ಸರ್ಚ್ ಇಂಜಿನ್ ಮರೆತುಬಿಡಿ ಬಂದಿದೆ ಆನ್ಸರ್ ಇಂಜಿನ್
ಲಂಡನ್,
ಫೆ.16: ನೇರ ಪ್ರಶ್ನೆಗೆ ನೇರ ಉತ್ತರ ಕುವೆಂಪು ಇಂದ ಹಿಡಿದು ಬರ್ಟ್ರಾಂಡ್ ರಸೆಲ್ ವರೆಗೂ dumbledore ಬದುಕಿದ್ದಾನಾ? ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಉತ್ತರ ಸಿಗದಿದ್ದರೆ ಮಾಹಿತಿ ಸೇರಿಸಲು ಕೋರುತ್ತದೆ. ನಿಜಜ್ಞಾನ ಹಂಚಿಕೆ ಕಾರ್ಯಕ್ಕೆ ಮುಂದಾಗಿರುವ ಈ ವೆಬ್ ತಾಣದ ಹೆಸರು "trueknowledge.com". ಇದು ವೆಬ್ ತಾಣ ಎನ್ನುವುದಕ್ಕಿಂತ 'ಆನ್ಸರ್ ಇಂಜಿನ್' ಎನ್ನುವುದು ಸೂಕ್ತ. ಸರ್ಚ್ ಇಂಜಿನ್ ನ ಸಾಧ್ಯಸಾಧ್ಯತೆಗಳಿಗೆ ಸಡ್ಡು ಒಡೆಯಲು ಸಜ್ಜಾಗಿರುವ ಈ ಆನ್ಸರ್ ಇಂಜಿನ್ ನೇರ ಪ್ರಶ್ನೆಗೆ ನೇರ ಉತ್ತರ ನೀಡುತ್ತದೆ ಎಂದು ಕೇಂಬ್ರಿಡ್ಜ್ ಮೂಲದ ವೆಬ್ ನಿರ್ಮಾತೃ ವಿಲಿಯಂ ಟನ್ ಸ್ಟಾಲ್ ಪೆಡೊ ಹೇಳುತ್ತಾರೆ. ನೂರು ಕೋಟಿ ಪ್ರಶ್ನೆಗಳನ್ನು ಉತ್ತರಿಸುವ ಸಾಮರ್ಥ್ಯವುಳ್ಳ ಈ ಇಂಜಿನ್ ನಿರಂತರವಾಗಿ ಕಾರ್ಯ ನಿರ್ವಹಿಸುವಂತೆ ರಚಿಸಲಾಗಿದೆ. id="toptextpromo">ವೆಬ್
ವೀಕ್ಷಕರು ಕೇಳುವ ಪ್ರಶ್ನೆಯಲ್ಲಿರುವ ಕೀ ಪದಗಳ ಆಧಾರದ ಮೇಲೆ ಸೂಕ್ತವಾದ ಉತ್ತರ ಹಾಗೂ ಪರಾಮರ್ಶನೆ ಮಾಡಲು ಲಿಂಕ್ ಗಳನ್ನು ಕೊಡಲಾಗುತ್ತದೆ. "ಯಡಿಯೂರಪ್ಪ ಹುಟ್ಟಿದ್ದು ಯಾವಾಗ?" ಅನ್ನೋ ಪ್ರಶ್ನೆಗೂ ಈ ಇಂಜಿನ್ ಉತ್ತರ ಕೊಡುತ್ತದೆ. ಉತ್ತರ ಗೊತ್ತಿಲ್ಲದಿದ್ದರೆ, ಗೊತ್ತಿಲ್ಲ ಎಂದು ತೋರಿಸುತ್ತದೆ. "ಹೆಚ್ಚೆಚ್ಚು ಮಾಹಿತಿಯನ್ನು ಈ ಇಂಜಿನ್ ಗೆ ತುಂಬಿದಷ್ಟು ಹೆಚ್ಚೆಚ್ಚು ಜನರನ್ನು ತಲುಪಬಹುದು. ಹಲವು ವರ್ಷಗಳ ಕಾಲ ವಿಶಿಷ್ಟ ತಂತ್ರಜ್ಞಾನ ಬಳಸಿ ಈ ಆನ್ಸರ್ ಇಂಜಿನ್ ರೂಪಿಸಲಾಗಿದೆ. ಸರ್ಚ್ ಇಂಜಿನ್ ಮಾದರಿಗಿಂತ ಸಾರ್ವಜನಿಕರಿಗೆ ಪ್ರಶ್ನೆ ಕೇಳಿ ಉತ್ತರ ಪಡೆಯುವುದು ಸುಲಭ ಆದ್ದರಿಂದ ಈ ವಿಧಾನ ಬಳಕೆ ಹೆಚ್ಚು ಜನಪ್ರಿಯವಾಗುವ ಭರವಸೆ ಇದೆ" ಎಂದು ವಿಲಿಯಮ್ ಹೇಳುತ್ತಾರೆ. id='are-slot-1' class='oiad oi-axt oiadv'> id='top-searched-articles'>ಈ
ಮಾಹಿತಿ ಕೋಶಕ್ಕೆ ಓದುಗರೂ ಕೂಡಾ ಮಾಹಿತಿ ಸೇರಿಸಬಹುದು. ಮಾಹಿತಿ ಸೇರಿಸುವ ವಿಧಾನ ಕೂಡಾ ಸುಲಭವಾಗಿದ್ದು, ಸೇರಿಸಿದ ಮಾಹಿತಿಗೆ ಆಧಾರ ಯಾವುದು ಎಂಬ ಲಿಂಕ್ ಸೇರಿಸಬಹುದು. ಇತ್ತೀಚಿನ ಪ್ರಶ್ನೆಗಳು, ನಿಮ್ಮ ಪ್ರಶ್ನೆಗೆ ಹೊಂದುವ ಪ್ರಶ್ನೆಗಳು, ಬಾಹ್ಯ ವೆಬ್ ತಾಣಗಳ ಲಿಂಕ್ ಗಳು ಹಾಗೂ ಪ್ರಶ್ನೆ ಕೇಳುವ ಸರಿ ವಿಧಾನ ಕೂಡಾ ಲಭ್ಯವಿದೆ. ಪ್ರಶ್ನೆ ಇಷ್ಟ ಟ್ರೂ ನಾಲೆಡ್ಜ್ ಬ್ಲಾಗ್ ನಲ್ಲಿ ಇತ್ತೀಚಿನ ಬೆಳವಣಿಗೆಗಳು ಹಾಗೂ ವೀಕ್ಷಕರ ಸಮಸ್ಯೆಗಳಿಗೆ ಉತ್ತರ ಕೂಡಾ ಸಿಗುತ್ತದೆ. ಇನ್ನೇಕೆ ತಡಾ ನಿಮ್ಮ ಪ್ರಶ್ನೆಗಳನ್ನು ಹಾಕಿ ಉತ್ತರ ಪಡೆಯಿರಿ.











Click it and Unblock the Notifications