ಮೈಸೂರು ಜೂ... ಇನ್ನು ದುಬಾರಿ...

ಮೈಸೂರು ಮೃಗಾಲಯ ಪ್ರಾಧಿಕಾರದ ಸಭೆಯಲ್ಲಿ ದರ ಪರಿಷ್ಕರಣೆ ಮಾಡಲಾಗಿದ್ದು, ಪರಿಷ್ಕೃತ ದರ ಮಾರ್ಚ್‌ನಿಂದ ಜಾರಿಗೆ ಬರಲಿದೆ. ಈಗಾಗಲೇ ಅರಣ್ಯ ಪ್ರವೇಶ, ಸಫಾರಿ, ವಾಹನ ಶುಲ್ಕ ಎಲ್ಲವನ್ನೂ ಹೆಚ್ಚಳ ಮಾಡಿದ ಬೆನ್ನಲ್ಲೇ ಕರ್ನಾಟಕ ಮೃಗಾಲಯ ಪ್ರಾಧಿಕಾರವೂ ಮೃಗಾಲಯಗಳ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿತ್ತು. ಅದರಂತೆ ಮೈಸೂರು ಮೃಗಾಲಯದಲ್ಲಿ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಿದ್ದು ಅದರ ವಿವರ ಈ ಕೆಳಗಿನಂತಿದೆ.
ಮೃಗಾಲಯದ ಪ್ರವೇಶ ಶುಲ್ಕ:
* ಹಳೆಯ ಶುಲ್ಕ ರೂ.30 ಇನ್ನು ಮುಂದೆ ರೂ.40 ಆಗಲಿದೆ.
* ಮಕ್ಕಳಿಗೆ ಹಳೆಯದರ ರೂ.15 ಇನ್ನು ಮುಂದೆ 20,
* ಶಾಲಾ ಮಕ್ಕಳಿಗೆ ಶೇ. 50 ರಿಯಾಯಿತಿ ಹಾಗಾಗಿ ರೂ.10.
* ವಿದೇಶಿಯರಿಗೆ ಈ ಹಿಂದೆ ರೂ.30 ಇತ್ತು. ಇನ್ನು ಮುಂದೆ ರೂ.100, ಮಕ್ಕಳಿಗೆ ರೂ.50 ಆಗಲಿದೆ.
* ಮೃಗಾಲಯದ ಒಳಗೆ ಸ್ಟಿಲ್ ಕ್ಯಾಮರಾ ತೆಗೆದುಕೊಂಡು ಹೋಗುವುದಾದರೆ ರೂ. 20,
* ವೀಡಿಯೋಗೆ 150 ರೂ ಪಾವತಿಸಬೇಕು. ಬ್ಯಾಟರಿ ಚಾಲಿತ ವಾಹನಗಳಿಗೆ ರೂ.100ನ್ನು ನೀಡಬೇಕಾಗುತ್ತದೆ.
ಮೃಗಾಲಯದ ಪ್ರವೇಶ ಶುಲ್ಕ ಹೆಚ್ಚಳಕ್ಕೆ ಕಾರಣ ಏನು ಎಂಬುವುದಕ್ಕೆ ಸ್ಪಷ್ಟನೆ ನೀಡಿರುವ ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷ ನಂಜುಂಡಸ್ವಾಮಿಯವರು ಈಗಾಗಲೇ ಆಹಾರ ಪದಾರ್ಥ ಹಾಗೂ ಮಾಂಸದ ಬೆಲೆ ಹೆಚ್ಚಾಗಿರುವುದರಿಂದ ಪ್ರವೇಶ ಶುಲ್ಕ ಹೆಚ್ಚಳ ಅನಿವಾರ್ಯವಾಗಿದೆ ಎಂದಿದ್ದಾರೆ. ಇಲ್ಲಿ ಸಮಾಧಾನದ ಸಂಗತಿಯೆಂದರೆ ವಾಹನ ನಿಲುಗಡೆ ಶುಲ್ಕ ಮಾತ್ರ ಹೆಚ್ಚಳ ಮಾಡಿಲ್ಲ ಎನ್ನೋದಷ್ಟೆ. [ಮೈಸೂರು]












Click it and Unblock the Notifications