ವಿಘ್ನನಿವಾರಕನಿಗೆ ಲೈಂಗಿಕ ರೂಪ ಕೊಟ್ಟ ಟಿವಿ

Lord Ganesh
ನೆವಾಡಾ, ಜ. 18 : ಪ್ರಸಿದ್ಧ ಕಲಾವಿದ ಎಂ ಎಫ್ ಹುಸೇನ್ ಹಿಂದೂ ದೇವತೆಗಳನ್ನು ಚಿತ್ರ-ವಿಚಿತ್ರವಾಗಿ ಚಿತ್ರಿಸಿ ಛೀಮಾರಿ ಹಾಕಿಸಿಕೊಂಡು ದೇಶ ಬಿಟ್ಟಿರುವುದು ಗೊತ್ತಿರುವ ಸಂಗತಿ. ಇದೀಗ ಅಮೆರಿಕ ಮೂಲದ ಎನ್ ಬಿಸಿ ಎಂಬ ಟಿವಿ ಚಾನೆಲ್ ನಡೆಸುವ ಕಾರ್ಯಕ್ರಮವೊಂದರಲ್ಲಿ ವಿಘ್ನ ನಿವಾರಕ ಗಣೇಶನನ್ನು ಹೋಲುವ ಚಿತ್ರವನ್ನುಟ್ಟುಕೊಂಡು ಲೈಂಗಿಕತೆ ಸಂಬಂಧಿಸಿದ ಮಾಹಿತಿಯುಳ್ಳ ರಿಯಾಲಿಟಿ ಶೋವನ್ನು ಆಯೋಜಿಸಿರುವುದು ವ್ಯಾಪಕ ಟೀಕೆಗೆ ಒಳಗಾಗಿದೆ.

ಅಮೆರಿಕ ಮೂಲದ ಎನ್ ಬಿಸಿ ಟಿವಿ ಶನಿವಾರ ನಡೆಸುವ ಸಾಟರಡೇ ನೈಟ್ ಲೈವ್ ಎಂಬ ರಿಯಾಲಿಟಿ ಶೋ The Wrath of Ganesh ಕಾರ್ಯಕ್ರಮ ಪ್ರಸಾರವಾಗುತ್ತದೆ. ಲೈಂಗಿಕತೆಗೆ ಸಂಬಂಧಿಸಿದ ಮಾಹಿತಿ ನೀಡುವುದು ಈ ಕಾರ್ಯಕ್ರಮದ ಉದ್ದೇಶ.

ಈ ಕಾರ್ಯಕ್ರಮವನ್ನು ಪ್ರಸಿದ್ಧ ಹಾಸ್ಯ ನಟ ಹಾಗೂ ಗೊಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತ ಜಿಮ್ ಕ್ಯಾರಿ ಮತ್ತು ಕೆನನ್ ಥಾಮ್ಸನ್ ನಡೆಸಿಕೊಡುತ್ತಾರೆ. ಲೈಂಗಿಕತೆಗೆ ಸಂಬಂಧಿಸಿದಂತೆ ಹೊಸ ಹೊಸ ತಂತ್ರಗಾರಿಕೆಗಳನ್ನು ಹುಡುಕುತ್ತಾ ವಿಶ್ವ ಪರ್ಯಾಟನೆ ಮಾಡುವುದು. ಗಂಡು ಹೆಣ್ಣಿನ ಮಿಲನದಲ್ಲಿ ಆನೆಯ ತಲೆ ಹೊತ್ತಿರುವ ಗಣೇಶ್ ಅಸಹ್ಯವಾಗಿ ತೋರಿಸಲಾಗಿದೆ.

ವಿಘ್ನ ನಿವಾರಕ ಎಂದೇ ಭಾರತೀಯ ಹಿಂದುಗಳಲ್ಲಿ ಜನಮಾನಸವಾಗಿರುವ ಗಣಪನಿಗೆ ಅವಮಾನ ಮಾಡಿರುವುದನ್ನು ಅಮೆರಿಕದ ಹಿಂದು ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಗಣೇಶನನ್ನು ಅವಮಾನಿಸುವ ಮೂಲಕ ಸಮಸ್ತ ಹಿಂದುಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವುದರಿಂದ ಈ ಕೂಡಲೇ ಎನ್ ಬಿಸಿ ಟಿವಿ ಮುಖ್ಯಸ್ಥರು, ನಟರಾದ ಜಿಮ್ ಕ್ಯಾರಿ ಮತ್ತು ಕೆನಿನ್ ಥಾಮ್ಸನ್ ಕ್ಷಮೆ ಕೋರಬೇಕೆಂದು ಹಿಂದು ಸಂಘಟನೆಗಳ ಮುಖಂಡ ರಂಜನ್ ಜಾಡ್ ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+