ಸಂಸದ ನಳಿನ್ ವಿರುದ್ಧ ಕ್ರಿಮಿನಲ್ ಕೇಸ್?

ASP Amit Singh
ಪುತ್ತೂರು, ಫೆ. 7 : ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೋವಿಂದ ಪ್ರಭು ಅವರಿಗೆ ಪೊಲೀಸರಿಂದ ಕಪಾಳ ಮೋಕ್ಷ ಆಗಿದ್ದನ್ನು ವಿರೋಧಿಸಿದ ಸಂಸದ ನಳಿನ್ ಕುಮಾರ್ ಕಟೀಳ್ ಈಗ ಕ್ರಿಮಿನಲ್ ಕೇಸ್ ಎದುರಿಸುವಂತಾಗಿದೆ. ಸುಮಾರು 200 ಜನ ಕಾರ್ಯಕರ್ತರನ್ನು ಕರೆದುಕೊಂಡು ಪುತ್ತೂರು ಎಎಸ್ ಪಿ ಅಮಿತ್ ಸಿಂಗ್ ಅವರಲ್ಲಿದ ಸಮಯದಲ್ಲಿ ಅವರ ಮನೆ ಮುಂದೆ ಧರಣಿ ನಡೆಸಿ ಅಮಾನವೀಯವಾಗಿ ನಡೆದುಕೊಂಡಿದ್ದಕ್ಕೆ ಸಂಸದ ನಳಿನ್ ಹಾಗೂ ಶಾಸಕಿ ಮಲ್ಲಿಕಾ ಪ್ರಸಾದ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಎಎಸ್ ಪಿ ಅಮಿತ್ ಮುಂದಾಗಿದ್ದಾರೆ.

ಹಿನ್ನೆಲೆ : ಮಸೀದಿಗೆ ಕಲ್ಲೆಸೆದ ಆರೋಪಿಗಳನ್ನು ಬಂಧಿಸಿ ಬಂಟ್ವಾಳ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದರು. ಪೋಲೀಸರ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಿ ಅವರ ಮೇಲೆ ದಬ್ಬಾಳಿಕೆ ನಡೆಸಲು ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೋವಿಂದ ಪ್ರಭು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಎಎಸ್ ಪಿ ಅಮಿತ್ ಆರು ಗೋವಿಂದ್ ಗೆ ಕಪಾಳ ಮೋಕ್ಷ ಮಾಡಿದ್ದರು ಎನ್ನಲಾಗಿದೆ.

ಕಪಾಳ ಮೋಕ್ಷ ಖಂಡಿಸಿ ಮಧ್ಯರಾತ್ರಿ ವೇಳೆಯಲ್ಲಿ ಪುತ್ತೂರು ಎ.ಎಸ್.ಪಿ ಅಮಿತ್ ಸಿಂಗ್ ಅವರ ಮನೆಯ ಮುಂದೆ ಮನೆಯಲ್ಲಿ ಅವರ ಪತ್ನಿ ಒಬ್ಬರೇ ಇದ್ದಾಗ ಸುಮಾರು 200 ಜನರನ್ನು ಸೇರಿಸಿ ಧರಣಿ ನಡೆಸಿದ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ ಅವರು ಧರಣಿ ನಡೆಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಎಸ್ ಪಿ ಎಎಸ್ ರಾವ್, ದಕ್ಷಿಣ ಕನ್ನಡ ಒಬ್ಬ ಮಹಿಳೆ ಮನೆಯಲ್ಲಿ ಏಕಾಂಗಿಯಾಗಿರುವಾಗ ಅವರ ಮನೆಯ ಮುಂದೆ ಧರಣಿ ನಡೆಸಿ ಅವರ ಮನೆಯ ಮೇಲೆ ಬಾಟಲಿಗಳನ್ನು ಎಸೆದ ಈ ಕ್ರಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ನಡೆದಿದ್ದು, ಬಿಜೆಪಿ ಜನಪ್ರತಿನಿಧಿಗಳ ಈ ವರ್ತನೆ ಸಾರ್ವಜನಿಕರ ಮತ್ತು ಸರ್ಕಾರಿ ಅಧಿಕಾರಿಗಳಿಂದಲೂ ಟೀಕೆ ವ್ಯಕ್ತವಾಗಿತ್ತು. ಎಎಸ್ ಪಿ ಅವರು ದೂರು ನೀಡಿದ ಮೇಲೆ ಮುಂದಿನ ಕ್ರಮದ ಬಗ್ಗೆ ನೋಡುತ್ತೇವೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+