ಬೆಂಗಳೂರಿಗರಿಗೆ ನ್ಯೂ ಇಯರ್ ಸಂಚಾರ ಸಲಹೆ

New Year Traffic restrictions
ಬೆಂಗಳೂರು, ಡಿ.31: ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಯಾವುದೇ ನಿರ್ಬಂಧ ಹೇರಿದರೂ ಬ್ರಿಗೇಡ್ ರಸ್ತೆ, ಎಂಜಿ ರಸ್ತೆಯಲ್ಲಿ ಡಿ.31 ಮಧ್ಯರಾತ್ರಿ ಜನಜಂಗುಳಿ ನೆರೆದು ಕುಣಿದು ಕುಪ್ಪಳಿಸುವುದು ನಗರದಲ್ಲಿ ಮಾಮೂಲಿ. ಇದಕ್ಕೆ ಪೊಲೀಸರು ಬೇಡವೆನ್ನುವುದಿಲ್ಲ. ಆದರೆ, ಸಂಚಾರ ವ್ಯವಸ್ಥೆ, ವಾಹನ ನಿಲುಗಡೆ, ಬಸ್ ವ್ಯವಸ್ಥೆ ಬಗ್ಗೆ ಜನರಿಗೆ ಈ ಕೆಳಗಿನ ಮಾಹಿತಿ ಇರಲೇಬೇಕು. ಇಲ್ಲದಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಂದು ನಗರ ಪೊಲೀಸರು ಪ್ರಕಟಿಸಿದ್ದಾರೆ.

ವಾಹನ ನಿಲುಗಡೆ ಎಲ್ಲೆಲ್ಲಿ?: ಪೊಲೀಸ್ , ಮಾಧ್ಯಮ, ತುರ್ತುವಾಹನ ಹೊರತುಪಡಿಸಿ ಡಿ.31ರ ಸಂಜೆ 5 ಗಂಟೆಯಿಂದ ಜ.1 ರ ಮುಂಜಾನೆ 3 ಗಂಟೆವರೆಗೆ ಈ ಕೆಳಗಿನ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ.

* ಎಂಜಿ ರಸ್ತೆಯಿಂದ ಅನಿಲ್ ಕುಂಬ್ಳೆ ವೃತ್ತ (ಟ್ರಿನಿಟಿ ರಸ್ತೆವರೆಗೆ)
* ಬ್ರಿಗೇಡ್ ರಸ್ತೆಯಿಂದ ಆರ್ಟ್ಸ್ ಅಂಡ್ ಕ್ರಾಫ್ಟ್ ಎಂಪೋರಿಯಂವರೆಗೆ ( ಒಪೆರಾ ಜಂಕ್ಷನ್ ವರೆಗೆ)
* ಚರ್ಚ್ ರಸ್ತೆ ಜಂಕ್ಷನ್ ನಿಂದ ಬ್ರಿಗೇಡ್ ರಸ್ತೆ( ಸೈಂಟ್ ಮಾರ್ಕ್ಸ್ ರಸ್ತೆವರೆಗೆ)
* ರೆಸ್ಟ್ ಹೌಸ್ ರಸ್ತೆ ಜಂಕ್ಷನ್ ನಿಂದ ಬ್ರಿಗೇಡ್ ರಸ್ತೆ( ಮ್ಯೂಸಿಯಂ ರಸ್ತೆವರೆಗೆ)
* ಮ್ಯೂಸಿಯಂ ರಸ್ತೆ ಜಂಕ್ಷನ್ ನಿಂದ ಎಂಜಿರಸ್ತೆ (ಹಳೆ ಮದ್ರಾಸ್ ಬ್ಯಾಂಕ್ ರಸ್ತೆವರೆಗೆ)

ಪಾದಚಾರಿಗಳಿಗೆ ಮಾರ್ಗಸೂಚಿ: ಎಂಜಿ ರಸ್ತೆ ಜಂಕ್ಷನ್ ನಿಂದ ಒಪೆರಾ ಜಂಕ್ಷನ್ ಮೂಲಕ ಬ್ರಿಗೇಡ್ ರಸ್ತೆ ತಲುಪಹುದು. ಮತ್ತೆ ಅದೇ ರಸ್ತೆಯಲ್ಲಿ ಮರಳುವಂತಿಲ್ಲ. ರೆಸಿಡೆನ್ಸಿ ರಸ್ತೆ ಮುಖಾಂತರ ಎಂಜಿ ರಸ್ತೆ ತಲುಪಬಹುದು.

ಮಧ್ಯರಾತ್ರಿ ಬಸ್ ವ್ಯವಸ್ಥೆ : ಡಿ.31 ರ ಮಧ್ಯರಾತ್ರಿ 1 ಗಂಟೆವರೆಗೂ ಸಂಭ್ರಮಾಚರಣೆಗೆ ಪೊಲೀಸರು ಅವಕಾಶ ಕಲ್ಪಿಸಿದ್ದಾರೆ. ಮದ್ಯ ಸೇವಿಸಿ ಮತ್ತಿನಲ್ಲಿ ವಾಹನ ಚಾಲನೆ ಮಾಡುವ ಬದಲು, ಚಾಲಕರೊಬ್ಬರನ್ನು ಜೊತೆಗೆ ಕರೆದೊಯ್ಯುವಂತೆ ಪೊಲೀಸ್ ಇಲಾಖೆ ಸೂಚಿಸಿದೆ.

ಡಿ.31 ರಂದು ಎಂಜಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಮನೆಗಳಿಗೆ ತೆರಳುವವರಿಗೆ ಬಿಎಂಟಿಸಿ ಮಧ್ಯರಾತ್ರಿ ಬಸ್ ವ್ಯವಸ್ಥೆ ಮಾಡಿದೆ. ಬಿಗ್ 10 ಬಸ್ ವ್ಯವಸ್ಥೆ ರಾತ್ರಿ 10.30 ರಿಂದ ತಡರಾತ್ರಿ 1 ಗಂಟೆವರೆಗೆ ಸಂಚರಿಸಲಿದೆ. ರಾತ್ರಿ 11 ಗಂಟೆ ನಂತರ ಪ್ರಯಾಣ ದರ 20 ರು ಆಗಲಿದೆ.

* ಜಿ1: ಮೇಯೋಹಾಲ್ ನಿಂದ ಕಾಡುಗೋಡಿ ಬಸ್ ನಿಲ್ದಾಣ
* ಜಿ2: ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ
* ಜಿ3: ಮೇಯೋಹಾಲ್ ನಿಂದ ಸರ್ಜಾಪುರ
* ಜಿ4: ಬ್ರಿಗೇಡ್ ರಸ್ತೆಯಿಂದ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್
* ಜಿ5: ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಗ್ಗಲಿಪುರ
* ಜಿ6: ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕೆಂಗೇರಿ ಉಪನಗರ
* ಜಿ7: ಬಿಆರ್ ವಿ ಪೆರೇಡ್ ಗ್ರೌಂಡ್ ನಿಂದ ಜನಪ್ರಿಯ ಟೌನ್ ಶಿಪ್
* ಜಿ8: ಬಿಆರ್ ವಿ ಪೆರೇಡ್ ಗ್ರೌಂಡ್ ನಿಂದ ನೆಲಮಂಗಲ
* ಜಿ9: ಬಿಆರ್ ವಿ ಪೆರೇಡ್ ಗ್ರೌಂಡ್ ನಿಂದ ಯಲಹಂಕ ಉಪನಗರ
* ಜಿ10: ಬಿಆರ್ ವಿ ಪೆರೇಡ್ ಮೈದಾನದಿಂದ ಆರ್ ಕೆ ಹೆಗಡೆ ನಗರ
* ಜಿ11: ಬಿಆರ್ ವಿ ಪೆರೇದ್ ಮೈದಾನದಿಂದ ಬಾಗಲೂರು
* ಜಿ12: ಮೆಯೋಹಾಲ್ ನಿಂದ ಕೆಆರ್ ಪುರಂ

ಸ್ವಂತ ವಾಹನದಲ್ಲಿ ಬಂದು ಕಷ್ಟಪಡುವುದಕ್ಕಿಂತ ಬಿಎಂಟಿಸಿ ವಾಹನ ಬಳಸಿದರೆ ಅಪಾಯ ಇರುವುದಿಲ್ಲ. ಸಾರ್ವಜನಿಕ ಸೇವೆಯನ್ನು ಬಳಸುವಂತೆ ಬೆಂಗಳೂರು ನಗರ ಸಾರಿಗೆ ಸಂಸ್ಥೆ ಕೋರಿದೆ. [ಹೊಸ ವರ್ಷ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+