ಭ್ರಷ್ಟಾಚಾರ ವಿರುದ್ಧ ಗುಪ್ತಚರ ಇಲಾಖೆ ವೆಬ್ ಸಮರ

ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಅಧಿಕಾರಿಯ ಪ್ರಕಾರ, ಸಿವಿಸಿ ಮತ್ತು ಭ್ರಷ್ಟ ಅಧಿಕಾರಿಗಳ ಕೈಗೆ ಸಿಕ್ಕು ನಲುಗುವ ಹಾಗೂ ಇಂತಹ ಅಕ್ರಮ ಚಟುವಟಿಕೆಗಳ ಮಾಹಿತಿ ನೀಡಬಯಸುವ ನಾಗರಿಕರ ನಡುವೆ ಇದು ಬಳಕೆದಾರ ಸ್ನೇಹಿ ವೇದಿಕೆಯನ್ನು ಒದಗಿಸಲಿದೆ.
ವೆಬ್‌ಸೈಟ್ ಉದ್ಘಾಟಿಸಿದ ಕೇಂದ್ರ ಜಾಗೃತ ಆಯುಕ್ತ ಪಿ.ಜೆ. ಥಾಮಸ್ ಅವರು, 'ದೂರುಗಳನ್ನು ದಾಖಲಿಸಲು ಸರಳವಾದ ಪ್ರಕ್ರಿಯೆ ಮತ್ತು ದೂರು ನೀಡುವವರ ಖಚಿತ ಗುರುತು ಒದಗಿಸುವುದು ಇದರ ವಿಶೇಷ ಅನುಕೂಲ ಎಂದರು. ಆಸಕ್ತರು ಈ ವೆಬ್‌ಸೈಟನ್ನು ಸಂಪರ್ಕಿಸಬಹುದು. ಅಥವಾ 92231 74440 ಗೆ ಮಾಹಿತಿ ನೀಡಿ ದೂರು ಸಲ್ಲಿಸಬಹುದು. VigEye ಸಾರ್ವಜನಿಕರಿಗೆ ಮುಕ್ತವಾಗಿರುವ ವೆಬ್ ತಾಣವಾಗಿದೆ.
ಆದರೆ, ಮಾಜಿ ಅಯುಕ್ತ ಎನ್ ವಿಠಲ್ ಪ್ರಕಾರ, ಈ ವೆಬ್ ತಾಣ ಒಂದು ಅಂಚೆಕಚೇರಿಯಂತೆ ಕಾರ್ಯ ನಿರ್ವಹಿಸುತ್ತದೆ. ಇಲ್ಲಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ದೃಶ್ಯ ಶ್ರವ್ಯ ಮಾಧ್ಯಮಗಳ ಮೂಲಕ ಸಲ್ಲಿಸಬಹುದು. ದೂರುಗಳ ಸಂಗ್ರಹಣೆ ಅಷ್ಟೇ ಸಿವಿಸಿ ಕೆಲಸವಾಗಬಾರದು, ಭ್ರಷ್ಟ ಜನಸೇವಕರನ್ನು ದಂಡಿಸುವ ಅಧಿಕಾರವೂ ಸಿಗಬೇಕು ಎಂದರು.












Click it and Unblock the Notifications