ಕಾಸರಗೋಡಿನ ಕಾಮುಕ ಸತ್ತಾರ್ ಬಲೆಗೆ

ಕಾಸರಗೋಡು ಅಡ್ಕತ್ತಬೈಲಿನ ಅಬ್ದುಲ್ ಸತ್ತಾರ್ (35) ಬಂಧಿತ ಆರೋಪಿ. ಆಲ್ಬಂ ಹಾಡುಗಳ ಶೂಟಿಂಗ್ ನೆಪದಲ್ಲಿ ಸತ್ತಾರ್ ಯುವತಿಯರನ್ನು ಬಲೆಗೆ ಹಾಕಿಕೊಳ್ಳುತ್ತಿದ್ದ. ಹೀಗೆ ಈತನ ಪಾಶಕ್ಕೆ ಬಿದ್ದ ಮಂಜೇಶ್ವರ ಸಮೀಪದ ಯುವತಿಯರನ್ನು ಈತ ದೇಹತೀಟೆಗೆ ಬಳಸಿದ್ದ. 2 ಮಕ್ಕಳ ತಂದೆಯಾಗಿರುವ ಈತ ಸಿನಿಮಾ ನಟನಂತೆ ಫೋಸ್ ನೀಡುತ್ತಿದ್ದು, ಈಗಾಗಲೇ ಕೆಲವಾರು ಯುವತಿಯರನ್ನು ವಂಚಿಸಿದ್ದಾನೆ
ತಮ್ಮ ಕಾಮಕೇಳಿಯ ದೃಶ್ಯಗಳನ್ನು ಯುವತಿಗೆ ಗೊತ್ತಿಲ್ಲದೆ ಪೆನ್ ಕ್ಯಾಮರಾ ಮೂಲಕ ಚಿತ್ರೀಕರಿಸಿದ್ದ ಸತ್ತಾರ್ ಮುಂದೆ ಆಕೆಯನ್ನು ನಿರಂತರ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ನಿನ್ನ ಗೆಳತಿಯರನ್ನು ನನಗೊಪ್ಪಿ ಸದಿದ್ದಲ್ಲಿ ನಗ್ನ ದೃಶ್ಯಗಳು ಇಂಟೆರ್‌ನೆಟ್‌ನಲ್ಲಿ ಹರಿದಾಡಲಿದೆ ಎಂಬ ಬೆದರಿಕೆ ಹಾಕಿದ್ದ.
ಹೀಗೆ ಆಕೆಯ ಗೆಳತಿ 15ರ ತರುಣಿ ಸಂಪರ್ಕ ಸಾಧಿಸಿದ ಆರೋಪಿ ಕಳೆದ ಶುಕ್ರವಾರ ರಾತ್ರಿ ಆಕೆಯನ್ನು ಮಂಜೇಶ್ವರ ಪುಚ್ಚತ್ತಬೈಲಿನ ಉರುಸ್ ನಡೆಯುತ್ತಿದ್ದ ಸ್ಥಳದಿಂದ ಆಮಿಷವೊಡ್ಡಿ ಕಾರಿನಲ್ಲಿ ಮಂಗಳೂರಿನ ಲಾಡ್ಜಿಗೆ ಕೊಂಡೊಯ್ದು ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ. ಯುವತಿಯ ದೂರಿನನುಸಾರ ಕುಂಬಳೆ ಪೊಲೀಸರು ತಂಙಳ್ ಉರೂಸ್ ನಲ್ಲಿ ಪಾಲ್ಗೊಂಡಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.












Click it and Unblock the Notifications