ಮುಖ್ಯ ನ್ಯಾಯಮೂರ್ತಿ ಆಸ್ತಿ ವಿವರ ಬಹಿರಂಗ
ಬೆಂಗಳೂರು,
ಜ. 30: ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶ ಜಗದೀಶ್ ಸಿಂಗ್ ಖೆಹರ್ ಅವರು ತಮ್ಮ ಆಸ್ತಿ ವಿವರವನ್ನು ಶನಿವಾರ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ. ನ್ಯಾ.ಖೆಹರ್ ಮತ್ತು ಅವರ ಪತ್ನಿ ಮಧುಪ್ರೀತ್ ಕೌರ್ ಅವರು ಹೊಂದಿರುವ ಹಣ, ಹೂಡಿಕೆ, ಸ್ಥಿರಾಸ್ತಿ, ಚರಾಸ್ತಿ ಮತ್ತಿತರ ವಿವರಗಳನ್ನು ನ್ಯಾಯಾಲಯದ ವೆಬ್‌ಸೈಟ್ ನಲ್ಲಿ ನೀಡಲಾಗಿದೆ. ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಸಲ್ಲಿಸಿದ್ದ ಆಸ್ತಿ ವಿವರ ಕೂಡಾ ಲಭ್ಯವಿದೆ. id="toptextpromo">ನ್ಯಾಯಮೂರ್ತಿಗಳ
ಆಸ್ತಿ
ವಿವರ:
ದೆಹಲಿಯ
ಮಯೂರ
ವಿಹಾರ್‌ನಲ್ಲಿರುವ
ಸುಪ್ರೀಂ
ಎನ್‌ಕ್ಲೇವ್‌ನಲ್ಲಿ
ಎರಡು
ಕೋಣೆಗಳ
ಒಂದು
ಫ್ಲ್ಯಾಟ್
ಮತ್ತು
ಚಂಡೀಗಢದ
8ಬಿ
ಸೆಕ್ಟರ್‌ನಲ್ಲಿ
ಆರು
ಕೋಣೆಗಳ
ಮನೆಯನ್ನು
ಹೊಂದಿದ್ದಾರೆ.
ಪಂಜಾಬ್‌ನ
ಎಸ್‌ಎಎಸ್
ನಗರ
ಜಿಲ್ಲೆಯ
ಮೊಹಾಲಿ
ತಾಲ್ಲೂಕಿನ
ಕೈಲೋನ್
ಗ್ರಾಮದಲ್ಲಿ
10
ಎಕರೆ
ಕೃಷಿ
ಭೂಮಿ
ಮತ್ತು
ಅದೇ
ತಾಲ್ಲೂಕಿನ
ಲಂಡ್ರಾನ್
ಗ್ರಾಮದಲ್ಲಿ
1,250
ಚದರ
ಯಾರ್ಡ್
ಕೃಷಿ
ಭೂಮಿಯೂ
ಅವರ
ಹೆಸರಿನಲ್ಲಿದೆ.
id='are-slot-1'
class='oiad
oi-axt
oiadv'>
id='top-searched-articles'>
ಪತ್ನಿ
ಆಸ್ತಿ:
ಮುಖ್ಯ
ನ್ಯಾಯಮೂರ್ತಿಯವರ
ಪತ್ನಿ
ಮಧುಪ್ರೀತ್
ಕೌರ್,
ಪಂಜಾಬ್‌ನ
ಹೋಶಿಯಾರ್‌ಪುರ
ಜಿಲ್ಲೆಯ
ಗರ್‌ಶಂಕರ್‌ನಲ್ಲಿ
44/70
ಅಡಿ
ವಿಸ್ತೀರ್ಣದ
ನಿವೇಶನ
ಹೊಂದಿದ್ದಾರೆ.
ಅದೇ
ಸ್ಥಳದಲ್ಲಿ
10/24
ಅಡಿ
ವಿಸ್ತೀರ್ಣದ
ಒಂಬತ್ತು
ಬೂತ್
ಗಳು
ಮತ್ತು
10/19
ಅಡಿ
ವಿಸ್ತೀರ್ಣದ
ಒಂದು
ಬೂತ್
ಹೊಂದಿದ್ದಾರೆ.ಈ
ಸ್ವತ್ತುಗಳು
ಮಧುಪ್ರೀತ್
ಕೌರ್
ಅವರಿಗೆ
ತಾಯಿಯಿಂದ
ಬಂದಿವೆ.
[ಹೈಕೋರ್ಟ್]












Click it and Unblock the Notifications