• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂಗೈಯಗಲದ ಕ್ಯಾಲೆಂಡರಲ್ಲಿ ಎಷ್ಟೊಂದು ಮಾಹಿತಿ!

By * ಕೆಆರ್ ಸೋಮನಾಥ್, ಶಿವಮೊಗ್ಗ
|
ಶಿವಮೊಗ್ಗ, ಡಿ. 10 : ಮಲೆನಾಡು ಸಿಂಹ ಪ್ರಕಾಶನ ಪ್ರತಿವರ್ಷದಂತೆ ಈ ವರ್ಷವೂ ಅಂಗೈಯಷ್ಟು ಪುಟ್ಟದಾದ 2011ರ ಅಂಗೈಯಗಲದ ಕ್ಯಾಲೆಂಡರ್ ಹೊರತಂದಿದೆ.

ಶುಕ್ರವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಲೆನಾಡು ಸಿಂಹ ಪ್ರಕಾಶನದ ಎಚ್.ಕೆ.ಸತ್ಯೇಂದ್ರ ಮಾತನಾಡಿ, ಕ್ಯಾಲೆಂಡರ್‌ನಲ್ಲಿ ಸುಮಾರು 2200ಕ್ಕೂ ಹೆಚ್ಚಿನ ದೂರವಾಣಿ ಸಂಖ್ಯೆಗಳು, ರಾಜ್ಯದ ಸುಮಾರು 150 ಪವಿತ್ರ ಯಾತ್ರಾಸ್ಥಳಗಳ ದೂರವಾಣಿ ಸಂಖ್ಯೆಗಳು, ಸರ್ಕಾರಿ ರಜಾದಿನಗಳ ಮಾಹಿತಿ, ರೈಲ್ವೇ ವೇಳಾಪಟ್ಟಿ, ರೈಲ್ವೇ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಸ್ಟ್ಯಾಂಡ್‌ನ ದೂರವಾಣಿ ಸಂಖ್ಯೆ, ಜಿಲ್ಲೆಯ ಸಂಸದರು, ಶಾಸಕರು, ಸಚಿವರ ದೂರವಾಣಿ, ನಗರಸಭಾ ಸದಸ್ಯರ ದೂರವಾಣಿ, ಪೊಲೀಸ್-ಅಗ್ನಿಶಾಮಕ ದಳ, ರೈಲ್ವೇ, ಬಸ್‌ನಿಲ್ದಾಣ, ಬ್ಲಡ್‌ಬ್ಯಾಂಕ್, ಗ್ಯಾಸ್, ಶವಸಾಗಿಸುವ ವಾಹನ, ತುರ್ತು ರಕ್ತಕ್ಕಾಗಿ ಟೆಲಿಫೋನ್ ನಂಬರ್ ಇನ್ನೂ ಮುಂತಾದ ಅಗತ್ಯ ಮಾಹಿತಿಗಳನ್ನು ಈ ಕ್ಯಾಲೆಂಡರ್ ಒಳಗೊಂಡಿದೆ ಎಂದರು.

ಹಾಗೆಯೇ, ಛಾಪಾಕಾಗದ ಸಿಗುವ ಸ್ಥಳ, ರಾಜ್ಯಸರ್ಕಾರದ ಎಲ್ಲಾ ಮಂತ್ರಿಗಳ ಮೊಬೈಲ್‌ನಂಬರ್, ಅಂಚೆ, ಮೆಸ್ಕಾಂ ದೂರವಾಣಿ, ಸರ್ಕಾರಿ ಕಛೇರಿ, ಖಾಸಗಿ ಸಂಘಸಂಸ್ಥೆಗಳ ದೂರವಾಣಿ, ಮಕ್ಕಳ ತುರ್ತು ಚಿಕಿತ್ಸಾ ಆಸ್ಪತ್ರೆಗಳ ದೂರವಾಣಿ, ಬ್ಯಾಂಕ್, ಸೊಸೈಟಿ, ಹೈಸ್ಕೂಲ್, ಕಾಲೇಜು ಸೇರಿದಂತೆ ಅಂಗೈಯಗಲ ಕ್ಯಾಲೆಂಡರ್‌ನಲ್ಲಿ ಅಡಗಿರುವ ಅಗತ್ಯ ಮಾಹಿತಿಗಳನ್ನು ಪ್ರಸ್ತುತಪಡಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಮಂಜುನಾಥ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘದ ಅಧ್ಯಕ್ಷ ಅಶ್ವಥ್‌ನಾರಾಯಣ ಶೆಟ್ಟಿ, ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ರಾಘವೇಂದ್ರ, ಸುಮತೀಂದ್ರ ಉಪಸ್ಥಿತರಿದ್ದರು.

ಅಂಗೈಯಗಲದ ಕ್ಯಾಲೆಂಡರ್ ಬೇಕಿದ್ದರೆ ಸಂಪರ್ಕಿಸಿ : 98442 63966

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Malenadu Simha publication in Shimoga has released a pocket calendar 2011. The calendar is rich in information. Public utility telephone numbers, about 150 temples-pilgrimage centers in the district and a host of other information. Worth keeping a Calendar for your home/office/school/college and especially for those who undertake travel in Shivamogga District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more