ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಡೆಯದ ಸಂಸತ್ ಕಲಾಪಕ್ಕೆ 171 ಕೋಟಿ ರು. ಬಲಿ

By Mahesh
|
Google Oneindia Kannada News

Parliament Winter Session loss
ನವದೆಹಲಿ, ಡಿ.14 : ಚಳಿಗಾಲದ ಅಧಿವೇಶನದಲ್ಲಿ 22 ದಿನಗಳ ಕಾಲ ಸಂಸತ್ ಕಲಾಪ ನಡೆದರೂ, 9 ಗಂಟೆ ಅವಧಿ ಮಾತ್ರ ಚರ್ಚೆ ನಡೆದಿದೆ. ಮಿಕ್ಕ ಸಮಯವನ್ನು ಕಾಮನ್ ವೆಲ್ತ್ ಕ್ರೀಡಾಕೂಟ ಹಗರಣ ಹಾಗೂ ಸ್ಪೆಕ್ಟ್ರಂ ಹಗರಣ ನುಂಗಿ ಹಾಕಿದೆ. ಈ ಮೂಲಕ 171 ಕೋಟಿ ರು.ಗಳಷ್ಟು ಸಾರ್ವಜನಿಕರ ಹಣ ಪೋಲಾಗಿದೆ. ಒಟ್ಟಾರೆ ಕಳೆದ 25 ವರ್ಷಗಳ ಇತಿಹಾಸ ಅತಿ ಕಡಿಮೆ ಅವಧಿ ಚರ್ಚೆ ನಡೆಸಿದ ಅಪಕೀರ್ತಿ ಈ ಚಳಿಗಾಲದ ಅಧಿವೇಶನಕ್ಕೆ ಸಂದಿದೆ.

22 ದಿನಗಳ ಕಲಾಪದ ಪೈಕಿ ಪ್ರತಿ ದಿನದ ಕಲಾಪಕ್ಕೆ 7.8 ಕೋಟಿ ರೂ. ಖರ್ಚಾಗಿದೆ. ಈ ದುಬಾರಿ ವೆಚ್ಚದ ನಷ್ಟಕ್ಕೆ ಕಾರಣವಾಗಿದ್ದ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆಯ ಎಂಬ ನೆಪ. 2 ಜಿ ಸ್ಪೆಕ್ಟ್ರಂ ಹಗರಣವನ್ನು ಜೆಪಿಸಿಗೆ ಒಳಪಡಿಸುವಂತೆ ಆಗ್ರಹಿಸಿ ಬಿಜೆಪಿ, ಜೆಡಿಯು ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಜತೆಗೆ ಎನ್ ಡಿಎಯೇತರ ಪ್ರತಿಪಕ್ಷಗಳು ಕೂಡಾ ಸಂಸತ್‌ನಲ್ಲಿ ಕೋಲಾಹಲವೆಬ್ಬಿಸಿದ್ದವು.

ವಿಧೇಯಕಗಳು ನೆನಗುದಿಗೆ : ಒಟ್ಟಾರೆ 2010-11ನೇ ಸಾಲಿನಲ್ಲಿ ಸಂಸತ್‌ನ ಉಭಯ ಸದನಗಳಲ್ಲೂ ಒಟ್ಟು 535 ಕೋಟಿ ರೂ.ವೆಚ್ಚವಾಗಿದೆ. ಸ್ಪೆಕ್ಟ್ರಂ ಹಗರಣದ ಆರ್ಭಟದಿಂದ ಕಾಶ್ಮೀರ ಸಮಸ್ಯೆ, ಆದರ್ಶ ಅವ್ಯವಹಾರ ಮೂಲೆಗುಂಪಾಗಿದೆ. ಮಹಿಳಾ ಮೀಸಲಾತಿ ವಿಧೇಯಕ 2008, ಭೂ ಕಬಳಿಕೆ ವಿಧೇಯಕ 2010, ಗಣಿ ಹಾಗೂ ಖನಿಜ ಕಾಯಿದೆ(ಅಭಿವೃದ್ಧಿ ಹಾಗೂ ನಿಯಂತ್ರಣ ತಿದ್ದುಪಡಿ) 2009,ಶಸ್ತ್ರಾಸ್ತ್ರ (ತಿದ್ದುಪಡಿ) ಕಾಯಿದೆ 2010ಗಳು ಹಲವಾರು ಮಹತ್ವದ ಮಸೂದೆಗಳು ಚರ್ಚೆಯಾಗದೆ ನೆನಗುದಿಗೆ ಬಿದ್ದಿವೆ.

English summary
Indian Parliament Winter Session washed out. with only 9 Hrs of productive session and nearly Rs.172 crore of the Indian tax payer"s money went down the drain. Govt refusal to agree opposition"s demand of JPC on 2G spectrum scandal continued over 22 days. Session also failed to pass bills including land acquisition bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X