ಪ್ರೇಮಿಗಳ ವಾರದ ವಹಿವಾಟು 12 ಕೋಟಿ

ರಸ್ತೆ ಬದಿಯಲ್ಲಿ ಹೂ ಮಾರುವ ವ್ಯಾಪಾರಿಯಿಂದ ಹಿಡಿದು, ದೂರವಾಣಿ ಕಂಪೆನಿಗಳು, ಹೋಟೆಲ್, ರೆಸ್ಟೋರೆಂಟ್‌ಗಳು, ಉಡುಗೊರೆ ಮಳಿಗೆಗಳು, ಚಿನ್ನಾಭರಣ ಅಂಗಡಿಗಳು, ಪುಷ್ಪೋದ್ಯಮಿಗಳು ಎಲ್ಲರಿಗೂ ಪ್ರೇಮಿಗಳ ವಾರ ಭರ್ಜರಿ ವ್ಯಾಪಾರವನ್ನು ಒದಗಿಸಿದೆ. ಮುದ್ದಾದ ಗೊಂಬೆಗಳು, ಚಿನ್ನ, ವಜ್ರಾಭರಣಗಳು, ಮೊಬೈಲ್‌ಗಳು, ಎಲೆಕ್ಟ್ರಾನಿಕ್ ಉಪಕರಣಗಳು ಹೀಗೆ ಕಣ್ಣಿಗೆ ಕಂಡಿದ್ದೆಲ್ಲವೂ ಈ ದಿನ ಗಿಫ್ಟ್ ಪ್ಯಾಕ್ ಆಗುತ್ತಿದೆ.
ದೇಶದ 10 ಪ್ರಮುಖ ನಗರಗಳಲ್ಲಿ ಈ ಸಮೀಕ್ಷೆ ನಡೆಸಿದ್ದು, ಯುವ ಪ್ರೇಮಿಗಳು ತಮ್ಮ ಪ್ರೇಮ ನಿವೇದನೆಗಾಗಿ ಹೆಚ್ಚಿನ ಹಣ ಖರ್ಚು ಮಾಡುತ್ತಾರೆ ಎಂಬುದು ದೃಢಪಟ್ಟಿದೆ. ಪ್ರಿಯತಮೆಯನ್ನು ಮೆಚ್ಚಿಸಲು ದುಬಾರಿ ಉಡುಗೊರೆಗಳನ್ನು ನೀಡುವುದರ ಮೂಲಕ ಈ ದಿನವನ್ನು ನೆನಪಿನಲ್ಲಿ ಸದಾ ಉಳಿಯುವಂತೆ ನೋಡಿಕೊಳ್ಳುತ್ತಾರೆ.
ಫೆಬ್ರವರಿ 7 ರಂದು ರೋಸ್ ಡೆ, ಫೆ.8 ರಂದು ಪ್ರಪೊಸಲ್ ಡೇ, ಫೆ. 9ರಂದು ಚಾಕ್ಲೇಟ್ ಡೇ, ಫೆ.10ರಂದು ಟೆಡ್ಡಿ ಡೇ, ಫೆ.11 ರಂದು ಪ್ರಾಮೀಸ್ ಡೇ, ಫೆ.12ರಂದು ಕಿಸ್ ಡೇ, ಫೆ.13ರಂದು ಹಗ್ ಡೇ, ಕೊನೆ ಹಾಗೂ ಮುಖ್ಯವಾಗಿ ಫೆ.14ರಂದು ವ್ಯಾಲಂಟೈನ್ಸ್ ಡೇ ದಿನ ವ್ಯಾಪಾರ ಜೋರಾಗಿರುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜನರ ಆರ್ಥಿಕ ಮಟ್ಟ ಹೆಚ್ಚಿರುವುದರಿಂದ ಶೇ 120ರಷ್ಟು ವ್ಯಾಪಾರ ಹೆಚ್ಚಲಿದೆ.
ಸಹಜತೆಗೆ ಕೃತಕತೆ ಪೆಟ್ಟು: ಚೀನಾದಿಂದ ಗರಿಗರಿಯಾದ ಕೃತಕ ಗುಲಾಬಿ ಭಾರತಕ್ಕೆ ಬಂದಿಳಿದಿವೆ. ಥಾಯ್ಲೆಂಡ್‌ನಿಂದ ಲಿಲ್ಲಿ ಹೂವು ಸೇರಿದಂತೆ ಅನೇಕ ವೈವಿಧ್ಯಮಯ ಪುಷ್ಪಗಳು ಮಾರುಕಟ್ಟೆಗೆ ಬಂದಿವೆ. ಗುಲಾಬಿ ರಫ್ತು ವಹಿವಾಟು 1.70 ಕೋಟಿಯನ್ನು ತಲುಪಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ. ಆದರೆ, ಕೃತಕ ಗುಲಾಬಿ ಆಮದು ಇಲ್ಲಿ ಬೆಳೆದ ಗುಲಾಬಿಗೆ ಪೈಪೋಟಿ ನೀಡತೊಡಗಿರುವುದು ಶುಭ ಸೂಚನೆ ಎನ್ನುವಂತಿಲ್ಲ. ಯಾವುದೇ ಗಿಫ್ಟ್ ಇದ್ದರೂ, ಜೊತೆಗೆ ಕೆಂಪು ಗುಲಾಬಿ ಕಡ್ಡಾಯವಾಗಿ ವ್ಯಾಪಾರವಾಗಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications