ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ವಿರುದ್ಧ ವಾಕ್ಸಮರಕ್ಕೆ ವಿಪಕ್ಷಗಳು ಸಜ್ಜು

By Mahesh
|
Google Oneindia Kannada News

Karnataka Assembly session on Jan.6,2011
ಬೆಂಗಳೂರು, ಜ.3: ಗುರುವಾರ(ಜ.6) ನಡೆಯಲಿರುವ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಸರಕಾರದ ವಿರುದ್ಧ ಬ್ರಹ್ಮಾಸ್ತ್ರ ಬಳಸಲು ಪ್ರತಿಪಕ್ಷ ಸಜ್ಜಾಗಿದ್ದರೆ, ಪ್ರತಿಪಕ್ಷವನ್ನು ಬಗ್ಗುಬಡಿಯಲು ಆಡಳಿತ ಪಕ್ಷ ಕೂಡಾ ತೀವ್ರ ತಯಾರಿ ನಡೆಸಿದೆ. ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟಗೊಂಡ ಹಿನ್ನೆಲೆಯಲ್ಲಿ ಅಧಿವೇಶನ ಬಿಸಿ ಬಿಸಿ ಚರ್ಚೆಗೆ ಒಳಪಡಲಿದೆ.

ಭೂ ಹಗರಣ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ತೆರಿಗೆ ವಂಚನೆ ಮುಂತಾದ ವಿಷಯಗಳು ಅಧಿವೇಶನದಲ್ಲಿ ಹಾಟ್ ಟಾಪಿಕ್ ಗಳಾಗಲಿವೆ. ಇದರ ಜೊತೆಗೆ ವಿಧಾನಸಭಾಧ್ಯಕ್ಷರ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಸದನದಲ್ಲಿ ತೋರಿದ ಅತಿರೇಕದ ವರ್ತನೆಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ಶಾಸಕರ ಮೇಲೆ ಕ್ರಮ ಕೈಗೊಳ್ಳಲು ಅದು ಪ್ರತಿತಂತ್ರ ಹೆಣೆದಿದೆ.

2009ರ ಡಿಸೆಂಬರ್ 30ರಂದು ನಡೆದ ವಿಧಾನಸಭಾಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರಾದ ಜಮೀರ್ ಅಹ್ಮದ್, ಬಾಲಕೃಷ್ಣ, ಎ.ಮಂಜು, ರಹೀಂ ಖಾನ್, ಕಾಕಾ ಸಾಹೇಬ್ ಪಾಟೀಲ್ ಸದನದೊಳಗೆ ಮೈಕ್ ಎಳೆದು, ಕಾಗದಗಳನ್ನು ಹರಿದು ಹಾಕುವ ಮೂಲಕ ದಾಂಧಲೆ ನಡೆಸಿದ್ದರು.

ಈ ಕುರಿತು ತನಿಖೆಗೆ ಶಾಸಕ ಡಾ.ಹೇಮಚಂದ್ರ ಸಾಗರ್ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚಿಸಿದ್ದು, ಅದರ ವರದಿಯು ಈ ಬಾರಿಯ ಅಧಿವೇಶನದಲ್ಲಿ ಮಂಡಿಸಲು ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ನಿರ್ಧರಿಸಿದ್ದಾರೆ. ಈ ವರದಿಯನ್ನು ಮುಂದಿಟ್ಟುಕೊಂಡು ಬಿಜೆಪಿ, ಪ್ರತಿಪಕ್ಷವನ್ನು ಬಗ್ಗು ಬಡಿಯಲು ಕಾರ್ಯತಂತ್ರವನ್ನು ರೂಪಿಸಿದೆ. ಅಲ್ಲದೆ ಸದನ ಸಮಿತಿಯ ವರದಿಯು ಐದು ಮಂದಿ ಶಾಸಕರನ್ನು ಅಮಾನತುಗೊಳಿಸುವಂತೆ ಶಿಫಾರಸು ಕೂಡಾ ಮಾಡಿದೆ ಎಂದು ಹೇಳಲಾಗುತ್ತಿದೆ. [[ವಿಧಾನಸಭೆ]

English summary
Karnataka Assembly Session to be scheduled on Jan.6, 2011. ZP TP Election results, land scam crisis, zameer ahmed khan suspention will be hot topics of discussion
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X