ಫೇಸ್ ಬುಕ್ ನ ಮಾರ್ಕ್ ಟೈಮ್ ವರ್ಷದ ವ್ಯಕ್ತಿ

Mark Zuckerberg named TIME's Person of the Year
ವಾಷಿಂಗ್ಟನ್, ಡಿ.16: ಸಾಮಾಜಿಕ ಜಾಲ ತಾಣ ಫೇಸ್‌ಬುಕ್ ನ ಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಾರ್ಕ್ ಝುಕರ್‌ಬರ್ಗ್‌ರನ್ನು ಟೈಮ್ ನಿಯತಕಾಲಿಕೆಯ "2010ರ ವರ್ಷದ ವ್ಯಕ್ತಿ"ಯಾಗಿ ಘೋಷಿಸಲಾಗಿದೆ. ವಿಕಿಲೀಕ್ಸ್ ಸ್ಥಾಪಕ ಜುಲಿಯನ್ ಅಸ್ಸಾಂಜೆ ಅವರು ಮಾರ್ಕ್ ಗೆ ತೀವ್ರ ಪೈಪೋಟೀ ನೀಡಿದ್ದರು.

26ರ ಹರೆಯದ ಝುಕರ್‌ಬರ್ಗ್ ವಿಶ್ವದ ಅತ್ಯಂತ ಕಿರಿಯ ಬಿಲಿಯಾಧಿಪತಿಯಾಗಿದ್ದು, ಲೋಕೋಪಕಾರದ ಉದ್ದೇಶದಿಂದ ಸೇವೆ ಸಲ್ಲಿಸುವ ಪ್ರಮುಖರಾಗಿದ್ದಾರೆ. ಝುಕರ್‌ಬರ್ಗ್ ಫೇಸ್‌ಬುಕ್ ತಾಣಕ್ಕೆ ಸಂಬಂಧಿಸಿದ ಶೇಕಡ 25ರಷ್ಟು ಪಾಲು ಬಂಡವಾಳವನ್ನು ಹೊಂದಿದ್ದಾರೆ. ಟೈಮ್ ಅಯ್ಕೆಯಿಂದ ತುಂಬಾ ಖುಷಿಯಾಗಿದೆ ಎಂದು ಸ್ನೇಹಿತರನ್ನು ಬೆಸೆಯುವ ಈ ತಾಣ ಇನ್ನಷ್ಟು ಬೆಳೆಸುವ ಆಸೆಯಿದೆ ಎಂದು ಮಾರ್ಕ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಮಾರ್ಕ್ ಹಾಗೂ ಜುಲಿಯನ್ ಅವರಿಬ್ಬರನ್ನು ಒಂದೇ ನಾಣ್ಯದ ಎರಡು ಮುಖಗಳು ಎಂದು ಟೈಮ್ಸ್ ಪತ್ರಿಕೆ ಬಣ್ಣಿಸಿದೆ. ಜುಲಿಯನ್ ಅವರ್ ಸೃಷ್ಟಿಸಿದ ಲೋಕ ಸತ್ಯ ಮಾರ್ಗದಲ್ಲಿ ನಡೆಯುತ್ತಿದ್ದು ಹಲವಾರು ಕಾಣದ ಕೈಗಳ ಬೆಂಬಲ ಸಿಕ್ಕಿದೆ ಹಾಗೂ ವಿಕಿಲೀಕ್ಸ್ ಬಹಿರಂಗ ಮಾಡುವ ಸತ್ಯದಿಂದ ಅನೇಕಾನೇಕ ಶತ್ರುಗಳು ಸಹಾ ಹುಟ್ಟಿಕೊಂಡಿದ್ದಾರೆ. ಝುಕರ್ ಬರ್ಗ್ ಅವರು ಸೃಷ್ಟಿಸಿದ ಲೋಕದಲ್ಲಿ ಕಳೆದು ಹೋದ ಸ್ನೇಹಿತರನ್ನು ಬೆಸೆಯುವುದರ ಜೊತೆಗೆ, ಹೊಸ ಹೊಸ ಗೆಳೆತನಕ್ಕೆ ನಾಂದಿ ಹಾಡುತ್ತಿದೆ ಎಂದು ಟೈಮ್ ಹೇಳಿದೆ.

ಕಳೆದ ವರ್ಷ ಈ ಪ್ರಶಸ್ತಿಯನ್ನು ಫೆಡರಲ್ ರಿಸರ್ವ್‌ನ ಮುಖ್ಯಸ್ಥ ಬೆನ್ ಬೆರ್ನಾಂಕೆ ಪಡೆದಿದ್ದರು. 2008ರಲ್ಲಿ ಈ ಪ್ರಶಸ್ತಿಯನ್ನು ಬರಾಕ್ ಒಬಾಮ ಗಳಿಸಿದ್ದರು. 2007ನೆ ಸಾಲಿನಲ್ಲಿ ರಶ್ಯದ ಪ್ರಧಾನಿ ವ್ಲಾದಿಮಿರ್ ಪುತಿನ್ ಟೈಮ್ ವರ್ಷದ ವ್ಯಕ್ತಿಯಾಗಿ ಹೊರಹೊಮ್ಮಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+