ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಜಪೇಯಿ ಅವರಿಗೆ ಭಾರತರತ್ನ ನೀಡಿ : ಬಿಜೆಪಿ

By Mrutyunjaya Kalmat
|
Google Oneindia Kannada News

Atal Bihari Vajpayee
ನವದೆಹಲಿ, ಡಿ. 26 : ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ 86ನೇ ಹುಟ್ಟುಹಬ್ಬವನ್ನು ಶನಿವಾರ ಆಚರಿಸಲಾಯಿತು. ಇದೇ ವೇಳೆ ವಾಜಪೇಯಿ ದೇಶಕ್ಕೆ ನೀಡಿದ ಕೊಡುಗೆಗಾಗಿ ದೇಶದ ಅತ್ಯುನ್ನತ ಬಾರತ ರತ್ನ ಪ್ರಶಸ್ತಿ ನೀಡಬೇಕೆಂದು ಬಿಜೆಪಿ ನಾಯಕರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.

ಭಾರತದಲ್ಲಿ ರಾಜಕೀಯ ಮೌಲ್ಯಗಳು ಕುಸಿದಿದ್ದ ಸಂದರ್ಭದಲ್ಲಿ ಅವುಗಳನ್ನು ಮತ್ತೆ ಮೇಲೆತ್ತುವಲ್ಲಿ ವಾಜಪೇಯಿ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅವರನ್ನು ದೇಶ ಎಂದಿಗೂ ಮರೆಯುವುದಿಲ್ಲ. ಹಾಗಾಗಿ ವಾಜಪೇಯಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡುವ ವಿಚಾರದಲ್ಲಿ ಎಲ್ಲರೂ ಬೆಂಬಲಿಸಬೇಕು ಎಂದು ಬಿಜೆಪಿ ನಾಯಕ ರಾಜನಾಥ್ ಸಿಂಗ್ ಹೇಳಿದ್ದಾರೆ.

ಈ ಮಧ್ಯೆ ವಾಜಪೇಯಿ ನಿವಾಸಕ್ಕೆ ತೆರಳಿದ ಅಡ್ವಾಣಿ ಸೇರಿದಂತೆ ಬಿಜೆಪಿ ನಾಯಕರು ಶುಭಾಶಯ ಕೋರಿದ್ದಾರೆ. ಕೇರಳ ಪ್ರವಾಸ ಮುಗಿಸಿ ನವದೆಹಲಿಗೆ ಆಗಮಿಸಿದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇರವಾಗಿ ವಾಜಪೇಯಿ ನಿವಾಸಕ್ಕೆ ಭೇಟಿ ಹೂಗುಚ್ಛ ನೀಡಿ ಶುಭ ಕೋರಿರುವುದು ವಿಶೇಷ.(ಅಟಲ್ ಬಿಹಾರಿ ವಾಜಪೇಯಿ)

English summary
It was a suggestion first made by L K Advani nearly three years ago. On Saturday, as Atal Bihari Vajpayee turned 86, the BJP revived its demand for conferring Bharat Ratna — the highest civilian honour — on the ailing former Prime Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X