ರಾಜ್ಯಪಾಲರ ವಿರುದ್ದ ಕರ್ನಾಟಕ ಬಂದ್!
ಬೆಂಗಳೂರು,
ಜ. 20 : ಹಗರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಅಶೋಕ್ ವಿರುದ್ದ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಮೊಕದ್ದಮೆ ಹೂಡಲು ಅನುಮತಿ ನೀಡಿದರೆ ಕರ್ನಾಟಕ ಬಂದ್ ಸೇರಿದಂತೆ ಎಲ್ಲಾ ರೀತಿಯ ತೀವ್ರ ಹೋರಾಟ ನಡೆಸಲು ಬಿಜೆಪಿ ಅಣಿಯಾಗಿದೆ. id="toptextpromo">ರಾಜ್ಯ
ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ರಾಜ್ಯಪಾಲರು ಸಿಎಂ ವಿರುದ್ದ ಮೊಕದ್ದಮೆಗೆ ಅನುಮತಿ ನೀಡಿದರೆ ಅವರ ವಿರುದ್ದ ಒಗ್ಗಟ್ಟಾಗಿ ಹೋರಾಟ ನಡೆಸುವ ಬಗ್ಗೆ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ. ಮುಖ್ಯಮಂತ್ರಿಗಳ ವಿರುದ್ದ ಆರೋಪಗಳು ಸಾಬೀತಾಗಿಲ್ಲ ಹೀಗಿರುವಾಗ ಮೊಕದ್ದಮೆ ಹೂಡಲು ಅನುಮತಿ ನೀಡಿದರೆ ಬೀದಿಗಿಳಿದು ಹೋರಾಟ ನಡೆಸುವ ಬಗ್ಗೆ ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. id='are-slot-1' class='oiad oi-axt oiadv'> id='top-searched-articles'>ರಾಜ್ಯಪಾಲರ
ವಿರುದ್ದ ಈ ತಿಂಗಳು 24ರಂದು ದೆಹಲಿಯಲ್ಲಿ ರಾಜ್ಯ ಸಂಸದರ ಪ್ರತಿಭಟನೆ ನಂತರ 25 ರಂದು ಬೆಂಗಳೂರಿನಲ್ಲಿ ಪಕ್ಷದ ಶಾಸಕರ ಪ್ರತಿಭಟನೆಗೆ ನಿರ್ಧರಿಸಲಾಗಿದೆ. ರಾಜ್ಯಪಾಲರು 26ರಂದು ತಮ್ಮ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. ಒಂದು ವೇಳೆ ರಾಜ್ಯಪಾಲರು ವ್ಯತಿರಿಕ್ತ ತೀರ್ಮಾನ ಕೈಗೊಂಡರೆ 27ರಂದು ಕರ್ನಾಟಕ ಬಂದ್ ಗೆ ಕರೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎನ್ನಲಾಗಿದೆ.(ಎಚ್ ಆರ್
ಭಾರದ್ವಾಜ್)












Click it and Unblock the Notifications