ರಾಮನಗರದ ಈ ಮೇಕೆ ತಿನ್ನದ ವಸ್ತುವೇ ಇಲ್ಲ!

ಅವು ಇವು ತಿಂದು ಬೇಜಾರಾದಾಗ ಆಗಾಗ್ಗೆ ನೈಂಟಿ ಎಣ್ಣೆ ಹಾಕಿ ಜುಮ್ಮಂತ ಓಡಾಡಿಕೊಂಡಿರುತ್ತದೆ. ರಾಮನಗರ ಜಿಲ್ಲೆ ಕೇತೋಹಳ್ಳಿ ರೈಲ್ವೆ ಗೇಟ್ ಬಳಿ ಪ್ರತಿನಿತ್ಯ ಬರುವ ಮೇಕೆ (ಕರಿಯ) ಎಲ್ಲರ ಫೆವರಿಟಿ ಪ್ರಾಣಿಯಾಗಿದೆ. ಅರೆ ನೋಡೀ ಸ್ವಾಮಿ ನಾನಿರೋದೆ ಹೀಗೆ ಅಂತ ಸಖತ್ ಎಂಜಾಯ್ ಮಾಡೋ ಈ ಕರಿಯ ಸಿಕ್ಕಿದ್ದನ್ನೆಲ್ಲಾ ತಿಂದ್ರೂ ಆರೋಗ್ಯದಲ್ಲಿ ಮಾತ್ರ ಏರುಪೇರಾಗಿಲ್ಲ. ಗ್ಯಾಸು, ಅಸಿಡಿಟಿ, ಹೊಟ್ಟೆ ತೊಳೆಸುವುದು... ಯಾವ ತೊಂದರೆಯೂ ಇಲ್ಲ.
ರೈಲ್ವೆ ಗೇಟ್ ಬಳಿ ಬರೋ ಯಾರೇ ಆಗಲೀ ಸಿಗರೇಟ್ ಹಚ್ಚಿ ಬಾಯಲ್ಲಿಟ್ರೆ ಸಾಕು ಉರಿಯೋ ಸಿಗರೇಟನ್ನೇ ಕಸಿದುಕೊಂಡು ಸ್ವಾಹ ಮಾಡೋದೇ ಈ ಕರಿಯನ ವಿಶೇಷವಾಗಿದೆ. ಆದ್ದರಿಂದಲೇ ಈ ಮೇಕೆ ಎದುರು 5 ರೂಪಾಯಿ ಬಂಡವಾಳ ಹಾಕಿ ಸಿಗರೇಟ್ ಸೇದಿದ್ರೆ ಒಂದು ಧಮ್ ಕೂಡ ಸೇದೋಕೆ ಆಗಲ್ಲ ಅಂತ ರೈಲ್ವೆ ಇಲಾಖೆಯ ನೌಕರ ಪುಟ್ಟರಾಜು ಹೇಳುತ್ತಾರೆ.
ಅಂಬಾಡಹಳ್ಳಿಯಲ್ಲಿ ವಿಚಿತ್ರ ಮೇಕೆಮರಿ ಜನನ
ಆಗಾಗ್ಗೆ ಕಿಕ್ ತೆಗೆದುಕೊಳ್ಳಲು ಯಾವುದೇ ಬ್ರ್ಯಾಂಡ್‌ನ ಮದ್ಯವನ್ನಾಗಲೀ ನೈಂಟಿ ಲೆಕ್ಕದಲ್ಲಿ ಕುಡಿದ್ರೂ ಕೂಡ ಅಳ್ಳಾಡೋ ಜೀವ ಅಲ್ಲ ಈ ಮೇಕೇದು. ಸದಾ ರೈಲ್ವೆ ಗೇಟ್ ಟ್ರ್ಯಾಕ್ ಬಳಿಯೇ ಬೀಡು ಬಿಡೋ ಈ ಮೇಕೆ ರೈಲಿನ ಶಬ್ಧ ಕೇಳಿದ ತಕ್ಷಣವೇ ರೈಲು ಪ್ರಯಾಣಿಕರಿಗೆ ತನ್ನ ಮುಖದರ್ಶನ ಮಾಡಿಸಿ ದೈನಂದಿನ ಆಹಾರಕ್ಕೆ ಸಿದ್ಧವಾಗುತ್ತದೆ.
ಕಲಿಗಾಲ ಕಣ್ರಪ್ಪೋ ನಡೀಬಾರದ್ದೆಲ್ಲಾ ನಡೀತಾದೆ, ಕಲ್ಲುಕೋಳಿ ಕೂಗೋ ಸಮಯ ಹತ್ತಿರವಾಗ್ತಾ ಐತೆ, ಕಲ್ಲು ಬಸವ ಗುಟರೋ ಹಾಕ್ತೈತೆ ಅಂತ ಹೇಳೋ ಈ ಸಂದರ್ಭದಲ್ಲಿ ವೈರ್. ಸೋಪು, ಸಿಗರೇಟ್, ಗ್ರೀಸ್‌ನ್ನೇ ಭಕ್ಷ್ಯ ಭೋಜನವನ್ನಾಗಿಸಿಕೊಂಡು ಸುರಪಾನ ಮಾಡಿ ಲೈಫು ಇಷ್ಟೇನೇ ಅಂತ ಎಂಜಾಯ್ ಮಾಡುತ್ತಿರೋ ಈ ಮೇಕೆ ಸದ್ಯಕ್ಕೆ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. [ರಾಮನಗರ]
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications