ಸಾಗರದ ಸಾಕುನಾಯಿ ಸ್ಪರ್ಧೆ ವಿಜೇತರು

Dog Show in Sagara
ಸಾಗರ, ಫೆ. 2 : ಉತ್ತಮ ತಳಿಯ ನಾಯಿಗಳನ್ನು ಸಾಕಿ ಸಲಹುವ ಹವ್ಯಾಸ ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಹವ್ಯಾಸದಿಂದ ಉತ್ತಮ ತಳಿಯ ನಾಯಿ ಸಂತಾನವನ್ನು ವೃದ್ಧಿಸುವುದು ಮತ್ತು ರೇಬೀಸ್ ಲಸಿಕೆ ಹಾಕಿಸುವ ಅಭ್ಯಾಸ ರೂಢಿಸಿಕೊಳ್ಳುವ ಜಾಗೃತಿ ಜನರಲ್ಲಿ ಮೂಡುತ್ತದೆ ಎಂದು ನಗರಸಭೆ ಮಾಜಿ ಉಪಾಧ್ಯಕ್ಷೆ ವಂದನಾ ಶ್ರೀನಿವಾಸ್ ಹೇಳಿದರು. ಅವರು ಸಹ್ಯಾದ್ರಿ ಕೆನೆಲ್ ಕ್ಲಬ್, ವಿಶ್ವ ಪಶುವೈದ್ಯಕೀಯ ವರ್ಷದ ಅಂಗವಾಗಿ ಏರ್ಪಡಿಸಲಾಗಿದ್ದ ಶ್ವಾನಪ್ರದರ್ಶನ ಮತ್ತು ಸ್ಪರ್ಧೆಯನ್ನು ಸಾಗರ ನಗರಸಭೆಯ ಗಾಂಧೀ ಮೈದಾನದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಾಗರ ನಗರಸಭೆಯಿಂದ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬೀದಿನಾಯಿಗಳ ನಿಯಂತ್ರಣಕ್ಕಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಪಶುಪಾಲನಾ ಇಲಾಖೆಯ ಸಹಯೋಗದೊಂದಿಗೆ ಆರಂಭಿಸಲಾಗಿದೆ. ಆದ್ಯತೆಯ ಮೇರೆಗೆ ಬೀದಿನಾಯಿಗಳ ಸಂತಾನಹರಣ ಯಜ್ಞವನ್ನು ಮುಂದುವರಿಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ನಾಯಿ ಸಾಕುವವರಿಗೆ ನಗರಸಭೆಯ ಪರವಾನಗಿ ಮತ್ತು ರೇಬೀಸ್ ಲಸಿಕೆ ಹಾಕಿಸುವುದು ಪ್ರತಿವರ್ಷ ಕಡ್ಡಾಯವಾಗಿದ್ದು ಸಾರ್ವಜನಿಕರ ಹಿತದೃಷ್ಟಿಯಿಂದ ಬೀದಿನಾಯಿಗಳ ಹಾವಳಿಯನ್ನು ತಪ್ಪಿಸಲು ಹಾಗೂ ನಾಯಿಗಳಿಂದ ಮನುಷ್ಯರಿಗೆ ಅಪಾಯವಾಗದಂತೆ ನಾಗರೀಕರು ಎಚ್ಚರಿಕೆ ವಹಿಸಬೇಕು ಎಂದರು.

ಡಾ.ಶ್ರೀಪಾದರಾವ್, ತಂಡದ ನೇತೃತ್ವದಲ್ಲಿ ನಡೆದ ಈ ಶ್ವಾನಪ್ರದರ್ಶನದಲ್ಲಿ 18 ವಿವಿಧ ತಳಿಯ 176 ನಾಯಿಗಳು ಭಾಗವಹಿಸಿದ್ದವು. ಅತ್ಯಂತ ಚಿಕ್ಕ ತಳಿ ಮಿನಿಯೇಚರ್ ಪಮೇರಿಯನ್‌ನಿಂದ ಹಿಡಿದು ದೈತ್ಯ ತಳಿಗಳಾದ ಗ್ರೇಟ್ ಡೇನ್, ಸೇಂಟ್ ಬರ್ನಾಡ್ ಪ್ರೇಕ್ಷಕರ ಮನಸೂರೆಗೊಂಡವು. ಅಪರೂಪದ ತಳಿಗಳಾದ ನಿಯೋಪಾಲಿಟನ್ ಮ್ಯಾಸ್ಟಿಫ್, ಬೀಗಲ್,ಬ್ಯಾಸೆಟ್‌ಹೌಂಡ್, ರಾಟ್‌ವೀಲರ್, ಗ್ರೇಟ್‌ಡೇನ್, ಪಗ್, ಕಾಕರ್‌ಸ್ಪೇನಿಯಲ್, ಜರ್ಮನ್‌ ಶೆಫರ್ಡ ಕರ್ನಾಟಕದ ಮುಧೋಳ ಹೌಂಡ್‌ತಳಿಗಳು ಶ್ವಾನ ಪ್ರೇಮಿಗಳ ಮನಸೆಳೆದವು. ದೂರದ ಹುಬ್ಬಳ್ಳಿ, ಹರಿಹರ, ದಾವಣಗೆರೆ, ಉಡುಪಿ,ಎನ್.ಆರ್.ಪುರ, ಭದ್ರಾವತಿ ಮತ್ತು ಶಿವಮೊಗ್ಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಶ್ವಾನಗಳು ಭಾಗವಹಿಸಿದ್ದವು.

ಈ ಪ್ರದರ್ಶನದ ಮುಖ್ಯ ತೀರ್ಪುಗಾರರಾಗಿ ಬೆಂಗಳೂರಿನ ಶ್ವಾನತಜ್ಙ ಡಾ.ಧೀರಜ್ ಕಶ್ಯಪ್ ಮತ್ತು ವೆಂಕಟೇಶ್ ಕಾರ್ಯನಿರ್ವಹಿಸಿದರು. ಡಾ. ಪಿ.ಎಸ್. ಹೆಗ್ಗಡೆ, ಸಿರಸಿ ಮತ್ತು ಡಾ.ಬಸವೇಶ್ ಹೂಗಾರ ಇವರು ಸಹಕರಿಸಿದರು. ಸಾಗರ ತಾಲ್ಲೂಕಿನಿಂದ ಆಗಮಿಸಿದ ಶ್ವಾನಗಳಿಗೆ ಪ್ರತ್ಯೇಕವಾಗಿ ಎರಡೂ ವಿಭಾಗದಲ್ಲಿ ಬಹುಮಾನ ನೀಡಲಾಯಿತು. ಡ್ರೂಲ್ಸ್ ಪೆಟ್ ಫೂದ್ ಛತ್ತೀಸಗಡ ಇವರು ಮುಖ್ಯ ಪ್ರಾಯೋಜಕರಾಗಿದ್ದರು.

ಸ್ಫರ್ಧೆಯ ಫಲಿತಾಂಶ, ಮರಿಗಳ ವಿಭಾಗ :
ಅತ್ಯುತ್ತಮ ಜರ್ಮನ್ ಶೆಫರ್ಡ್, ಸತೀಶ ಮತ್ತು ಸಂತೋಷ ಹರಿಹರ. ಎರಡನೇ ಅತ್ಯುತ್ತಮ ಡಾಬರ್‌ಮನ್ ಬಿ.ಆರ್.ಚಂದ್ರಶೇಖರ್, ಶಿವಮೊಗ್ಗ. ಮೂರನೇ ಅತ್ಯುತ್ತಮ ಲ್ಯಾಬ್ರಡಾರ್ ರಿಟ್ರಿವರ್ ವಿನಯ್, ಶಿವಮೊಗ್ಗ. ನಾಲ್ಕನೇ ಅತ್ಯುತ್ತಮ ರಾಟ್‌ವೀಲರ್ ರಾಜೇಂದ್ರಕುಮಾರ್, ಶಿವಮೊಗ್ಗ. ಐದನೇ ಅತ್ಯುತ್ತಮ ಪಗ್ ರಾಜೇಂದ್ರ ಕಾಮತ್ ಶಿವಮೊಗ್ಗ. ಆರನೇ ಅತ್ಯುತ್ತಮ ಡ್ಯಾಕ್ಷ್ ಹೌಂಡ್ ಕೆನೆತ್. ಹರ್ಷ, ಶಿವಮೊಗ್ಗ. ಏಳನೇ ಅತ್ಯುತ್ತಮ ಸೇಂಟ್ ಬರ್ನಾಡ್, ಪ್ರಿಯಾಂಕ ಎನ್.ಆರ್.ಪುರ.

ಸ್ಫರ್ಧೆಯ ಫಲಿತಾಂಶ, ಪ್ರೌಢ ವಿಭಾಗ : ಅತ್ಯುತ್ತಮ ಡಾಬರ್‌ಮನ್ ರಾಜೇಂದ್ರ ಕಾಮತ್ ಶಿವಮೊಗ್ಗ. ಎರಡನೇ ಅತ್ಯುತ್ತಮ ಜರ್ಮನ್ ಶೆಫರ್ಡ ಶಂಕರ್, ಶಿವಮೊಗ್ಗ. ಮೂರನೇ ಅತ್ಯುತ್ತಮ ಲ್ಯಾಬ್ರಡಾರ್ ರಿಟ್ರಿವರ್ ಅನಿಲ್‌ಕುಮಾರ್, ಶಿವಮೊಗ್ಗ . ನಾಲ್ಕನೇ ಅತ್ಯುತ್ತಮ ಗ್ರೇಟ್ ಡೇನ್ ಡುಮ್ಮಿಂಗ್ ಮಿರಾಂಡ, ಜೋಗ. ಐದನೇ ಅತ್ಯುತ್ತಮ ಸೇಂಟ್ ಬರ್ನಾಡ್ ಅಜಯ್ ಕುಂದಗೋಲ್, ದಾವಣಗೆರೆ. ಆರನೇ ಅತ್ಯುತ್ತಮ ಪಗ್ ಅನಿಲ್‌ಕುಮಾರ್, ಶಿವಮೊಗ್ಗ. ಏಳನೇ ಅತ್ಯುತ್ತಮ ಡ್ಯಾಕ್ಷ ಹೌಂಡ್ ಕೆನೆತ್ ಹರ್ಷ, ಶಿವಮೊಗ್ಗ. ಎಂಟನೇ ಅತ್ಯುತ್ತಮ, ನಿಯೋಪಾಲಿಟನ್ ಮ್ಯಾಸ್ಟಿಫ್. ಲೇಖನಾ ದೇವರಾಜ್, ಸಾಗರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+