ನಗರದಲ್ಲಿ ಗೋಡೆ ಕುಸಿದು 9 ಜನರ ದುರ್ಮರಣ

Tragedy at CK Palya, Bannerughatta road
ಬೆಂಗಳೂರು, ಫೆ. 02 : ಬನ್ನೇರುಘಟ್ಟ ರಸ್ತೆಯಲ್ಲಿರುವ ಸಿಕೆ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಎಟಿಸಿ ಕಂಪನಿಗೆ ಸೇರಿದ ಫ್ಯಾಕ್ಟರಿಯ ಗೋಡೆ ಕುಸಿದು ಓರ್ವ ಮಹಿಳೆ ಸೇರಿದಂತೆ ಎಂಟು ಪುರುಷರು ದುರ್ಮರಣಕ್ಕೀಡಾದ ಘಟನೆ ಇಂದು ಬೆಳಿಗ್ಗೆ ಜರುಗಿದೆ.

ಕಳಪೆ ಕಾಮಗಾರಿಯಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಗೋಡೆಯ ಅವಶೇಷದಡಿ ಇನ್ನೂ 20 ಜನ ಸಿಲುಕಿದ್ದಾರೆಂದು ತಿಳಿದುಬಂದಿದೆ. ಉತ್ತರ ಪ್ರದೇಶಕ್ಕೆ ಸೇರಿದ ಒಟ್ಟು ಮೂವತ್ತಕ್ಕೂ ಹೆಚ್ಚು ಜನ ಕೂಲಿ ಕಾರ್ಮಿಕರು ಕಾಮಗಾರಿಯಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ ಕೆಲವರನ್ನು ರಕ್ಷಿಸಲಾಗಿದ್ದು, ಅವರು ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ.

ಮೃತರ ಕುಟುಂಬಕ್ಕೆ 1 ಲಕ್ಷ ರು. ಪರಿಹಾರ

ಫ್ಯಾಕ್ಟರಿಯ ಗೋಡೆ ಇನ್ನೂರು ಅಡಿ ಉದ್ದವಿದ್ದು, ಇಪ್ಪತ್ತೈದು ಅಡಿ ಎತ್ತರವಿದೆ. ದುರಂತಕ್ಕೆ ಕಳಪೆ ಕಾಮಗಾರಿಯೇ ಕಾರಣ ಇರಬಹುದೆಂದು ಶಂಕಿಸಲಾಗಿದೆ. ಗೋಡೆ ಪಿಲ್ಲರ್ ಗಳ ಸಮೇತ ಬಿದ್ದಿದ್ದರಿಂದ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಜೆಸಿಬಿ ಯಂತ್ರವನ್ನು ತರಿಸಲಾಗಿದ್ದು, ಸಿಲುಕಿದವರನ್ನು ಪಾರುಮಾಡುವ ಯತ್ನ ನಡೆಯುತ್ತಿದೆ.

ಸ್ಥಳಕ್ಕೆ ಪೊಲೀಸ್ ಪಡೆ ಮತ್ತು ಅಗ್ನಿಶಾಮಕ ದಳ ಮತ್ತು ಆಂಬುಲನ್ಸ್ ಧಾವಿಸಿದ್ದು, ಕಟ್ಟಡದ ಅವಶೇಷದಡಿ ಸಿಲುಕಿರುವ ಕಾರ್ಮಿಕರನ್ನು ಪಾರು ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಬಹುದೆಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+