ಫೇಸ್ ಬುಕ್ ಮೊಬೈಲ್ ಫೋನ್ ಬರಲಿದೆ

INQ Favebook mobile phone
ಲಂಡನ್, ಫೆ.16: ಫೇಸ್ ಬುಕ್ ಎಂಬ ಸಾಮಾಜಿಕ ಜಾಲತಾಣ ಇಂದು ಜಾಗತಿಕವಾಗಿ ಅತಿದೊಡ್ಡ ಯಶಸ್ವಿ ಉದ್ಯಮವಾಗಿ ಬೆಳೆದಿದೆ. ಫೇಸ್ ಬುಕ್ ನಲ್ಲಿ ಏನು ನಡೆಯುತ್ತಿದೆ? ವಾಲ್ ನಲ್ಲಿ ಯಾರು ಏನು ಬರೆದರು? ನನ್ನ ಪೋಸ್ಟ್ ಲೈಕ್ ಮಾಡಿದ್ರಾ? ಇತ್ಯಾದಿ ಕುತೂಹಲ ಯುವಜನಾಂಗದ ದಿನ ನಿತ್ಯ ಅನುಭವಿಸುತ್ತಿರುತ್ತಾರೆ. ಯುವಜನಾಂಗದ ನಾಡಿಮಿಡಿತ ಅರಿತಿರುವ ಫೇಸ್ ಬುಕ್ ಗಾಗಿ ಪ್ರತ್ಯೇಕ ಮೊಬೈಲ್ ಫೋನ್ ಉತ್ಪಾದಿಸಲು ಐಎನ್ ಕ್ಯೂ ಸಂಸ್ಥೆ ಸಿದ್ಧತೆ ನಡೆಸಿದೆ.

ಎರಡು ಹೊಸ ಆಂಡ್ರ್ಯಾಡ್ ಸ್ಮಾರ್ಟ್ ಫೋನ್ ಗಳನ್ನು ಯುಕೆ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಾಗಿ ಐಎನ್ ಕ್ಯೂ ಹೇಳಿದೆ. 18 ರಿಂದ 30 ವಯೋಮಾನದವರ ಅಭಿರುಚಿಗೆ ತಕ್ಕಂತೆ ಫೋನ್ ವಿನ್ಯಾಸಗೊಳಿಸಲಾಗಿದೆ. ಐಎನ್ ಕ್ಯೂ ಕ್ಲೌಡ್ ಟಚ್ ಹಾಗೂ ಐಎನ್ ಕ್ಯೂ ಕೌಡ್ ಕ್ಯೂ ಎಂಬ ಎರಡು ಮೊಬೈಲ್ ಮಾದರಿಗಳು ಮಾರುಕಟ್ಟೆ ಪ್ರವೇಶಿಸಲಿದೆ.

ಫೇಸ್ ಬುಕ್ ಅಪ್ಡೇಟ್ ಗಳು, ಚಿತ್ರಗಳು, ವಿಡಿಯೋಗಳು ಹಾಗೂ ಫೇಸ್ ಬುಕ್ ನ ಪೂರ್ಣ ಸಂಪರ್ಕವನ್ನು ಈ ಫೋನ್ ಗಳು ಹೊಂದಿದೆ, ಚಾಟ್, ಮೆಸೇಜ್, ವಾಲ್ ಪೋಸ್ಟಿಂಗ್, ಫ್ರೆಂಡ್ಸ್ ಸರ್ಚಿಂಗ್ ಹಾಗೂ ನೋಟಿಪಿಕೇಷನ್ ಗಳು ತಕ್ಷಣಕ್ಕೆ ಲಭ್ಯವಾಗುತ್ತದೆ.

ಅಡ್ರಸ್ ಬುಕ್ ಬದಲಿಗೆ ಫ್ರೆಂಡ್ಸ್ ಲಿಸ್ಟ್, ಫೇಸ್ ಬುಕ್ ಇವೆಂಟ್ ಪಟ್ಟಿಗೆ ಹೊಂದುವಂತೆ ಗೂಗಲ್ ಕ್ಯಾಲೆಂಡರ್ ಸಹ ನೀಡಲಾಗಿದೆ. ಯುವ ಜನಾಂಗದ ಸಂವಹನ ಕ್ರಿಯೆ ಹೆಚ್ಚಿಸಲು ಈ ಮೊಬೈಲ್ ಗಳು ಸಹಕಾರಿ. ಟೆಕ್ಸ್ ಮೆಸೇಜ್ ಕಳಿಸುವಂತೆ ಸುಲಭವಾಗಿ ಫೇಸ್ ಬುಕ್ ವಾಲ್ ನಲ್ಲಿ ಬರೆಯಬಹುದು ಎಂದು ಐಎನ್ ಕ್ಯೂ ಸಹ ಸ್ಥಾಪಕ ಕೆನ್ ಜಾನ್ ಸ್ಟನ್ ಹೇಳುತ್ತಾರೆ.

ಮಾರುಕಟ್ಟೆಯಲ್ಲಿ ಗೆಲ್ಲಲು ಸಾಧ್ಯವೇ?: ಹಲವು ಸಾಮಾಜಿಕ ಜಾಲ ತಾಣಗಳ ಸಂಪರ್ಕ ಸಾಧ್ಯ ಎಂದು ಗ್ರಾಹಕರನು ಸೆಳೆಯುತ್ತಿರುವ ಅನೇಕ ಕಂಪೆನಿಗಳ ನಡುವೆ ಐಎನ್ ಕ್ಯೂ, ಫೇಸ್ ಬುಕ್ ಅನ್ನು ನೆಚ್ಚಿಕೊಂಡು ಮೊಬೈಲ್ ಪರಿಚಯಿಸುತ್ತಿದೆ. ಯುಕೆಯಲ್ಲಿ ಮೊಬೈಲ್ ಫೋನ್ ಯಶಸ್ವಿಯಾದರೆ, ಭಾರತ ಸೇರಿದಂತೆ ಉಪಖಂಡದಲ್ಲಿ ಈ ಮೊಬೈಲ್ ಫೋನ್ ಕಾಣಿಸಿಕೊಳ್ಳಲಿದೆ. ಎಚ್ ಟಿಸಿ ಕೂಡಾ ಚಾಚಾ, ಸಾಲ್ಸಾ ಎಂಬ ಹೆಸರಿನಲ್ಲಿ ಫೇಸ್ ಬುಕ್ ಮೊಬೈಲ್ ಫೋನ್ ಹೊರ ತರುತ್ತಿದೆ. ಆದರೆ, ಮಾರ್ಕ್ ಝಕೆರ್ ಬರ್ಗ್ ಮಾತ್ರ ಆಧಿಕೃತವಾಗಿ ಫೇಸ್ ಬುಕ್ ಮೊಬೈಲ್ ಫೋನ್ ತರುವ ಯೋಜನೆಯಿಲ್ಲ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+