ಶೀಲಾ ಕೀ, ಮುನ್ನಿ ಬದ್ನಾಂ ಹುಯಿ ಹಾಡಿಗೆ ಕೊಕ್ಕೆ

ಜ.10ರೊಳಗಾಗಿ ಉತ್ತರ ನೀಡುವಂತೆ ನ್ಯಾಯಮೂರ್ತಿ ಪ್ರದೀಪ್ ಕಾಂತ್ ಹಾಗೂ ರಿತುರಾಜ್ ಅಶ್ವಥಿ ಅವರನ್ನು ಒಳಗೊಂಡ ಪೀಠ ಸೂಚಿಸಿದೆ. ತೀಸ್ ಮಾರ್ ಖಾನ್, ದಬಾಂಗ್ ಚಿತ್ರದ ನಿರ್ಮಾಪಕರು, ನಿರ್ದೇಶಕರು, ಸೆನ್ಸಾರ್ ಮಂಡಳಿ, ಪ್ರಸಾರ ಖಾತೆ ಕಾರ್ಯದರ್ಶಿಯನ್ನು ಹೊಣೆಗಾರರೆಂದು ಅರ್ಜಿ ಸಲ್ಲಿಸಿದ ಮಹಿಳೆ ಆರೋಪಿಸಿದ್ದಾರೆ.
ಮಲೈಕಾ ಆರೋರಾ ಖಾನ್ ನರ್ತಿಸಿರುವ ಮುನ್ನಿ ಬದ್ನಾಂ ಹುಯಿ ಮತ್ತು ಸದ್ಯದ ಹಾಟ್ ನಾಯಕಿ ಕತ್ರೀನಾ ಕೈಫ್ ನರ್ತಿಸಿರುವ ಶೀಲಾ ಕಿ ಜವಾನಿ ಐಟಂ ಹಾಡುಗಳು ಜನಪ್ರಿಯತೆಯ ಚಾರ್ಟಲ್ಲಿ ಮೊದಲೆರಡು ಸ್ಥಾನದಲ್ಲಿವೆ. ಪಡ್ಡೆಗಳಿಗಂತೂ ನಿದ್ದೆ ಕೆಡಿಸಿವೆ. ಈ ಎರಡೂ ಹಾಡುಗಳು ಅಶ್ಲೀಲತೆಯಿಂದ ಕೂಡಿದ್ದು, ಯುವ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲವು ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಿಂದಿ ಚಿತ್ರಗಳಲ್ಲಂತೂ ಸ್ವೇಚ್ಛಾಚಾರ ಮಿತಿಮೀರಿದೆ. ಸೆನ್ಸಾರ್ ಸಹ ಸಡಿಲು ಬಿಟ್ಟಿರುವುದರಿಂದ ವಿಪರೀತ ಕ್ರೌರ್ಯ, ಲೈಂಗಿಕತೆ, ಮಾದಕ ದೃಶ್ಯಗಳು ಹೆಚ್ಚೂ ಕಡಿಮೆ ಎಲ್ಲ ಚಿತ್ರಗಳಲ್ಲಿಯೂ ಹಾಸುಹೊಕ್ಕಾಗಿವೆ. ಈ ಮನವಿಯನ್ನು ನ್ಯಾಯಾಲಯ ಪುರಸ್ಕರಿಸುವುದೆ?












Click it and Unblock the Notifications