ಪ್ರೇಮಿಗಳೇ ಯಾವುದೇ ಭಯ ಬೇಡ : ಅಶೋಕ್

ಪ್ರೇಮಿಗಳ ದಿನವನ್ನು ಆಚರಣೆ ನಡೆಸಲು ಪ್ರೇಮಿಗಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದ ಅವರು, ಯಾರು ಕೂಡಾ ಇದಕ್ಕೆ ಅಡ್ಡಿಪಡಿಸದಂತೆ ಮುನ್ನೆಚ್ಚರಿಕೆಯನ್ನು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅಶೋಕ್, ಪ್ರೇಮಿಗಳ ದಿನಾಚರಣೆಯಂದು ಪ್ರೇಮಿಗಳಿಗೆ ರಕ್ಷಣೆ ನೀಡಲು ಸರ್ಕಾರ ಸದಾ ಬದ್ಧವಾಗಿದೆ ಎಂದರು.
ವಯಸ್ಕ ಪ್ರೇಮಿಗಳು ಪರಿಸ್ಪರ ಪ್ರೀತಿಸಲು, ಪ್ರೇಮಿಸಲು ಯಾವುದೇ ರೀತಿಯ ಅಡ್ಡಿಪಡಿಸುವುದು ಸರಿಯಲ್ಲ. ಅದಕ್ಕೆ ಕಾನೂನಿನಲ್ಲೂ ಅವಕಾಶವಿದೆ. ಅವರ ರಕ್ಷಣೆಗೆ ಸರಕಾರ ಕೂಡಾ ಸಾಥ್ ನೀಡಲಿದೆ ಎಂದವರು ಹೇಳಿದರು.
ರಕ್ಷಣೆ ನೀಡಿದ ಮಾತ್ರಕ್ಕೆ ಪ್ರೇಮಿಗಳು ಬಹಿರಂಗವಾಗಿ ಅಸಭ್ಯ ವರ್ತನೆ ತೋರುವುದಾಗಲಿ, ಅಶ್ಲೀಲವಾಗಿ ವರ್ತಿಸುವುದಾಗಲಿ ನಡೆಸಬಾರದು. ಅದಕ್ಕೆ ಸರಕಾರ ಕೂಡಾ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ ಅಶೋಕ್, ಇಂಥ ವರ್ತನೆಗಳು ಎಲ್ಲಿಯಾದರೂ ಕಂಡು ಬಂದರೆ ಅಂತಹ ಪ್ರೇಮಿಗಳ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂತೋಷ ಹಾಗೂ ಸಂಭ್ರಮದಿಂದ ಪ್ರೇಮಿಗಳ ದಿನ ಆಚರಣೆ ಮಾಡಲು ಯಾವುದೇ ರೀತಿ ಅಡ್ಡಿಯಿಲ್ಲ. ಯುವ ಜೋಡಿಗಳ ಭದ್ರತೆ ಹೊಣೆಯನ್ನು ನಗರ ಪೊಲೀಸ್ ಇಲಾಖೆ ಹೊತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ನಮ್ಮ ಸಿಬ್ಬಂದಿ ಮಫ್ತಿಯಲ್ಲಿ ಗಸ್ತು ತಿರುಗಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಹೇಳಿದ್ದಾರೆ.











Click it and Unblock the Notifications