ಕಾಂಗ್ರೆಸ್ ಜೊತೆ ಚಿರು ಪ್ರಜಾರಾಜ್ಯಂ ವಿಲೀನ

ಇದು ಆಂಧ್ರದಲ್ಲಿ ಜಗನ್ ಪ್ರಭಾವ ಕಮ್ಮಿ ಮಾಡಲು ತೆಗೆದುಕೊಂಡ ನಿರ್ಧಾರವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಆಂಧ್ರ ರಾಷ್ಟ್ರದ ಉದ್ಧಾರಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಯಾವುದೇ ವೈಯಕ್ತಿಕ ಸ್ಪರ್ಧೆ ಇಲ್ಲಿಲ್ಲ. ಆಂಧ್ರ ಸಚಿವ ಸಂಪುಟ ಸೇರುವ ಬಯಕೆ ನನಗಿಲ್ಲ ಎಂದರು.
ಆಂಧ್ರ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ ಮಾತನಾಡಿ, ಆಂಧ್ರದಲ್ಲಿ ರೈತರಿಗೆ ನ್ಯಾಯ ದೊರಕಿಸಿ ಕೊಡಲು ಪ್ರಜಾರಾಜ್ಯಂ ಜೊತೆ ಕಾಂಗ್ರೆಸ್ ಕೈಜೋಡಿಸಿ, ಬಡವರ ಕಣ್ಣೀರು ಒರೆಸುವುದು ನಮ್ಮ ಉದ್ದೇಶ ಎಂದರು.
ಕೇವಲ ಪ್ರಜಾರಾಜ್ಯಂ ಪಕ್ಷವೊಂದರಿಂದಲೇ ಹಿಂದುಳಿದವರ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಒದಗಿಸಿಕೊಡಲು ಸಾಧ್ಯವಿಲ್ಲ ಎಂಬುದನ್ನು ಮನಗಂಡಿದ್ದೇವೆ. ಆದ್ದರಿಂದ ಕಾಂಗ್ರೆಸ್ ಜೊತೆ ಕೈಜೋಡಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ರಾಜಕೀಯ ವ್ಯವಹಾರ ಸಮಿತಿ ಸದಸ್ಯ ಸಿ.ರಾಮಚಂದ್ರಯ್ಯ ನಂತರ ವಿವರಿಸಿದರು.











Click it and Unblock the Notifications