ಮಾಜಿ ಸರ್ವಾಧಿಕಾರಿ ಮುಬಾರಕ್ ಈಗ ಹೇಗಿದ್ದಾನೆ?
ಲಂಡನ್,
ಫೆ.15- ಈಜಿಪ್ಟ್‌ನ ಅಧ್ಯಕ್ಷನಾಗಿ ಮೆರೆದ ನಿರಂಕುಶ ಹೊಸ್ನಿ ಮುಬಾರಕ್ ಪಲಾಯನಗೊಂಡ ಬಳಿಕ ಮಾನಸಿಕವಾಗಿ ಮತ್ತು ದೈಹಿಕವಾಗಿ ಸೋತುಹೋಗಿದ್ದಾನೆ. ಶರ್ಮ್-ಎಲ್-ಷೇಕ್‌ಲ್ಲಿರುವ ವೈಭವಯುತ ರೆಡ್ ಸೀ ವಿಲ್ಲಾ ರೆಸಾರ್ಟ್‌ನಲ್ಲಿ ನಡೆದಾಡಲೂ ಆಗದೆ ಒತ್ತಡದಲ್ಲಿ ಬೇಯುತ್ತಿದ್ದಾನೆ. id="toptextpromo">ಮುಂಬಾರಕ್
ತುಂಬಾ ಅಸ್ವಸ್ಥಗೊಂಡಿದ್ದಾನೆ. ಕ್ಯಾನ್ಸರ್ ತಗಲಿಕೊಂಡಿದೆ ಎಂದು ಮುಬಾರಕ್‌ನ ಅಂಗರಕ್ಷಕರೇ ರೆಸಾರ್ಟ್‌ನಲ್ಲಿರುವವರಿಗೆ ತಿಳಿಸಿರುವುದಾಗಿ ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ. ಕಳೆದ ಶುಕ್ರವಾರ ಅಧಿಕಾರ ತ್ಯಜಿಸಿದ 82 ವರ್ಷದ ಸರ್ವಾಧಿಕಾರಿ ದಿಢೀರನೆ ಅನಾರೋಗ್ಯಕ್ಕೆ ತುತ್ತಾಗಿದ್ದು, ತನಗೆ ಯಾವುದೇ ವೈದ್ಯೋಪಚಾರವೂ ಬೇಡ ಎಂದಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಈಜಿಪ್ಟ್‌ನ
ಭಾರಿ ಉದ್ಯಮಿ ಹುಸೇನ್ ಸಲೀಂಗೆ ಸೇರಿದ ಈ ರೆಸಾರ್ಟ್‌ನ ನೆಲಮಾಳಿಗೆಯಲ್ಲಿ ಮುಬಾರಕ್ ದುಃಸ್ಥಿತಿಯಲ್ಲಿದ್ದಾನೆ. ತುಂಬಾ ತುಂಬಾ ಬಳಲಿ ಬೆಂಡಾಗಿದ್ದಾನೆ. ವೈದ್ಯರು, ಆಂಬುಲೆನ್ಸ್‌ಗಳು ರೆಸಾರ್ಟ್‌ನ ಖಾಸಗಿ ವಲಯದಲ್ಲಿ ಕಂಡುಬಂದಿವೆ. ಈಜಿಪ್ಟ್‌ನ ಅಮೆರಿಕ ರಾಯಭಾರಿ ಸಮೇಹ್ ಸೌಕ್ರಿ ಸ್ವತಃ ಇದನ್ನು ದೃಢಪಡಿಸಿದ್ದಾರೆ.











Click it and Unblock the Notifications