ಕಾರಾವಿಗುಡ್ಡ ಪ್ರದೇಶದಲ್ಲಿ ಕಳ್ಳಭಟ್ಟಿ ಅಡ್ಡೆಗಳ ಮೇಲೆ ದಾಳಿ ನಡೆಸಲು ಹೋಗಿದ್ದ ಅಬಕಾರಿ ಸಚಿವ ಎಂ. ರೇಣುಕಾಚಾರ್ಯ ಅವರ ಮೇಲೆ ದುಷ್ಕರ್ಮಿಗಳು ಪ್ರತಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಸಚಿವ ರೇಣುಕಾಚಾರ್ಯಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಬಕಾರಿ ನಿರೀಕ್ಷಕ ನಾಯಕ್ ಅವರ ಸ್ಥಿತಿ ಗಂಭಿರವಾಗಿದೆ ಎನ್ನಲಾಗಿದೆ. id="toptextpromo">1975ರಿಂದಲೂ
ಇಲ್ಲಿನ ಬೆಟ್ಟ ಪ್ರದೇಶದಲ್ಲಿ ಕಳ್ಳಭಟ್ಟಿ ದಂದೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಸಚಿವ ರೇಣುಕಾಚಾರ್ಯ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು, ಡಿವೈ.ಎಸ್‌ಪಿ, ಇನ್ಸ್‌ಪೆಕ್ಟರ್ ಸೇರಿದಂತೆ ಅನೇಕ ಪೊಲೀಸರು ಮತ್ತು ಮಾಧ್ಯಮದವರೊಂದಿಗೆ ಗುರುವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ತೆರಳಿದ್ದರು. id='are-slot-1' class='oiad oi-axt oiadv'> id='top-searched-articles'>ದಾಳಿಯ
ಸುಳಿವು ಪಡೆದ ನೂರಾರು ಕಳ್ಳಭಟ್ಟಿಕೋರರು ಸಚಿವರ ತಂಡದ ಮೇಲೆ ಮಾರಕಾಸ್ತ್ರಗಳೊಂದಿಗೆ ದಾಳಿಗೆ ಮುಂದಾದರು. ಜತೆಗೆ ಕಲ್ಲು ತೂರಾಟವನ್ನು ನಡೆಸಿದರು. ದುಷ್ಕರ್ಮಿಗಳನ್ನು ಹಿಮ್ಮೆಟ್ಟಿಸಲು ಪೊಲೀಸರು ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಸಚಿವ ರೇಣುಕಾಚಾರ್ಯ, ದಾಳಿಕೋರರನ್ನು ಬಂಧಿಸಿ ಗಡಿಪಾರು ಮಾಡಲಾಗುವುದು ಎಂದು ತಿಳಿಸಿದ್ದಾರೆ.











Click it and Unblock the Notifications