ಬೆಂಗಳೂರಿನಲ್ಲಿ ಎಬಿವಿಪಿ 56ನೇ ರಾಷ್ಟ್ರೀಯ ಅಧಿವೇಶನ

ಅಧಿವೇಶನದಲ್ಲಿ ಪ್ರಮುಖವಾಗಿ ಶೋಭಾಯಾತ್ರೆ, ಸಾರ್ವಜನಿಕ ಸಭೆ, ಶಿಕ್ಷಣದ ವ್ಯಾಪಾರೀಕರಣ, ಕಾಶ್ಮೀರದ ಪ್ರತ್ಯೇಕತೆಯ ಕೂಗು, ನಕ್ಸಲೀಯರ ಕುಕೃತ್ಯ, ಭಯೋತ್ಪಾದನೆ, ಭ್ರಷ್ಟಾಚಾರ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಅಧಿವೇಶನದ ಸ್ವಾಗತ ಸಮಿತಿಯಲ್ಲಿ ಶಿಕ್ಷಣ, ಕೈಗಾರಿಕೆ, ವಾಣಿಜ್ಯ, ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರಗಳ 53 ಜನ ಪ್ರಮುಖರನ್ನು ಆಯ್ಕೆ ಮಾಡಲಾಗಿದೆ.
ಪ್ಲಾಸ್ಟಿಕ್ ಬಳಕೆ ನಿಷೇಧ : ಸಮ್ಮೇಳನದ ಯಶಸ್ಸಿಗೆ ವಸತಿ, ಸ್ವಚ್ಛತೆ,ವೇದಿಕೆ ಸೇರಿದಂತೆ 80 ವಿಭಾಗಗಳಲ್ಲಿ ಸುಮಾರು 600 ವಿದ್ಯಾರ್ಥಿಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಸಮ್ಮೇಳನಕ್ಕಾಗಿ 7,500 ಮಂದಿಯಿಂದ 75 ಲಕ್ಷ ರೂ. ಹಣ ಸಂಗ್ರಹಿಸಲಾಗಿದೆ. ಈ ಬಾರಿ ಮತ್ತೊಂದು ವಿಶೇಷತೆಯೆಂದರೆ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲು ಸಮ್ಮೇಳನ ಸ್ಥಳದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ.
ಡಿಸೆಂಬರ್ 25: ಪ್ರಸಕ್ತ ಉಗ್ರರು, ನಕ್ಸಲೀಯರ ಕುಕೃತ್ಯ, ಭಯೋತ್ಪಾದನೆ ಅಟ್ಟಹಾಸ, ಶಿಕ್ಷಣದ ವ್ಯಾಪಾರಿಕರಣ, ಪರಿಸರ ಮಾಲಿನ್ಯ ಇತ್ಯಾದಿ ವಿಷಯಗಳ ಕುರಿತ ಪ್ರದರ್ಶಿನ ಉದ್ಘಾಟನೆ. ಸಂಜೆ 5.30 ಕ್ಕೆ ಒಂದು ಸಾವಿರ ವಿದ್ಯಾರ್ಥಿಗಳಿಂದ ವಂದೇಮಾತರಂ ಗಾಯನ ಹಾಗೂ ವಿದ್ಯಾರ್ಥಿ ಯುವಜನರ ಚಳುವಳಿ ಕುರಿತು ಉಪನ್ಯಾಸ.
ಡಿಸೆಂಬರ್ 26: ಬೆಳಗ್ಗೆ 11 ಕ್ಕೆ ಪರಿಸರವಾದಿ ಡಾ. ವಂದನಾ ಶಿವ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಮುಖ್ಯ ಅತಿಥಿಯಾಗಿ ಬೆಂ.ವಿವಿ ಕುಲಪತಿ ಡಾ.ಎನ್.ಪ್ರಭುದೇವ್, ಅಭಾವಿಪ ರಾಷ್ಟ್ರೀಯ ಅಧ್ಯಕ್ಷ (ಮುಂಬಯಿ) ಮಿಲಿಂದ್ ಮರಾಠೆ, ಪ್ರಧಾನ ಕಾರ್ಯದರ್ಶಿ (ಭೂಪಾಲ್) ವಿಷ್ಣುದತ್ ಶರ್ಮಾ ಭಾಗವಹಿಸಲಿದ್ದಾರೆ. ಸಂಜೆ 5.30 ಕ್ಕೆ ದೇಶದ ಏಕತೆಯ ಮುಂದಿರುವ ಸವಾಲುಗಳು ವಿಷಯದ ಬಗ್ಗೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮಾತನಾಡಲಿದ್ದಾರೆ.
ಡಿಸೆಂಬರ್ 27: ಬೆಳಗ್ಗೆ 9.15 ಕ್ಕೆ ನಮ್ಮ ಕಲ್ಪನೆಯಲ್ಲಿ ಭವಿಷ್ಯದ ಭಾರತ – ಪರಿಷತ್‌ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ (ಮುಂಬಯಿ) ಸುನಿಲ್ ಅಂಬೇಕರ್ ಅವರಿಂದ ಭಾಷಣ, ಸಂಜೆ 4 ಕ್ಕೆ ಶೋಭಾಯಾತ್ರೆ, 5.30 ಕ್ಕೆ ಆನಂದರಾವ್ ವೃತ್ತದ ಬಳಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪರಿಷತ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಿಂದ ಭಾಷಣ ಹಾಗೂ ದೇಶದ ಪ್ರಮುಖ ವಿವಿ ವಿದ್ಯಾರ್ಥಿ ನಾಯಕರಿಂದ ಯುವ ಸಾಧಕರಿಗೆ ಅಭಿನಂದನೆ. ರಾತ್ರಿ 9 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ.
ಡಿಸೆಂಬರ್ 28: ಬೆಳಗ್ಗೆ 11 ಕ್ಕೆ ಸಾಮಾಜಿಕ ಕಾರ್ಯಕರ್ತ ಬಿಹಾರದ ಆನಂದ್‌ಕುಮಾರ್ ಅವರಿಗೆ ಪ್ರೊ.ಯಶವಂತರಾವ್ ಕೇಳ್ಕರ್ ಯುವ ಪುರಸ್ಕಾರ ಪ್ರದಾನ. ಅತಿಥಿಗಳಾಗಿ ಆಸ್ಕರ್ ಪ್ರಶಸ್ತಿ ಪುರಸ್ಕೃತ ಕೇರಳದ ಡಾ. ರೆಸೂಲ್ ಪೂಕುಟ್ಟಿ ಭಾಗವಹಿಸಲಿದ್ದಾರೆ. ಇದೇ ವೇಳೆ ರಾಜ್ಯದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಸನ್ಮಾನಿಸುವ ಕಾರ್ಯಕ್ರಮವಿದೆ.[ವಿದ್ಯಾರ್ಥಿ]











Click it and Unblock the Notifications