ಜಿಪಂ ಚುನಾವಣೆ : ಜೆಡಿಎಸ್-ಕಾಂಗ್ರೆಸ್ ಮೈತ್ರಿ ಇಲ್ಲ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಜತೆಗೆ ಮೈತ್ರಿಯ ಪ್ರಶ್ನೆಯೇ ಇಲ್ಲ. ಎಲ್ಲ ಜಿಲ್ಲೆಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದರು. ರಾಜಕೀಯ ಪಕ್ಷವಾಗಿ ನೇರವಾಗಿ ಜನರ ಮುಂದೆ ಹೋಗುತ್ತೇವೆ. ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಜಾತ್ಯತೀತ ಮತ ವಿಭಜನೆಯಾಗಿ ಬಿಜೆಪಿಗೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವಿದೆ.
ಅಭಿವೃದ್ಧಿಯೇ ಮೂಲಮಂತ್ರ ಎಂದ ಬಿಜೆಪಿ ಸರಕಾರ ಎರಡೂವರೆ ವರ್ಷದಲ್ಲಿ ಏನೇನು ಮಾಡಿದೆ? ರಾಜ್ಯಕ್ಕೆಷ್ಟು ಅನುಕೂಲವಾಗಿದೆ? ವ್ಯಕ್ತಿಗತವಾಗಿ ಯಾರಿಗೆ ಪ್ರಯೋಜನವಾಗಿದೆ ? ಈ ಕುರಿತು ಈಗಾಗಲೇ ಅಂಕಿ ಅಂಶ ಹೊರಬಂದಿದೆ ಎಂದು ಗೌಡಲು ಲೇವಡಿ ಮಾಡಿದರು.
ಚುನಾವಣೆ ಫಲಿತಾಂಶವನ್ನು ಜನಪರ ಎಂದು ಭಾವಿಸಬೇಕಿಲ್ಲ. ಬಿಜೆಪಿಯವರು ಹಾಗೆಂದುಕೊಂಡರೆ ಅದು ತಪ್ಪು. ಸ್ಪೆಕ್ಟ್ರಂ ಹಗರಣದಿಂದ ರಾಜೀನಾಮೆ ನೀಡಿರುವ ಎ. ರಾಜಾ, ನಂತರ ಚುನಾವಣೆ ಯಲ್ಲಿ ಗೆದ್ದು ಬಂದರೆ ಅದನ್ನು ಜನಾದೇಶವೆಂದು ಒಪ್ಪಲಾಗದು. ಇದಕ್ಕೆ ಬಿಜೆಪಿಯ ವರಿಷ್ಠರು ಸಮ್ಮತಿಸಿದರೆ ನಾನೂ ಬಾಯಿ ಮುಚ್ಚಿಕೊಳ್ಳುತ್ತೇನೆ ಎಂದು ಹೇಳಿದರು.












Click it and Unblock the Notifications