ಅತ್ಯಾಚಾರವೆಸಗಿ, ಬಳಿಕ ಮದುವೆಯೂ ಆದ ಸೇನಾಧಿಕಾರಿ !

'ಸೇನಾ ಮೇಜರ್ ಉಮೇಶ್ ಮದುವೆ ವಿಷಯ ಮಾತನಾಡಲು ತನ್ನನ್ನು ನಗರದ ಹೋಟೆಲ್‌ಗೆ ಕರೆದೊಯ್ದಿದ್ದರು. ಆದರೆ ಅಲ್ಲಿ ಮತ್ತುಬರಿಸುವ ಔಷಧ ನೀಡಿ, ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ' ಎಂದು ಜೈಪುರದ 23 ವರ್ಷದ ಪದವಿ ವಿದ್ಯಾರ್ಥಿನಿ ಫೆಬ್ರವರಿ ೩ರಂದು ಇಲ್ಲಿನ ಕರ್ಧನಿ ಪೊಲೀಸರಿಗೆ ದೂರು ನೀಡಿದ್ದರು.
ವಿಷಯವೇನೆಂದರೆ, ಉಮೇಶ್ ಸ್ವಾಮಿ ಎಂಬಾತ ಜಮ್ಮು ಕಾಶ್ಮೀರದಲ್ಲಿ ಮೇಜರ್ ಆಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಉಮೇಶ್‌ಗೆ ಬೇರೊಬ್ಬರೊಂದಿಗೆ ವಿವಾಹ ನಿಶ್ಚಿತಾರ್ಥವೂ ಆಗಿತ್ತು. ಆದರೆ ಜೈಪುರದ ಯುವತಿಯತ್ತ ಕಣ್ಣುಹಾಕಿದ ಉಮೇಶ್, ಯುವತಿಯ ಮನೆಯವರೊಂದಿಗೆ ಮಾತುಕತೆ ನಡೆಸಿ, ಮದುವೆಯಾಗುವುದಾಗಿಯೂ ತಿಳಿಸಿದ. ಈ ಮಧ್ಯೆ, ತನಗೆ ನಿಶ್ಚಿತಾರ್ಥ ಆಗಿರುವುದನ್ನು ಮುಚ್ಚಿಟ್ಟ. ಉಮೇಶ್‌ನನ್ನು ನಂಬಿದ ಜೈಪುರದ ಯುವತಿ ಅವನೊಂದಿಗೆ ಮದುವೆ ವಿಷಯ ಮಾತನಾಡಲು ಹೋಟೆಲ್‌ಗೆ ತೆರಳಿದ್ದಾಗ ಅತ್ಯಾಚಾರ ಘಟನೆ ನಡೆದಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜಮ್ಮು ಕಾಶ್ಮೀರದಲ್ಲಿ ಸೇನಾಧಿಕಾರಿಗಳನ್ನು ಸಂಪರ್ಕಿಸಿದರು. ತಾನು ಎಸಗಿರುವ ಪ್ರಮಾದದ ಗಂಭೀರತೆಯನ್ನು ಅರಿತುಕೊಂಡ ಉಮೇಶ್ ತಕ್ಷಣ ಸೀದಾ ಜೈಪುರಕ್ಕೆ ಬಂದು, ತಾನು ಅತ್ಯಾಚಾರವೆಸಗಿದ್ದ ಯುವತಿಯೊಂದಿಗೇ ಮದುವೆಯಾಗಿ, ಪ್ರಕರಣಕ್ಕೆ ಸುಖಾಂತ್ಯ ಕರುಣಿಸಿದ್ದಾನೆ. ಪೊಲೀಸರು ಕೇಸ್ ಖಲಾಸ್ ಎಂದಿದ್ದಾರೆ.












Click it and Unblock the Notifications