ಹಾಲಾಯ್ತು, ಈಗ ಕಾಫಿ ಪುಡಿ ಬೆಲೆಯೂ ಏರಿಕೆ

coffee
ಬೆಂಗಳೂರು, ಫೆ.16: ಹಾಲಿನ ಬೆಲೆ ಏರಿಕೆ ಜತೆಗೆ ಕಾಫಿ ಪುಡಿ ಬೆಲೆಯೂ ಹೆಚ್ಚಾಗುತ್ತಿದ್ದು ಕಾಫಿ ಪ್ರಿಯರಿಗೆ ಕಹಿ ಅನುಭವವಾಗತೊಡಗಿದೆ. ಮೊದಲು ಸಕ್ಕರೆ ನಂತರ ಹಾಲು. ಈಗ ಕಾಫಿ ಪುಡಿ. ಅಲ್ಲಿಗೆ ಹೋಟೆಲ್‌ಗಳಲ್ಲಿ ಒಂದು ಕಪ್ ಸಾಮಾನ್ಯ ಕಾಫಿ 10 ರೂ. ದಾಟುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲವೆಡೆ ಒಂದು ಕಪ್ ಕಾಫಿ ಬೆಲೆ ಈಗಾಗಲೇ 15 ರು.ನತ್ತ ಮುಖ ಮಾಡಿದೆ!

ಕರ್ನಾಟಕದಲ್ಲಿ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಹೆಚ್ಚು ಕಾಫಿ ಬೆಳೆಯಲಾಗುತ್ತದೆ. ಈ ಬಾರಿ ಮುಂಗಾರು ಮಳೆ ಅಧಿಕವಾಗಿದ್ದ ಕಾರಣ ಗಿಡಗಳಿಂದ ಶೇ. 60ರಷ್ಟು ಕಾಫಿ ಹಣ್ಣು ನೆಲಕ್ಕೆ ಉದುರಿ ನಷ್ಟವಾಗಿದೆ. ಇದರಿಂದ ಉಳಿದ ಶೇ. 40ರಷ್ಟು ಕಾಫಿ ಬೀಜಕ್ಕೆ ಸಿಕ್ಕಾಪಟ್ಟೆ ಬೆಲೆ ಬಂದಿದೆ. ಶುದ್ಧೀಕರಿಸಿದ (ಪ್ಲಾಂಟೇಶನ್) 50 ಕೆ.ಜಿ ಚೀಲದ ಅರೇಬಿಕಾ ಬೀಜಕ್ಕೆ 10-11 ಸಾವಿರ ರು. ಇದ್ದರೆ ಕಚ್ಚಾ (ಚೆರ್ರಿ) ಅರೇಬಿಕಾಕ್ಕೆ 5 ಸಾವಿರ ರು. ಬೆಲೆ ಇದೆ. ಇನ್ನು, ಶುದ್ಧಿಕರಿಸಿದ 50 ಕೆಜಿ ರೊಬಸ್ಟಾಗೆ 4,500 ಮತ್ತು ಕಚ್ಚಾ ರೊಬಸ್ಟಾಗೆ 2,500 ರು. ಇದೆ.

ಕಾಫಿ ಬೆಲೆ ಏರಿಕೆಯಿಂದ ಸಾಮಾನ್ಯರ ಪಾಲಿಗೆ ಕಹಿಯಾಗಿದ್ದರೂ ಬೆಳೆಗಾರರು ಮಾತ್ರ ಸಹಜವಾಗಿಯೇ ಸಂತಸಗೊಂಡಿದ್ದಾನೆ. ಮಳೆ ವೈಪರೀತ್ಯದಿಂದಾಗಿ ಬೆಳೆ ನಷ್ಟ ಅನುಭವಿಸಿ ಆತಂಕದಲ್ಲಿ ಬೆಳೆಗಾರರು ಸದ್ಯ ಕಾಫಿಗೆ ಸಿಗುತ್ತಿರುವ ದಾಖಲೆ ಬೆಲೆಯಿಂದಾಗಿ ತುಸು ನೆಮ್ಮದಿ ಅನುಭವಿಸುವಂತಾಗಿದೆ. ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಕಾಫಿ ಉತ್ಪಾದಿಸುವ ಬ್ರೆಜಿಲ್‌ನಲ್ಲೂ ಕಾಫಿ ಬೆಳೆ ಇಳಿಮುಖವಾಗಿದೆ. ಇದರಿಂದ ರಾಜ್ಯದಲ್ಲಿ ಕಾಫಿ ಬೀಜಕ್ಕೆ ಎಲ್ಲಿಲ್ಲದ ಬೇಡಿಕೆ ಬಂದು ದರ ದುಪ್ಪಟ್ಟಾಗಿದೆ.

ಪುಡಿ ಬೆಲೆಯಂತೂ ಗಗನದಲ್ಲಿ: ಕಳೆದ ಒಂದೂವರೆ ದಶಕದಲ್ಲಿ ಕಾಫಿ ಬೀಜದ ಬೆಲೆ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿರುವುದು ಬೆಳೆಗಾರರಲ್ಲಿ ಸಹಜವಾಗಿಯೇ ಸಂತಸ ತಂದಿದೆ. ಈ ಹಿಂದೆ ಶುದ್ಧಿಕರಿಸಿದ ಕಾಫಿ ಬೀಜ ಒಂದು ಕೆಜಿಗೆ 180 ರು. ಇತ್ತು. ಕಚ್ಚಾ ಬೀಜ 140 ರು. ಹಾಗೂ ರೊಬಸ್ಟಾ 100 ರು. ಇತ್ತು. ಆದರೀಗ ಈ ಬೆಲೆಗಳು ದುಪ್ಪಟ್ಟಾಗಿವೆ. ಇದರ ಪರಿಣಾಮ 1 ಕೆಜಿ ಪುಡಿಗೆ 180-220 ಇದ್ದ ಧಾರಣೆ ಈ 300 ರು. ನತ್ತ ಜಿಗಿದಿದೆ !

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+