ಆರೋಪ ಸಾಬೀತಾದ್ರೆ ಯಡಿಯೂರಪ್ಪನೇ ಹೋಗ್ತಾರೆ

ಭ್ರಷ್ಟಾಚಾರ ಆರೋಪ ಹೊತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಪಕ್ಷದ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರ ವಿರುದ್ಧದ ದೂರು ಸಾಬೀತಾಗಿಲ್ಲ. ಆದ್ದರಿಂದ ಸದ್ಯಕ್ಕೆ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳುವುದಿಲ್ಲ ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಕಾಗದವೊಂದರಲ್ಲಿ ದೂರನ್ನು ಬರೆದುಕೊಂಡ ಬಂದ ಇಬ್ಬರು ನ್ಯಾಯವಾದಿಗಳ ಮಾತು ಕೇಳಿ ಯಡಿಯೂರಪ್ಪ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್‌ರ ನಿರ್ಧಾರವನ್ನು ಸಿಂಗ್ ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.
ಯಡಿಯರಪ್ಪ ವಿರುದ್ಧ ಪಕ್ಷದ ವತಿಯಿಂದ ಯಾವುದೇ ಆಂತರಿಕ ವಿಚಾರಣೆ ನಡೆದಿಲ್ಲ. ಮಾಜಿ ನ್ಯಾಯಾಧೀಶರು ಮತ್ತು ಲೋಕಾಯುಕ್ತ ಮಾತ್ರ ವಿಚಾರಣೆ ನಡೆಸುತ್ತಿದ್ದಾರೆ. ಅದರ ಫಲಿತಾಂಶ ಬರುವವರೆಗೂ ಎಲ್ಲರೂ ತಾಳ್ಮೆ ವಹಿಸಬೇಕು ಎಂದು ಸಿಂಗ್ ತಿಳಿಸಿದರು.
ದೂರಸಂಪರ್ಕ ಮಾಜಿ ಸಚಿವ ರಾಜಾ ಬಂಧನದ ಬಳಿಕ ಬಿಜೆಪಿಯು ೨ಜಿ ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವಿಚಾರಣೆಯ ಪಟ್ಟು ಸಡಿಲಿಸುವುದಿಲ್ಲ. ಮುಂದಿನ ಬಜೆಟ್ ಅಧಿವೇಶನದಲ್ಲೂ ಜೆಪಿಸಿ ಆಗ್ರಹಿಸಿ ನಮ್ಮ ಆಂದೋಲನ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಫೆಬ್ರವರಿ 24 ರಂದು ರಾಜ್ಯ ಬಜೆಟ್ :
ಈ ಮಧ್ಯೆ, ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಫೆಬ್ರವರಿ 24 ರಂದು ಬಜೆಟ್ ಮಂಡಿಸುವುದಾಗಿ ಘೊಷಿಸಿದ್ದಾರೆ. ಇದರೊಂದಿಗೆ ಸದ್ಯಕ್ಕೆ ತಾವು ರಾಜೀನಾಮೆ ನೀಡುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.












Click it and Unblock the Notifications